April 29, 2026

ಭಟ್ಕಳ: ವಿಶ್ವ ಕಾರ್ಮಿಕ ದಿನಾಚರಣೆ ಹಾಗೂ ದಶಮಾನೋತ್ಸವಕ್ಕೆ ಸಜ್ಜಾದ ಕಟ್ಟಡ ಕಾರ್ಮಿಕರ ಸಂಘ

ಭಟ್ಕಳ: ತಾಲೂಕಿನ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರ ಸಂಘ (ಹುರುಳಿಸಾಲ್) ವತಿಯಿಂದ ವಿಶ್ವ ಕಾರ್ಮಿಕ ದಿನಾಚರಣೆ ಹಾಗೂ ಸಂಘದ ದಶಮಾನೋತ್ಸವ ಕಾರ್ಯಕ್ರಮವನ್ನು ಮೇ 1ರಂದು ಹೆಬ್ಳೆ ಗಾಂಧಿನಗರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಶ್ರೀಧರ ನಾಯ್ಕ ತಿಳಿಸಿದ್ದಾರೆ.


ಹುರುಳಿಸಾಲ್ ಗಣೇಶೋತ್ಸವ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಕೆಲಸ ಮಾಡಲು ಅಸಮರ್ಥರಾಗಿರುವ ಹಿರಿಯ ಕಟ್ಟಡ ಕಾರ್ಮಿಕರನ್ನು ಗುರುತಿಸಿ ದ ಸನ್ಮಾನಿ‌ ಧನ
ಸಹಾಯ ಮಾಡಲಾಗುತ್ತದೆ.


ಜೊತೆಗೆ ಸಂಘದ 50–60 ಮಂದಿ ಸ್ಥಾಪಕರಿಗೆ ಗೌರವ ಸಲ್ಲಿಸಿ ನೆನಪಿನ ಕಾಣಿಕೆ ನೀಡಲಾಗುವುದು. ವಿವಿಧ ಸಾಂಸ್ಕೃತಿಕ ಹಾಗೂ ಸಂಘಟನಾ ಕಾರ್ಯಕ್ರಮಗಳೂ ನಡೆಯಲಿವೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ್ ಬಿ. ನಾಯ್ಕ, ಭಟ್ಕಳ ವೃತ್ತದ ಕಾರ್ಮಿಕ ನಿರೀಕ್ಷಕ ಗುರುಪ್ರಸಾದ ನಾಯ್ಕ, ಡಿವೈಎಸ್ಪಿ ಗಿರೀಶ ಬಿ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ ಪಿ. ಬೊಕ್ಕಸದ, ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಅರುಣ್ ಕುಮಾರ್ ಎನ್.ಎ., ನ್ಯಾಯವಾದಿ ಮಂಜುನಾಥ ಗೊಂಡ ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದೊಂದಿಗೆ ಸಂಘದ ಗೌರವಾಧ್ಯಕ್ಷ ಶ್ರೀಧರ ಮಂಜುನಾಥ ನಾಯ್ಕ, ಭಟ್ಕಳ ಸೆಂಟ್ರಿಂಗ್ ಕಾರ್ಮಿಕ ಸಂಘದ ಅಧ್ಯಕ್ಷ ಲೋಕೇಶ ಮಂಜುನಾಥ ನಾಯ್ಕ, ಪೇಂಟಿಂಗ್ ಕೂಲಿ ಕಾರ್ಮಿಕ ಸಂಘದ ಅಧ್ಯಕ್ಷ ರಾಮ ಶನಿಯಾರ ನಾಯ್ಕ, ತಾಲೂಕು ಕಾರ್ಪೆಂಟರ್ಸ್ ಕಾರ್ಮಿಕರ ಸಂಘದ ಅಧ್ಯಕ್ಷ ಭಾಸ್ಕರ ಬಾಲಯ್ಯ ಆಚಾರ್ಯ ಹಾಗೂ ಭಟ್ಕಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ ರಾಮ ನಾಯ್ಕ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ.


