ತಮಟೆಯ ಸದ್ದಿಗೆ ಹೆಜ್ಜೆ ಹಾಕಿ, ರಂಗದ ಕುಣಿತದಲ್ಲಿ ಭಾಗಿಯಾಗಿ ಸಂಭ್ರಮಿಸಿದ ರಾಜ್ಯದ ಮಾಜಿ ಸಚಿವ ಡಾ. ನಾರಾಯಣಗೌಡ..
ಕೃಷ್ಣರಾಜಪೇಟೆ ತಾಲೂಕಿನ ಸಾಂಸ್ಕೃತಿಕ ಗ್ರಾಮವಾದ ಕೈಗೋನಹಳ್ಳಿಯಲ್ಲಿ ಗ್ರಾಮ ದೇವತೆ ಶ್ರೀವೀರಭದ್ರೇಶ್ವರ ಸ್ವಾಮಿಯವರ ರಂಗದ ಹಬ್ಬವು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.
ಕರ್ನಾಟಕ ರಾಜ್ಯದ ಮಾಜಿ ಸಚಿವರಾದ ಗ್ರಾಮದ ಸುಪುತ್ರ ಡಾಕ್ಟರ್ ನಾರಾಯಣ ಗೌಡ ಅವರು ಗ್ರಾಮರಕ್ಷಕ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಗ್ರಾಮದ ಯುವಕರೊಂದಿಗೆ ರಂಗಕುಣಿತದಲ್ಲಿ ಭಾಗಿಯಾಗಿ ತಮಟೆಯ ಸದ್ದಿಗೆ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು. ರಾಜ್ಯದ ಮಾಜಿ ಸಚಿವರಾದ ನಾರಾಯಣಗೌಡ ಮಾತನಾಡಿ ಹಬ್ಬ ಹರಿದಿನಗಳು ಜಾತ್ರೆ ಉತ್ಸವಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದೆ ಹಬ್ಬದ ಸಂಭ್ರಮದಲ್ಲಿ ಎಲ್ಲರೂ ಒಂದಾಗಿ ಗ್ರಾಮ ದೇವತೆಯ ಹಬ್ಬದಲ್ಲೇ ಭಾಗಿಯಾದಾಗ ಮನಸ್ಸಿಗೆ ಸಂತೋಷವಾಗುವ ಜೊತೆಗೆ ಗ್ರಾಮದಲ್ಲಿ ಸುಖ ಶಾಂತಿ ಸಮೃದ್ಧಿ ನೆಲೆಸುವುದಲ್ಲದೆ, ಗ್ರಾಮದಲ್ಲಿ ಸಹಬಾಳ್ವೆಯ ಜೀವನಕ್ಕೆ ನಾಂಧಿ ಯಾಗಲಿದೆ ಎಂದು ನಾರಾಯಣ ಗೌಡ ಹೇಳಿದರು.
ರಂಗದ ಹಬ್ಬದಲ್ಲಿ ಮನ್ ಮುಲ್ ನಿರ್ದೇಶಕ ಡಾಲುರವಿ, ಗ್ರಾಮದ ಮುಖಂಡರಾದ ಮಂಜಪ್ಪಗೌಡ, ಮುಖಂಡರಾದ ಜಯರಾಮೇಗೌಡ, ಕುಮಾರ್, ಮುದ್ದೇಗೌಡ, ಮಾಜಿ ಸಚಿವರ ಧರ್ಮಪತ್ನಿ ದೇವಕಿ ನಾರಾಯಣಗೌಡ ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.
ವರದಿ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

More Stories
ಕೆ.ಆರ್.ಪೇಟೆಯಲ್ಲಿ ಏಪ್ರಿಲ್ 18ರ ಶನಿವಾರ, ರೈತರಿಗಾಗಿ ಒಂದು ದಿನದ ಜೇನು ಕೃಷಿ ಕುರಿತ ವಿಚಾರ ಸಂಕಿರಣ
ನೃತ್ಯವು ಭಗವಂತನ ಸಾಕ್ಷಾತ್ಕಾರಕ್ಕೆ ಭಕ್ತಿ ಸಮರ್ಪಣಾ ವೇದಿಕೆಯಾಗಿದೆ. ಡಾ. ನಿರ್ಮಲ ಎಲಿಗಾರ್
ಸಡಗರ ಸಂಭ್ರಮದಿಂದ ನಡೆದ ಶ್ರೀ ಲಕ್ಷ್ಮೀದೇವಿ ಅಮ್ಮನವರ ಬ್ರಹ್ಮರಥೋತ್ಸವ