ಹೊನ್ನಾವರ, ಮಾ. 31: ತಾಲೂಕಿನ ಬಂಗಾರಮಕ್ಕಿಯ ಶ್ರೀವೀರಾಂಜನೇಯ ಕ್ಷೇತ್ರದಲ್ಲಿ ಏಪ್ರಿಲ್ 1 ಮತ್ತು 2ರಂದು ಶ್ರೀವೀರಾಂಜನೇಯ ದೇವರ ಪುಷ್ಪರಥೋತ್ಸವ ಹಾಗೂ ಬ್ರಹ್ಮರಥೋತ್ಸವ ನಡೆಯಲಿದೆ.
ಮಾರ್ಚ್ 27ರಿಂದ ನಡೆಯುತ್ತಿರುವ ‘ಸಂಸ್ಕೃತಿ ಕುಂಭ – ಮಲೆನಾಡ ಉತ್ಸವ 2026ರ ಅಂತಿಮ ಘಟ್ಟವಾಗಿ ಭವ್ಯ ರಥೋತ್ಸವ ನಡೆಯಲಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೆರೆಯುವ ನಿರೀಕ್ಷೆ ಇದೆ ಎಂದು ಶ್ರೀಕ್ಷೇತ್ರ ಬಂಗಾರಮಕ್ಕಿಯ ಪ್ರಕಟಣೆ ತಿಳಿಸಿದೆ.
ಅಲ್ಲದೆ ಏಪ್ರಿಲ್ 1 ರಂದು, ಬೆಳಗ್ಗೆ 9:30ಕ್ಕೆ ಪ್ರಾಚೀನ ಆರೋಗ್ಯ ಪರಂಪರಾ ವೈದ್ಯ ಸಂಗಮ ನಡೆಯಲಿದ್ದು 200ಕ್ಕೂ ಹೆಚ್ಚು ವಿವಿಧ ಪದ್ಧತಿಗಳ ವೈದ್ಯ ಪರಿಣಿತರು ಆಗಮಿಸಲಿದ್ದಾರೆ.
ಏಪ್ರಿಲ್ 1ರಂದು ಮಧ್ಯಾಹ್ನ 2 ಗಂಟೆಗೆ ರೈತೋತ್ಸವ ಕಾರ್ಯಕ್ರಮ ನಡೆಯಲಿದ್ದು, ಕೃಷಿ, ತೋಟಗಾರಿಕೆ ಬೆಳೆಗಳು, ಫಲಪುಷ್ಪ ಹಾಗೂ ಸಾವಯವ ಕೃಷಿ ಪದಾರ್ಥಗಳ ಪ್ರದರ್ಶನ ನಡೆಯಲಿದೆ. ಜೊತೆಗೆ ರೈತರಿಗೆ ಉಪಯುಕ್ತ ಮಾಹಿತಿ ನೀಡುವ ವಿಚಾರ ಗೋಷ್ಠಿ ಆಯೋಜಿಸಲಾಗಿದೆ.
ಏಪ್ರಿಲ್ 1ರಂದು, ಬೆಳಗ್ಗೆ 5:30ಕ್ಕೆ ಪೂಜಾ ಕಾರ್ಯಕ್ರಮಗಳು ಆರಂಭವಾಗಲಿದ್ದು, ದೇವಸ್ಥಾನ ಹಾಗೂ ಯಾಗಶಾಲೆಯಲ್ಲಿ ಪೂಜೆಗಳು ಜರುಗಲಿವೆ. ಸಂಜೆ 5ಗಂಟೆಗೆ ಪುಷ್ಪರಥೋತ್ಸವ ಮತ್ತು ತೊಟ್ಟಿಲೋತ್ಸವ ನೆರವೇರಲಿದೆ.
ಏಪ್ರಿಲ್ 2ರಂದು ಮಧ್ಯಾಹ್ನ 2ಗಂಟೆಗೆ ರಥೋತ್ಸವ ನಡೆಯಲಿದೆ. ಸಂಜೆ 5.30ಕ್ಕೆ ಸಭಾ ಭವನದಲ್ಲಿ ಸೀತಾ ಕಲ್ಯಾಣೋತ್ಸವ ಹಾಗೂ ಶ್ರೀರಾಮ ಪಟ್ಟಾಭಿಷೇಕ ನಡೆಯಲಿದೆ.
ಏಪ್ರಿಲ್ 2ರಂದು ಬೆಳಗ್ಗೆ 9:30ಕ್ಕೆ ಬೃಹತ್ ಆರೋಗ್ಯ ತಪಸಾಣಾ ಶಿಬಿರ ನಡೆಯಲಿದ್ದು, ದಾವಣಗೆರೆಯ ಎಸ್ ಎಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ 30ಕ್ಕೂ ಹೆಚ್ಚು ವೈದ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ.

More Stories
ಒಗ್ಗಟ್ಟು ಮೀನುಗಾರರ ಅಸ್ತಿತ್ವದ ಪ್ರಶ್ನೆ: ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿ
‘ಸಂಸ್ಕೃತಿ ಕುಂಭ – ಮಲೆನಾಡ ಉತ್ಸವ 2026’
‘ಸಂಸ್ಕೃತಿ ಕುಂಭ – ಮಲೆನಾಡ ಉತ್ಸವ – 2026’