ಭಟ್ಕಳ: ಅಪ್ರಾಪ್ತ ವಯಸ್ಸಿನ ಬಾಲಕನಿಗೆ ದ್ವಿಚಕ್ರ ವಾಹನ ಚಾಲನೆಗೆ ಅವಕಾಶ ಮಾಡಿಕೊಟ್ಟ ಪ್ರಕರಣದಲ್ಲಿ ವಾಹನದ ಮಾಲೀಕರಿಗೆ ನ್ಯಾಯಾಲಯ ದಂಡ ವಿಧಿಸಿದೆ.
ಮುರುಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣದಲ್ಲಿ ಕೆಎ–47/ಆರ್–8460 ಸಂಖ್ಯೆಯ ದ್ವಿಚಕ್ರ ವಾಹನವನ್ನು ಅಪ್ರಾಪ್ತ ಬಾಲಕನಿಂದ ಚಾಲನೆ ಮಾಡಿಸಿದ ಆರೋಪದಡಿ ಬಸ್ತಿ ಕಾಯ್ಕಿಣಿ ನಿವಾಸಿ ರಾಜೇಶ್ ನಾಗಪ್ಪ ನಾಯ್ಕ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಮುರುಡೇಶ್ವರ ಪಿ.ಎಸ್.ಐ ಹನುಮಂತ ಬಿರಾದಾರ ಅವರು ಮೋಟಾರ್ ವಾಹನ ಕಾಯ್ದೆಯ ಕಲಂ 5 ಹಾಗೂ 199(ಎ) ಅನ್ವಯ ದೋಷಾರೋಪಣಾ ಪತ್ರವನ್ನು ಮಾನ್ಯ ಭಟ್ಕಳ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಅಪ್ರಾಪ್ತನಿಗೆ ವಾಹನ ಚಾಲನೆಗೆ ಅವಕಾಶ ಮಾಡಿಕೊಟ್ಟ ಹಿನ್ನೆಲೆ ರಾಜೇಶ್ ನಾಗಪ್ಪ ನಾಯ್ಕ್ ಅವರಿಗೆ ₹25 ಸಾವಿರ ದಂಡ ವಿಧಿಸಿ ಆದೇಶಿಸಿದೆ.
ಅಪ್ರಾಪ್ತರಿಗೆ ವಾಹನ ನೀಡುವುದು ಗಂಭೀರ ಅಪರಾಧವಾಗಿದ್ದು, ಇಂತಹ ಪ್ರಕರಣಗಳ ಮೇಲೆ ಮುಂದುವರೆದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

More Stories
ಶಬರಿಮಲೈನಲ್ಲಿ ಮುರಿನಕಟ್ಟೆ ವಿವಾದ ಶೀಘ್ರ ಪರಿಹಾರಕ್ಕೆ ಅಯ್ಯಪ್ಪ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ
ಕಪ್ಪೆಚಿಪ್ಪಿನ ದುರಂತ ಸಂತ್ರಸ್ತ ಕುಟುಂಬಗಳಿಗೆ ಆರ್ಯ ಈಡಿಗ ನಾಮಧಾರಿ ಬಿಲ್ಲವ ನೌಕರಿ ವೃಂದದಿಂದ ಆರ್ಥಿಕ ನೆರವು
ಗಾಂಜಾ ಸೇವನೆ ದೃಢ; ಮೂವರು ಯುವಕರ ವಿರುದ್ಧ ಪೊಲೀಸ್ ಪ್ರಕರಣ ದಾಖಲು