March 29, 2026

ಮುಂಡಗೋಡದಲ್ಲಿ ಪ್ರದರ್ಶನಗೊಳ್ಳಲಿರುವ ಅಪರೂಪದ ಯಕ್ಷಗಾನ


ಮುಂಡಗೋಡ : ಕರಾವಳಿಯ ಗಂಡುಮೆಟ್ಟಿನ ಕಲೆಯೆಂದು ಜನಜನಿತವಾದ ಯಕ್ಷಗಾನವು ಮೂರುವರೆ ದಶಕಗಳ ನಂತರದಲ್ಲಿ ಬಯಲುಸೀಮೆಯ ಮುಂಡಗೋಡದ ನೆಲದಲ್ಲಿ ಕಳೆದ ವರ್ಷವಷ್ಟೇ ಕುಂದ ಯಕ್ಷ ಸಾಂಸ್ಕೃತಿಕ ವೇದಿಕೆಯ ಸಂಘಟನೆಯಲ್ಲಿ ದೇವಿಮಾತ್ಮೆ ಬಯಲಾಟವು ಪ್ರದರ್ಶನಗೊಂಡು ಬಹುಜನರ ಮೆಚ್ಚುಗೆಗೆ ಪಾತ್ರವಾಗಿ, ಮತ್ತೆ ಈ ವರ್ಷವೂ ಅದೇ ಸಂಘಟನೆಯಿಂದ ” ಕವಿರತ್ನ ಕಾಳಿದಾಸ ” ಹಾಗೂ ” ಮಾರುತಿ ಪ್ರತಾಪ ” – ಎಂಬ ಆಖ್ಯಾನಗಳು ಪ್ರದರ್ಶಿತವಾಗಲು ವೇದಿಕೆಯು ಸಜ್ಜುಗೊಂಡಿದೆ.


ಜೂನಿಯರ್ ಕಾಳಿಂಗ ನಾವುಡ ಖ್ಯಾತಿಯ “ನವಗಾನ ಸಾಮ್ರಾಟ” ಜನ್ಸಾಲೆ ರಾಘವೇಂದ್ರ ಆಚಾರ್ಯ ಗಾನ ಸಾರಥ್ಯದ ಗಜಗಟ್ಟಿ ಪೆರ್ಡೂರು ಮೇಳದಿಂದ ಏಪ್ರಿಲ್ 1ರ ಬುಧವಾರದಂದು ಇಳಿಹೊತ್ತು 5 : 00 ಗಂಟೆಯಿಂದ ನಗರದ ಬಸವನ ಬೀದಿಯ ಶ್ರೀ ಬಸವಣ್ಣ ಮತ್ತು ಶ್ರೀ ವೀರಭದ್ರ ದೇವಾಲಯದ ಆವರಣದಲ್ಲಿ ಈ ಯಕ್ಷಗಾನ ಕಾರ್ಯಕ್ರಮವು ನಡೆಯಲಿದೆ.

ಪ್ರದರ್ಶನವು ಉಚಿತವಾಗಿದ್ದು, ಯಾವುದೇ ಟಿಕೆಟ್ ಗಳಿರುವುದಿಲ್ಲ. ಕಲಾಭಿಮಾನಿಗಳು ಬಹುಸಂಖ್ಯೆಯಲ್ಲಿ ಪಾಲ್ಗೊಂಡು, ಕಲೆಯನ್ನು – ಕಲಾವಿದರನ್ನು ಪ್ರೋತ್ಸಾಹಿಸಬೇಕೆಂಬುದು ಸಂಘಟಕರ ಒತ್ತಾಸೆಯಾಗಿದೆ.

About The Author

error: Content is protected !!