March 29, 2026

ಎ. ೪ ಮತ್ತು ೫ ರಂದು ರಾಯಲ್‌ಕೇರಿ ಶಾಲೆಯ  ಶತಮಾನೋತ್ಸವ

ಹೊನ್ನಾವರ : ತಾಲೂಕಿನಲ್ಲಿ ೧೨೫ ವರ್ಷಗಳ ಧೀರ್ಘಕಾಲ ಸಾವಿರಾರು ವಿಧ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಗುಣಗುಣಿ ಸರ್ಕಾರಿ ಕಿ.ಪ್ರಾ ಶಾಲೆ ರಾಯಲ್‌ಕೇರಿ ಶಾಲೆಯ ರಜತ ಶತಮಾನೋತ್ಸವವು ಎ. ೪ ಮತ್ತು ೫ ರಂದು ನಡೆಯಲಿದೆ ಎಂದು ಶಾಲೆಯ ರಜತ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ನೀಲಕಂಠ ನಾಯ್ಕ ತಿಳಿಸಿದರು.

ಅವರು  ಶಾಲಾ ಎಸ್.ಡಿ.ಎಂ.ಸಿ, ಹಳೆಯ ವಿಧ್ಯಾರ್ಥಿಗಳು, ಶಾಲಾ ಶಿಕ್ಷಕ ವೃಂದ ಹಾಗೂ ಊರಿನ ಪ್ರಮುಖರು ರಜತ ಶತಮಾನೋತ್ಸವದ ಕುರಿತು ಕರೆದ ಪತ್ರಿಕಾಗೋಷ್ಟಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿ ಮಾತನಾಡಿದರು. ೧೯೦೧ ರಲ್ಲಿ ದಿ. ರಾಮಚಂದ್ರ ಕಲ್ಯಾಣಪುರ ಅವರ ಅಧ್ಯಕ್ಷತೆಯ ಸ್ಕೂಲ್ ಬೋರ್ಡ್ ಅಡಿಯಲ್ಲಿ ಆರಂಭಗೊಂಡ ಶಾಲೆಯು ಈವರೆಗೆ ಸಾವಿರಾರು ವಿಧ್ಯಾರ್ಥಿಗಳಿಗೆ ಬದುಕಿನ ಮಾರ್ಗ ತೋರಿಸಿದೆ. ಅಂದಿನ ಶಿಕ್ಷಕರ ಶಿಸ್ತಿನ ಕಲಿಕಾ ವಿಧಾನದಿಂದಾಗಿ ಹಲವಾರು ವಿಧ್ಯಾರ್ಥಿಗಳು ವಿಧ್ಯಾರ್ಜನೆ ಮಾಡಿ ದೇಶ ವಿದೇಶದಲ್ಲಿ ಉನ್ನತ ಹುದ್ದೆಯನ್ನು ಪಡೆದುಕೊಂಡಿದ್ದಾರೆ. ಶಾಲಾ ಹಳೆಯ ವಿಧ್ಯಾರ್ಥಿಗಳು ಎಲ್ಲರೂ ಸೇರಿ ಶಾಲೆಯ ರಜತ ಶತಮಾನೋತ್ಸವವನ್ನು ಅದ್ದೂರಿಯಿಂದ ಆಚರಿಸುತ್ತಿದ್ದೇವೆ ಎಂದರು.

ಎ.೪ ರಂದು ಶನಿವಾರ ೪ ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳು ಎಸ್. ವೈದ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹಸ್ತ ಪತ್ರಿಕೆ ಮತ್ತು ಶಾಲಾ ದ್ವಾರಾ ಮಂಟಪ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ದಿನಕರ ಶೆಟ್ಟಿ ವಹಿಸಲಿದ್ದಾರೆ.

ಸಮಾರೋಪ ಸಮಾರಂಭವು ರವಿವಾರ ಎ.೫ ರಂದು ಬೆಳಿಗ್ಗೆ ೧೧ ಗಂಟೆಗೆ ಶಾರದಾ ಪೂಜೆಯೊಂದಿಗೆ ಆರಂಭವಾಗಲಿದೆ. ಮಧ್ಯಾಹ್ನ ೧ ಗಂಟೆಗೆ ಪ್ರಸಾದ ಭೋಜನ ಹಾಗೂ ಸಾಯಂಕಾಲ ೪ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.