ತಾಲೂಕಿನ ಎಲ್ಲಾ ಕಟ್ಟಡ ಕಾರ್ಮಿಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ಕಾರ್ಮಿಕರ ಶ್ರಮಕ್ಕೆ ಗೌರವ ಸಲ್ಲಿಸುವುದು, ಸಮಾನತೆ ಮತ್ತು ಒಗ್ಗಟ್ಟಿನ ಸಂದೇಶ ಸಾರುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯ ಬಳಿಕ ಮಾತನಾಡಿದ ಶ್ರೀಧರ ನಾಯ್ಕ ಅವರು, ತಾಲೂಕಿನಲ್ಲಿ ಪ್ರತಿ ಪ್ರದೇಶಕ್ಕೂ ತೆರಳಿ ನಿಜವಾದ ಕಟ್ಟಡ ಕಾರ್ಮಿಕರನ್ನು ಗುರುತಿಸಿ ಕಾರ್ಮಿಕ ಕಾರ್ಡ್ ನೀಡಲಾಗಿದೆ. ಯಾರಾದರೂ ನಿಜವಾದ ಕಾರ್ಮಿಕರು ಕಾರ್ಡ್ ಪಡೆಯದೇ ವಂಚಿತರಾಗಿದ್ದರೆ ಸಂಘದ ಕಚೇರಿಯನ್ನು ಸಂಪರ್ಕಿಸಬಹುದು ಎಂದರು. ಯಾವುದೇ ಕಾರ್ಮಿಕರು ಕಾರ್ಡ್ ಮರುನೊಂದಣಿ ಅಥವಾ ಹೊಸ ಕಾರ್ಡ್ ಪಡೆಯಲು ದಲಾಳಿ ಅಥವಾ ಖಾಸಗಿ ಕೇಂದ್ರಗಳಿಗೆ ಹೆಚ್ಚಿನ ಹಣ ನೀಡಬಾರದು ಎಂದು ಎಚ್ಚರಿಕೆ ನೀಡಿದರು.


ಕಾರ್ಮಿಕರಿಗೆ ಅಪಘಾತ ಸಂಭವಿಸಿದಲ್ಲಿ ಅವರಿಗೆ ನ್ಯಾಯ ದೊರೆಯುವಂತೆ ಕ್ರಮ ಕೈಗೊಳ್ಳುವುದು ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳು ನಿಜವಾದ ಕಾರ್ಮಿಕರಿಗೆ ತಲುಪಿಸುವುದು ಸಂಘದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು. ಆದರೆ ಕೆಲವು ನಿಜವಾದ ಕಾರ್ಮಿಕರು ಸಂಘಟನೆಯಿಂದ ದೂರವಾಗಿರುವುದು ಬೇಜಾರಿನ ಸಂಗತಿ ಎಂದು ತಿಳಿಸಿದರು.


ರಾಜ್ಯದಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರ ನೇತೃತ್ವದಲ್ಲಿ ಹಲವು ಬದಲಾವಣೆಗಳು ಆಗಿದ್ದು, ಸರ್ಕಾರದ ಆದೇಶದಂತೆ ತಾಲೂಕಿನಲ್ಲಿ ಇಲಾಖೆಯೊಂದಿಗೆ ಸಂಯುಕ್ತವಾಗಿ ಕಾರ್ಯಾಚರಣೆ ನಡೆಸಿ ಸುಮಾರು 6ರಿಂದ 7 ಸಾವಿರ ನಕಲಿ ಕಾರ್ಮಿಕ ಕಾರ್ಡ್‌ಗಳನ್ನು ಪತ್ತೆಹಚ್ಚಿ ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ‌ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷ ಶೀಧರ ನಾಯ್ಕ ಚೌಥನಿ,
ಉಪಾಧ್ಯಕ್ಷರಾದ ಲಚ್ಚಯ್ಯ ನಾರಾಯಣ ನಾಯ್ಕ,ಹಜರತ್ ಅಲಿ ಕಂಬಾರ,ಪ್ರಧಾನ ಕಾರ್ಯದರ್ಶಿ ಕೃಷ್ಣ ಜಟ್ಟಪ್ಪ ನಾಯ್ಕ,ಸಹ ಕಾರ್ಯದರ್ಶಿ ಮಾರುತಿ ಮಂಜಪ್ಪ ನಾಯ್ಕ
ಖಜಾಂಚಿ ಮಾದೇವ ನಾಗಯ್ಯ ಗೊಂಡ,ಸದಸ್ಯರಾದ ಜಟ್ಟಪ್ಪ ನಾಯ್ಕ,ಮಾದೇವ ಗೊಂಡ್,ಮಾರುತಿ ನಾಯ್ಕ ಶಿರಾಲಿ,ಮಾಸ್ತಪ್ಪ ನಾಯ್ಕ,ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು

About The Author

error: Content is protected !!