ಹೊನ್ನಾವರ: ಹೆಲ್ತ ಪಸ್ಟ ಡಯಾಗ್ನೊಸ್ಟಿಕ್ ಹೊನ್ನಾವರ ಇವರ ಪ್ರಾಯೋಜಕತ್ವದ ಉತ್ತಮ ಆರೋಗ್ಯ ಸುಸ್ಥಿರ ಸಂಪತ್ತು ಆರೋಗ್ಯ ಮತ್ತು ಹೂಡಿಕೆ ಜಾಗೃತಿ ಕಾರ್ಯಕ್ರಮ ಮಾರ್ಚ್ 29 ರಂದು ನಾಮಧಾರಿಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಡಾ. ಪ್ರಕಾಶ್ ನಾಯ್ಕ ತಿಳಿಸಿದರು.




ಪಟ್ಟಣದ ನಾಮಧಾರಿ ವಿದ್ಯಾರ್ಥಿ ನಿಲಯದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 9 ಗಂಟೆಯಿAದ ಕಾರ್ಯಕ್ರಮ ಆರಂಭವಾಗಲಿದ್ದು, ಸಾರ್ವಜನಿಕರಿಗೆ ಉಚಿತವಾಗಿ ರಕ್ತ ತಪಾಸಣೆ, ಮಧುಮೇಹ, ಥೈರಾಯ್ಡ್ ಹಾಗೂ ಎಲುಬಿನ ಸಾಂದ್ರತೆ ಪರೀಕ್ಷೆಗಳನ್ನು ನಡೆಸಲಾಗುವುದು. ಕಾಯಿಲೆ ಪತ್ತೆಯಾದವರಿಗೆ ಸೂಕ್ತ ಚಿಕಿತ್ಸೆಯ ಮಾರ್ಗದರ್ಶನ ನೀಡಲಾಗುವುದು ಎಂದರು.




ಉತ್ತಮ ಆರೋಗ್ಯವೇ ಅತಿದೊಡ್ಡ ಸಂಪತ್ತು. ರೋಗಗಳು ಉಲ್ಬಣಿಸುವ ಮುನ್ನವೇ ಪತ್ತೆಹಚ್ಚುವುದು ಇಂದಿನ ಅಗತ್ಯ. ಇದರ ಜೊತೆಗೆ ಕಷ್ಟಪಟ್ಟು ದುಡಿದ ಹಣವನ್ನು ಹೇಗೆ ಉಳಿಸಬೇಕು ಮತ್ತು ಎಲ್ಲಿ ಹೂಡಿಕೆ ಮಾಡಬೇಕು ಎನ್ನುವ ಕುರಿತು ಜನರಲ್ಲಿ ಅರಿವು ಮೂಡಿಸಲು ‘ಹೂಡಿಕೆ ಜಾಗೃತಿ ಶಿಬಿರ’ವನ್ನೂ ಆಯೋಜಿಸಲಾಗಿದೆ ಎಂದರು