ಕಾರ್ಯಕ್ರಮದ ಸಮಾರೋಪ ನುಡಿಯನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಜೆ. ಕೈರನ್ ನುಡಿಯಲಿದ್ದಾರೆ, ಅಧ್ಯಕ್ಷತೆಯನ್ನು ರಜತ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ನೀಲಕಂಠ ಎಂ. ನಾಯ್ಕ ವಹಿಸಲಿದ್ದಾರೆ. ಅತಿಥಿಗಳಾಗಿ ಸಮಿತಿಯ ಗೌರವಾಧ್ಯಕ್ಷ ದೇವಿದಾಸ ಮಡಿವಾಳ, ಡಾ. ಇಸ್ಮಾಯಿಲ್ ತಲ್ಕಣಿ, ಲಯನ್ಸ್ ಕ್ಲಬ್ ಅಧ್ಯಕ್ಷ ಜೀವೋತ್ತಮ ನಾಯಕ, ರೊಟರಿ ಕ್ಲಬ್ ಅಧ್ಯಕ್ಷ ಡಾ. ರಾಜು ಮಾಳಗಿಮನೆ ಉಪಸ್ಥಿತರಿರಲಿದ್ದಾರೆ. ರಾತ್ರಿ ೯.೩೦ ಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.

ಮಹೇಶ ಕಲ್ಯಾಣಪುರ ಮಾತನಾಡಿ,ಈ ಶಾಲೆ ಹಲವಾರು ಕುಟುಂಬಗಳಿಗೆ ದಾರಿದೀಪವಾಗಿದೆ.ಕೇವಲ ರಜತ ಶತಮಾನೋತ್ಸವ ಆಚರಣೆಗ ಸಿಮೀತವಾಗದೆ ಶಾಲೆಯ ಸರ್ವತೋಮುಖ ಅಭಿವೃದ್ದಿ ನಡೆಸಲಾಗುತ್ತಿದೆ.ಈಗಾಗಲೇ ಶಾಲೆಯ ಮೆಲ್ಛಾವಣಿ ದುರಸ್ಥಿ ಹಾಗೂ ಇನ್ನಿತರ ಅತ್ಯವಶ್ಯಕ ಅಭಿವೃದ್ದಿ ಕೆಲಸ ಮಾಡಲಾಗುತ್ತಿದೆ.ಶಾಸಕ ದಿನಕರ ಶೆಟ್ಟಿಯವರು ಎರಡುವರೆ ಲಕ್ಷ ಶಾಲಾಭಿವೃದ್ದಿಗಾಗಿ ಅನುದಾನ ನೀಡಿದ್ದಾರೆ.ಈಗಾಗಲೇ ಸ್ಮಾರ್ಟಕ್ಲಾಸ್ ಇದ್ದು,ವಿದ್ಯಾರ್ಥಿಗಳ ಸಂಖ್ಯೆ ಇನ್ನಷ್ಟು ಹೆಚ್ಚಿಸುವ ಪ್ರಯತ್ನ ನಡೆಸುತ್ತೇವೆ ಎಂದರು.

ಶಾಲಾ ಮುಖ್ಯ ಶಿಕ್ಷಕಿ ಮಮತಾ ಪಟಗಾರ ಮಾತನಾಡಿ,ಶಾಲೆಯ ಕಾರ್ಯಕ್ರಮಕ್ಕಾಗಿ ಸಭೆ ಕರೆದಾಗ ಎಲ್ಲಾ ಪೂರ್ವವಿಧ್ಯಾರ್ಥಿಗಳು,ಶಿಕ್ಷಣಾಭಿಮಾನಿಗಳು ಒಂದಾಗಿ ಶಾಲೆಯ ಭೌತಿಕ ಅಭಿವೃದ್ದಿಗೆ ಸಹಕರಿಸಿದ್ದಾರೆ ಎಂದರು.
ಪ್ರತಿಕಾಗೋಷ್ಟಿಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷೆ ಪದ್ಮಾವತಿ ನಾಯ್ಕ, ಶಿಕ್ಷಕಿ ಸುನಿತಾ ಭಟ್,ಸಮಿತಿಯ ಗೌರವಾಧ್ಯಕ್ಷ ಡಿ.ಡಿ ಮಡಿವಾಳ,ಮೋಹನ  ನಾಯ್ಕ,ಕುಮಾರ ನಾಯ್ಕ, ರವಿ ಎಲ್ ನಾಯ್ಕ, ಸುರೇಶ ಮೊಗೇರ, ರಾಘವೇಂದ್ರ ಹೊನ್ನಾವರ, ರತ್ನಾಕರ, ಶ್ರೀಪಾದ ನಾಯ್ಕ, ವೈ ದಿವಾಕರ, ಪ್ರಭಾಕರ ಮಾಸ್ತಿಕಟ್ಟೆ, ಬೀರುಗೌಡ, ರಾಜೇಶ್ ನಾಯ್ಕ ಹಾಗೂ ಇತರರು ಉಪಸ್ಥಿತರಿದ್ದರು.

ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ

About The Author

error: Content is protected !!