ಹೊನ್ನಾವರ: ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತಾವು ಇತರರಿಗೆ ಮಾದರಿಯಾಗಿ, ಸಂಸ್ಕಾರಯುತ ಶಿಕ್ಷಣಕ್ಕೆ ಆದ್ಯತೆ ನೀಡುವ ಎಲ್ಲ ಶಿಕ್ಷಕರನ್ನು ಸಮಾಜ ಸದಾ ಗೌರವಿಸುತ್ತದೆ ಎಂದು ಪ್ರಭಾರಿ ಶಿಕ್ಷಣಾಧಿಕಾರಿ ಜಯಶ್ರೀ ನಾಯ್ಕ ಹೇಳಿದರು.
ಅವರು ನಗರದ ಬಸ್ತಿಕೇರಿಯಲ್ಲಿ ಆಯೋಜಿಸಲಾದ ಗುರುವಂದನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಏಪ್ರಿಲ್ 30ರಂದು ಸೇವಾ ನಿವೃತ್ತಿ ಹೊಂದಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಗರಬಸ್ತಿಕೇರಿ ಶಾಲೆಯ ಶಿಕ್ಷಕಿ ಶ್ರೀಮತಿ ಗೀತಾ ಕೊಚೆರಕರ್ ಅವರಿಗೆ ಶಾಲೆಯಲ್ಲಿ ಹೃದಯಸ್ಪರ್ಶಿಯಾದ ಮತ್ತು ಅದ್ದೂರಿಯ ಗುರುವಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಊರಿನ ನಾಗರಿಕರು, ಶಾಲೆಯ ಎಸ್‌ಡಿಎಂಸಿ, ಪಾಲಕ-ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ತಾಲೂಕು ಶಿಕ್ಷಕರ ಸಂಘದ ವತಿಯಿಂದ ಗೀತಾ ಕೊಚೆರಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ, ಜಿಲ್ಲಾ ಶಿಕ್ಷಕರ ಸಂಘದ ಸುದೀಶ ನಾಯ್ಕ, ಕೆ.ಎಂ. ಹೆಗಡೆ, ಭಾಸ್ಕರ ಭಟ್ಟ ಹಾಗೂ ಸ್ಥಳೀಯ ಪ್ರಮುಖರಾದ ಸೂರಾಲು ಚಂದ್ರಶೇಖರ ಭಟ್ಟ ಅವರು ಮಾತನಾಡಿದರು.
ಈ ವೇಳೆ ಗುರು ನಾಯ್ಕ, ವಿನಾಯಕ ನಾಯ್ಕ, ಸುಧಾಕರ ಅಂಕೋಲೇಕರ, ಮುಖ್ಯಶಿಕ್ಷಕಿ ನಿರ್ಮಲಾ ನಾಯ್ಕ, ಶ್ರೀಕಾಂತ ಅಂಕೋಲೇಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author


More Stories
“ನೇತ್ರದಾನ ಶ್ರೇಷ್ಠ ದಾನ” – ಹೊನ್ನಾವರ ತಾಲೂಕು ಆಸ್ಪತ್ರೆಯಲ್ಲಿ 41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ
ಪರಿಸರ ಸೂಕ್ಷ್ಮ ವಲಯ (ESZ) ಅಧಿಸೂಚನೆ ವಿರೋಧಿಸಿ ಕೇಂದ್ರಕ್ಕೆ ಆಕ್ಷೇಪಣಾ ಪತ್ರ ಸಲ್ಲಿಸಲು ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿ ಕರೆ
ಸರ್ವೇ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ರಾಮಚಂದ್ರ ಎನ್. ಶೆಟ್ಟಿ ನಿಧನ