April 17, 2026

ಕೆ.ಆರ್.ಪೇಟೆಯಲ್ಲಿ ಏಪ್ರಿಲ್ 18ರ ಶನಿವಾರ, ರೈತರಿಗಾಗಿ ಒಂದು ದಿನದ ಜೇನು ಕೃಷಿ ಕುರಿತ ವಿಚಾರ ಸಂಕಿರಣ

ರೈತ ಬಾಂಧವರು ಭಾಗವಹಿಸಲು ಮನವಿ..

ಕೆ.ಆರ್.ಪೇಟೆ ಕೃಷ್ಣ ಪ್ರತಿಷ್ಠಾನದ ವತಿಯಿಂದ ಏಪ್ರಿಲ್ 18ರ ಶನಿವಾರ ಒಂದು ದಿನದ ಜೇನು ಕೃಷಿ ವಿಚಾರ ಸಂಕಿರಣವನ್ನು ತಾಲೂಕಿನ ರೈತರಿಗೆ ಆಯೋಜಿಸಲಾಗಿದೆ ಎಂದು ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಗೂಡೆ ಹೊಸಹಳ್ಳಿ ಜವರಾಯಿಗೌಡ ಹೇಳಿದರು.

ಅವರು ಇಂದು ಕೆ.ಆರ್.ಪೇಟೆ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಜೇನು ಕೃಷಿ ಕುರಿತ ವಿಚಾರ ಸಂಕಿರಣ ಕುರಿತು ಮಾಹಿತಿ ನೀಡಿದರು. ಕೆ ಆರ್ ಪೇಟೆ ಪಟ್ಟಣದ ಚನ್ನರಾಯಪಟ್ಟಣ ರಸ್ತೆಯಲ್ಲಿರುವ ಐಸಿಬಿ ಕಲ್ಯಾಣ ಮಂಟಪದಲ್ಲಿ ಏಪ್ರಿಲ್ 18ರ ಶನಿವಾರ ಬೆಳಗ್ಗೆ 9:30 ರಿಂದ ಸಂಜೆ 4:00 ವರೆಗೆ ನಡೆಯಲಿರುವ ಒಂದು ದಿನದ ಜೇನು ಕೃಷಿ ವಿಚಾರ ಸಂಕಿರಣದ ದಿವ್ಯ ಸಾನಿಧ್ಯವನ್ನು ಬೆಂಗಳೂರಿನ ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾಕ್ಟರ್ ಶ್ರೀಶ್ರೀಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರು ವಹಿಸಿದರೆ, ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಅರಣ್ಯ ವಿಶ್ವವಿದ್ಯಾನಿಲಯದ ಅರಣ್ಯ ಕೃಷಿ ವಿಭಾಗದ ಮುಖ್ಯಸ್ಥರಾದ ಡಾ. ಕೆಂಚ ರೆಡ್ಡಿ ಅವರು ಜೇನು ಕೃಷಿ ಕುರಿತು ಉಪನ್ಯಾಸ ನೀಡಿ ರೈತರೊಂದಿಗೆ ಸಂವಾದವನ್ನು ನಡೆಸಲಿದ್ದಾರೆ.

ಮಂಡ್ಯ ಜಿಲ್ಲೆಯ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಕೆನ್ ರೂಪಶ್ರೀ ಅವರು ಜೇನು ಕೃಷಿಗೆ ಸರ್ಕಾರದಿಂದ ಸಿಗುವ ವಿವಿಧ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಜೇನು ಕೃಷಿಗೆ ಸಾಕಾಣಿ ಕುರಿತು ರೈತ ಬಾಂಧವರಿಗೆ ಅರಿವಿನ ಜಾಗೃತಿ ಮೂಡಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಕೃಷ್ಣರಾಜಪೇಟೆ ತಾಲೂಕಿನ ಹಿರಿಯ ಸಹಾಯಕ ನಿರ್ದೇಶಕರಾದ ಎಂ.ಡಿ. ಲೋಕೇಶ್, ಕೆ.ಆರ್.ಪೇಟೆ ಕೃಷ್ಣ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಪ್ರೊ.ಇಂದಿರಮ್ಮ ಕೃಷ್ಣ ಭಾಗವಹಿಸಲಿದ್ದು ಕೆ ಆರ್ ಪೇಟೆ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಗೂಡೆ ಹೊಸಹಳ್ಳಿ ಜವರಾಯಿಗೌಡ ಅವರು ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸುವರು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಕತ್ತರಘಟ್ಟ ವಾಸು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕೃಷ್ಣರಾಜಪೇಟೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆರ್.ಎಸ್.ಶಿವರಾಮೇಗೌಡ, ಕೆ ಆರ್ ಪೇಟೆ ಕೃಷ್ಣ ಪ್ರತಿಷ್ಠಾನದ ಖಜಾಂಚಿ ಹೆಮ್ಮನಹಳ್ಳಿ ರಮೇಶ್, ಸಹ ಕಾರ್ಯದರ್ಶಿ ಮರಡಹಳ್ಳಿ ಬಸವೇಗೌಡ, ಹೆಗ್ಗಡಹಳ್ಳಿ ಕೃಷ್ಣೇಗೌಡ, ಐಚನಹಳ್ಳಿ ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು. ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

About The Author

error: Content is protected !!