ಮಠಾಧೀಶರಿಂದ ಆಡಳಿತ ಸರಿಪಡಿಸುವ ಕೆಲಸವಾಗಲಿ: ಮಹಿಮಾ ಪಟೇಲ್
ಹೊನ್ನಾವರ: ನಮ್ಮ ಆಡಳಿತ ವ್ಯವಸ್ಥೆಯನ್ನು ಸರಿಮಾಡುವ, ಸರಳವನ್ನಾಗಿಸುವ ಕೆಲಸಕ್ಕೆ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿ ನೇತೃತ್ವ ನೀಡಬೇಕು ಎಂದು ಮಾಜಿ ಶಾಸಕ ಮಹಿಮಾ ಪಾಟೇಲ್ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪದಲ್ಲಿರುವ ಶ್ರೀ ಕ್ಷೇತ್ರ ಬಂಗಾರಮಕ್ಕಿ ಶ್ರೀ ವೀರಾಂಜನೇಯ ದೇವಸ್ಥಾನದಿಂದ ನಡೆಯುತ್ತಿರುವ ‘ಸಂಸ್ಕೃತಿ ಕುಂಭ – ಮಲೆನಾಡ ಉತ್ಸವ – 2026’ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಆಡಳಿತ ವ್ಯವಸ್ಥೆಯನ್ನು ಸರಿಮಾಡುವ ಕೆಲಸ ತುರ್ತಾಗಿ ಆಗಬೇಕಿದೆ. ಇದು ಮಠಾಧೀಶರಿಂದ ಮಾತ್ರ ಸಾಧ್ಯ. ಮಾರುತಿ ಗುರೂಜಿ ಅವರ ಬದ್ಧತೆ, ಆಸಕ್ತಿ ನಾನು ಹತ್ತಿರದಿಂದ ಬಲ್ಲೆ. ಆಡಳಿತ ವ್ಯವಸ್ಥೆಯನ್ನು ಸರಿಪಡಿಸಲು ಮಠಾಧೀಶರಿಗೆ ಮಾರುತಿ ಗುರೂಜಿ ನೇತೃತ್ವ ನೀಡಬೇಕು. ಆ ಬಗೆಗೆ ಮಾರುತಿ ಗುರೂಜಿ ಚಿಂತನೆ ನಡೆಸಬೇಕು ಎಂದು ಅವರು ಮನವಿ ಮಾಡಿದರು.
ಆಡಳಿತ ಮತ್ತು ವಿರೋಧ ಪಕ್ಷಗಳು ಟೀಕೆ, ವಿರೋಧ ಮಾಡುವುದೊಂದೇ ರಾಜಕಾರಣವಲ್ಲ. ಪಕ್ಷಗಳ ಅಭಿಪ್ರಾಯ, ಆಶಯಗಳು ಬೇರೆ ಬೇರೆ ಆಗಿದ್ದರೂ ಗುರಿ ಒಂದೇ ಆಗಿರಬೇಕು. ಎಲ್ಲರ ಒಳಿತು ಬಯಸುವುದು ಪಕ್ಷಗಳ ಮುಖ್ಯ ಗುರಿಯಾಗಬೇಕು ಎಂದು ಅವರು ಹೇಳಿದರು.
ಪಶ್ಚಮ ಘಟದಲ್ಲಿ ಹುಟ್ಟಿ ಪೂರ್ವಾಭಿಮುಖವಾಗಿ ಹರಿಯುವ ನದಿಗಳಿಂದ ಬಯಲುಸೀಮೆಯ ಜನರು ಬದುಕು ಕಟ್ಟಿಕೊಂಡಿದ್ದಾರೆ. ಪಶ್ಚಿಮ ಘಟ್ಟ ನಾಶವಾದರೆ ನದಿ ಮೂಲಗಳು ಕೂಡಾ ನಾಶವಾಗಲಿದೆ. ನದಿಗಳ ಉಗಮ ಸ್ಥಾನವನ್ನು ರಕ್ಷಿಸದಿದ್ದರೆ ರಾಜ್ಯದ ಜನತೆ ಸಂಪೂರ್ಣವಾಗಿ ನಾಶವಾಗಲಿದ್ದಾರೆ. ಪಶ್ಚಿಮ ಘಟ್ಟಕ್ಕೆ ಯಾವುದೇ ಹಾನಿ ಸಂಭವಿಸಿದರೆ ರಾಜ್ಯದ ಪ್ರತಿಯೊಬ್ಬರ ಮೇಲಾಗುವ ಹಾನಿಯಾಗಿದೆ ಎಂದು ಅವರು ಎಚ್ಚರಿಸಿದರು.
