ಹೊನ್ನಾವರ: ಮಂಗಳೂರಿನ ಪ್ರಖ್ಯಾತ ಆಸ್ಪತ್ರೆಗಳೊಂದಾದ ಇಂಡಿಯಾನಾ ಹಾಸ್ಪಿಟಲ್ & ಹಾರ್ಟ್ ಇನ್ಸಿಟ್ಯೂಟ್ ಹೊನ್ನಾವರದ ಶ್ರೀ ದೇವಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದೊಂದಿಗೆ ಮಕ್ಕಳ ಹೃದಯ ರೋಗ ಸಂಬಂದಿ ಉಚಿತ ತಪಾಸಣಾ ಶಿಬಿರವನ್ನು ಮೇ 9 ರಂದು ಹಮ್ಮಿಕೊಳ್ಳಲಾಗಿದೆ.

ಮಂಗಳೂರಿನ ಪ್ರಖ್ಯಾತ ಇಂಡಿಯಾನಾ ಆಸ್ಪತ್ರೆಯ ಮಕ್ಕಳ ಹೃದ್ರೋಗ ತಜ್ಞ ಡಾ. ಸತೀಶ್ ಕುಮಾರ್ ಬಿ ಎಸ್, ಈ ಶಿಬಿರದಲ್ಲಿ ಲಭ್ಯವಿರಲಿದ್ದಾರೆ. ಇಕೋ ಮತ್ತು ಸಮಾಲೋಚನೆ ಉಚಿತವಾಗಿದೆ. ಮುಂಜಾನೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಿಬಿರ ಇರಲಿದೆ. ಮಕ್ಕಳಲ್ಲಿ ವೇಗವಾದ ಉಸಿರಾಟ, ಉಸಿರಾಟದ ತೊಂದರೆ, ಸರಿಯಾಗಿ ಆಹಾರ ಸೇವಿಸದಿರುವುದು,ತೂಕದಲ್ಲಿ ಕಡಿಮೆ ಹೆಚ್ಚಳ, ತುಟಿಗಳು ನೀಲಿಯಾಗುವುದು, ಅಧಿಕ ಬೆವರುವುದು, ಹೃದಯದಲ್ಲಿ ಶಬ್ದ (ಮರ್ಮರ್), ಎದೆ ನೋವು ಅಥವಾ ಮೂರ್ಛೆ ಆರೋಗ್ಯದ ಸಮಸ್ಯೆ ಇರುವವರು ಆಗಮಿಸಿ ಉಚಿತ ತಪಾಸಣೆ ನಡೆಸಲಾಗುವುದು. ನೊಂದಾವಣೆಗಾಗಿ ಹಾಗುಊ ಹೆಚ್ಚಿನ ಮಾಹಿತಿಗಾಗಿ 8387220430 / 6362989364 ಸಂಪರ್ಕಿಸುವಂತೆ ಪ್ರಕಟಣೆಯ ಮುಖೇನ ಗ್ರೂಪ್ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಇಂಡಿಯಾನಾ ಹಾಸ್ಪಿಟಲ್ ಮತ್ತು ಹಾರ್ಟ್ ಇನ್ಸಿಟ್ಯೂಟ್ ವಿಜಯ್ ಚಂದ್ರ ತಿಳಿಸಿದ್ದಾರೆ.
ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ

More Stories
ಕಾನಗೋಡ ಶ್ರೀ ಚೆನ್ನಕೇಶವ ದೇವರ ನೂತನ ಮಹಾದ್ವಾರ ಲೋಕಾರ್ಪಣೆ
ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನ ದಿನಾಚರಣೆ
ಮೇ 9ರಂದು ಚಿತ್ರದುರ್ಗದಲ್ಲಿ “ಬಿ.ಎಸ್.ವೈ ಅಭಿಮಾನೋತ್ಸವ”