ನ್ಯಾಯವಾದಿ ವಿಕ್ರಮ ನಾಯ್ಕ ಮಾತನಾಡಿ, ಗ್ರಾಮೀಣ ಭಾಗದ ಆರ್ಥಿಕವಾಗಿ ಹಿಂದುಳಿದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ವಿಶೇಷವಾಗಿ ‘ಆರೋಗ್ಯ ಕಾರ್ಡ್’ ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು, ಕೇವಲ 500 ರೂ. ನೀಡಿ ನೋಂದಣಿ ಮಾಡಿಕೊಂಡರೆ ವರ್ಷವಿಡೀ ಸುಮಾರು 10 ಸಾವಿರ ರೂಪಾಯಿವರೆಗಿನ ಚಿಕಿತ್ಸಾ ಸೌಲಭ್ಯವನ್ನು ಉಚಿತವಾಗಿ ಪಡೆಯಬಹುದಾಗಿದೆ ಎಂದರು.
ಖ್ಯಾತ ನ್ಯಾಯವಾದಿ ಅಂಕೋಲದ ನಾಗರಾಜ ನಾಯಕ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಗೇರುಸೊಪ್ಪ ಮುಖ್ಯಪ್ರಾಣ ದೇವಸ್ಥಾನದ ಅರ್ಚಕರಾದ ಸೂರಾಲು ಚಂದ್ರಶೇಖರ ಭಟ್ಟರವರು ಆರೋಗ್ಯ ಕಾರ್ಡ್ ಬಿಡುಗಡೆಗೊಳಿಸಲಿದ್ದಾರೆ. ಸ್ಥಳೀಯರು ಈ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಎಂದು ಮನವಿ ಮಾಡಿದರು.
ಕರವೇ ತಾಲೂಕಾ ಅಧ್ಯಕ್ಷ ಮಂಜುನಾಥ ಗೌಡ ಮಾತನಾಡಿ ಡಾ. ಪ್ರಕಾಶ ನಾಯ್ಕ ಮತ್ತು ನ್ಯಾಯವಾದಿ ವಿಕ್ರಂ ನಾಯ್ಕರವರು ಸಮಾಜದ ಚಿಂತನೆ ಇಟ್ಟುಕೊಂಡು, ಯುವ ಸಮುದಾಯಕ್ಕೆ ಉಪಯೋಗ ಆಗುವ ನಿಟ್ಟಿನಲ್ಲಿ ಆರೋಗ್ಯ ಶಿಬಿರ ಇಟ್ಟುಕೊಂಡಿದ್ದಾರೆ. ಇಲ್ಲಿ ಒಂದು ಒಳ್ಳೆ ಆಸ್ಪತ್ರೆ ಇಲ್ಲ. ಉತ್ತಮ ಚಿಕಿತ್ಸೆ ಬೇಕು ಎಂದರೆ ಬೇರೆಕಡೆ ಹೋಗಬೇಕು. ಇಂತಹ ಕಾರ್ಯಾಗಾರ ತುಂಬಾ ಉಪಯುಕ್ತವಾಗಿದ್ದು. ಇನ್ನೂ ಹೂಡಿಕೆ ಬಗ್ಗೆ ಮಾಹಿತಿ ನೀಡುವುದು ಕಾರ್ಯಾಗಾರ ಉತ್ತಮ ಕಾರ್ಯಕ್ರಮ ಆಗಿದೆ. ಜನರು ಇದರ ಪ್ರಯೋಜನ ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಜಿ. ನಾಯ್ಕ, ದೇವರಾಜ ಅರಸು ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ, ನಿವೃತ ಉಪನ್ಯಾಸಕ ಜಿ. ಪಿ. ಪಾಟಣಕರ, ತಂಜಿಮ್ ಅಧ್ಯಕ್ಷ ಮಹಮ್ಮದ್ ಅಲಿ, ಉದ್ಯಮಿ ಲುಕಾಶ್ ಪರ್ನಾಂಡಿಸ್, ನಾರಾಯಣ ಗುರು ವೇದಿಕೆ ಅಧ್ಯಕ್ಷ ಧನಂಜಯ ನಾಯ್ಕ, ಜಗದೀಶ ನಾಯ್ಕ ಕರ್ಕಿ, ಹರಿಶ್ಚಂದ್ರ ನಾಯ್ಕ ಮಾವಿನಕುರ್ವಾ, ಎಸ್.ವಿ.ನಾಯ್ಕ, ಪ್ರದೀಪ ಹುಡಗೋಡ ರಾಘವೇಂದ್ರ ನಾಯ್ಕ ಇನ್ನಿತರ ಇದ್ದರು.
ವರದಿ ವಿಶ್ವನಾಥ ಸಾಲ್ಕೋಡ್ ಹೊನ್ನಾವರ

More Stories
ಶರಾವತಿ ಆರತಿ ಉತ್ಸವ ಸಮಿತಿಯವರು ಹೊನ್ನಾವರ ಬಂದರು ಪ್ರದೇಶದಲ್ಲಿ ಆಯೋಜಿಸಿದ ಶರಾವತಿ ಆರತಿ ಕಾರ್ಯಕ್ರಮ
ಅಪ್ಸರಕೊಂಡ ಕಡಲತೀರದಲ್ಲಿ ಮೃತ ಕಡಲಾಮೆಯ ದೇಹ ಪತ್ತೆ
ನೈಜ ಒತ್ತುವರಿಗಳನ್ನು ಸಕ್ರಮ ಪಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಚ್ಛಾಶಕ್ತಿ ತೋರಬೇಕು ಚಂದ್ರಕಾಂತ ಕೊಚರೇಕರ ಆಗ್ರಹ