ನಾಡಿನ ಪ್ರಕೃತಿ, ಪರಂಪರೆ, ಸಂಸ್ಕೃತಿಯ ಉಳಿಯುವಿಗಾಗಿ ಕಟಿಬದ್ಧರಾಗಿ ನಿಂತಿರುವ ಶ್ರೀ ಕ್ಷೇತ್ರ ಬಂಗಾರಮಕ್ಕಿ ಮತ್ತು ಕ್ಷೇತ್ರದ ಧರ್ಮಾಧಿಕಾರಿ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿ ಮಲೆನಾಡು ಮತ್ತು ಬಯಲು ಸೀಮೆ ಜನರ ಆಶಾದಾಯಕ ಬೆಳಕಾಗಿದ್ದಾರೆ. ಅವರ ಜೊತೆ ನಾವೆಲ್ಲರೂ ಜೊತೆಯಾಗಿ ನಿಲ್ಲಬೇಕಾಗಿದೆ ಎಂದು ಅವರು ಕರೆ ನೀಡಿದರು.
ನಾವು ನಮಗಾಗಿ ಬದುಕಿದರೆ ಸಣ್ಣ ಮಟ್ಟದ ಜೀವನ ವಾಗಲಿದೆ. ನಾವು ನಮಗಾಗಿ ಜೊತೆಗೆ ಇತರರಿಗಾಗಿ ಬದುಕಿದರೆ ನಮ್ಮದು ದೊಡ್ಡ ಮಟ್ಟದ ಜೀವನ ಆಗಲಿದೆ. ಮಾರುತಿ ಗುರೂಜಿ ಅವರು ಈ ನಾಡಿನ ಪ್ರಕೃತಿ ಸಂಪತ್ತು, ಸಂಸ್ಕೃತಿಯ ಪರಂಪರೆ ಉಳಿಯುವಿಗಾಗಿ ಜೀವನ ನಡೆಸುವ ಮೂಲಕ ಅವರದ್ದು ಬಹುದೊಡ್ಡ ಬದುಕಾಗಿದೆ ಎಂದು ಅವರು ವಿವರಿಸಿದರು.
ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿ ಅಧ್ಯಕ್ಷತೆ ಮತ್ತು ದಿವ್ಯ ಸಾನಿಧ್ಯ ವಹಿಸಿ ಉಪದೇಶ ನೀಡಿದರು. ಸಾಹಿತಿ ಸಿದ್ದು ಯಾಪಲಪರವಿ ಗದಗ ಉಸ್ಥಿತರಿದ್ದರು. ನೂರ್ ಅಹ್ಮದ್ ಸ್ವಾಗತಿಸಿದರು. ಶೈಲೇಶ್, ಭಾರತಿ ಮತ್ತು ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.

More Stories
ಒಗ್ಗಟ್ಟು ಮೀನುಗಾರರ ಅಸ್ತಿತ್ವದ ಪ್ರಶ್ನೆ: ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿ
ಏಪ್ರಿಲ್ 1, 2ರಂದು ಬಂಗಾರಮಕ್ಕಿಯಲ್ಲಿ ರಥೋತ್ಸವ
‘ಸಂಸ್ಕೃತಿ ಕುಂಭ – ಮಲೆನಾಡ ಉತ್ಸವ – 2026’