ಭಟ್ಕಳ : ಪ್ರತಿಷ್ಠಿತ ಐ ಸಿ ಎಸ್ ಇ ಪಠ್ಯಕ್ರಮದ ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ದಿನಾಂಕ 30/03/2026 ರಂದು ಮಕ್ಕಳಿಂದ ಆಯೋಜನೆಗೊಂಡಿದ್ದ ಮಕ್ಕಳ ಸಂತೆ ಮತ್ತು ವಿಜ್ಞಾನ ವಸ್ತು ಪ್ರದರ್ಶನವು ಅಪಾರ ಜನಮೆಚ್ಚುಗೆಗೆ ಪಾತ್ರವಾಯಿತು.

ಪರೀಕ್ಷೆಯನ್ನು ಮುಗಿಸಿದ ಮಕ್ಕಳಿಗೆ ಸೃಜನಾತ್ಮಕತೆ ಮತ್ತು ವ್ಯವಹಾರ ಕೌಶಲ್ಯವನ್ನು ವೃಧ್ಧಿಸಲು ಶಾಲೆಯು ಈ ಮೇಳವನ್ನು ಏರ್ಪಾಡು ಮಾಡಿತ್ತು.5 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಂದ ವಿವಿಧ ಮಾಧರಿಯ ವಿಜ್ಞಾನ ವಸ್ತು ಪ್ರದರ್ಶನವನ್ನು ಹಾಗೂ 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಂದ ಮಕ್ಕಳ ಸಂತೆಯನ್ನು ಆಯೋಜಿಸಲಾಗಿತ್ತು.ತರಕಾರಿ,ದಿನಸಿ,ಹಣ್ಣು ಹಂಪಲು ,ಬೇಕರಿ,ತಂಪು ಪಾನೀಯ,ಐಸ್ಕಿçÃಮ್ ಅಂಗಡಿಗಳ ಜೊತೆಜೊತೆಗೆ ಇದೇ ಮೊದಲ ಬಾರಿಗೆ ಸಿರಿ ಧಾನ್ಯ ಉತ್ಪನ್ನಗಳ ಅಂಗಡಿ ಹಾಗೂ ಎಲ್ಲಾ ದಿನಪತ್ರಿಕೆಗಳನ್ನು ಒಂದೇ ಸೂರಿನಡಿ ಮಾರಾಟ ಮಾಡುವ ಪರಿಕಲ್ಪನೆಯನ್ನು ತಾಲೂಕಿನಲ್ಲಿಯೇ ಮೊದಲ ಪ್ರಯತ್ನ ಎಂಬAತೆ ಏರ್ಪಡಿಸಲಾಗಿತ್ತು.ಭಟ್ಕಳ ಎಜ್ಯಕೇಶನ ಟ್ರಸ್ಟ ನ ಅಧ್ಯಕ್ಷರಾದ ಡಾ.ಸುರೇಶ ನಾಯಕ ಅವರು ಮೇಳವನ್ನು ಉಧ್ಘಾಟಿಸಿ ಶುಭಹಾರೈಸಿದರು.
1000 ಕ್ಕೂ ಅಧಿಕ ಜನರು ಈ ಮಕ್ಕಳ ಸಂತೆ ಹಾಗೂ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.ಮಕ್ಕಳ ಉತ್ಸಾಹಕ್ಕೆ ಹಾಗೂ ಪಾಲಕರ, ಸಾರ್ವಜನಿಕರ ಬೆಂಬಲಕ್ಕೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂಧ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.


More Stories
ಹೆದ್ದಾರಿ ಅಪಘಾತಕ್ಕೆ ಸ್ಕೂಟಿ ಸವಾರ ಬಲಿ: ಅವೈಜ್ಞಾನಿಕ ವಿನ್ಯಾಸ ಆರೋಪಿಸಿ ಭಟ್ಕಳದಲ್ಲಿ ಸಾರ್ವಜನಿಕರ ಆಕ್ರೋಶ, ಪ್ರತಿಭಟನೆ
ಲಂಡನ್ನಲ್ಲಿ ‘ಅಡ್ವಾನ್ಸ್ಡ್ ನಾಟಿಕಲ್ ಸೈನ್ಸ್’ ಕೋರ್ಸ್ ಯಶಸ್ವಿಯಾಗಿ ಪೂರ್ಣಗೊಳಿಸಿದ ಭಟ್ಕಳದ ಹೆಮ್ಮೆಯ ಯುವಕ ಪ್ರಜ್ವಲ್ ನಾಯ್ಕ
ಬೈಲೂರು ಕ್ಲಸ್ಟರ್ನ ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಮುಂಬೈನ ಅನಿರುದ್ಧ ಬಾಪು ಟ್ರಸ್ಟ್ನಿಂದ ಉಚಿತ ನೋಟ್ಬುಕ್ ವಿತರಣೆ