ಶಿರಸಿ: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ವತಿಯಿಂದ ರಾಜ್ಯದ 30 ಜಿಲ್ಲೆಗಳ ಪ್ರತಿನಿಧಿಗಳನ್ನು ಒಗ್ಗೂಡಿಸಿ ರಾಜ್ಯ ಸಮ್ಮೇಳನ ಹಾಗೂ ರಜತ ಮಹೋತ್ಸವ ಕಾರ್ಯಕ್ರಮವನ್ನು ತುಮಕೂರಿನ ಹೆಗ್ಗೆರೆ ಗಂಗಾಧರಯ್ಯ ಆಡಿಟೋರಿಯಂನಲ್ಲಿ ನಡೆಸಿದ್ದು ,ಈ ವೇಳೆ ಸಾಧನೆ ಮಾಡಿದ ಬೆಳ್ಳೇಕೇರಿಯ ಪೂರ್ಣಿಮಾ ಹೆಗಡೆ ಅವರನ್ನು ಗೌರವಿಸಲಾಯಿತು.

ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ, ಅಧ್ಯಕ್ಷೆ ಉಮಾ ರೆಡ್ಡಿ, ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಪಾಂಡುರಂಗ ಕುರಾಂಡ್ವಾಡ್ ಸೇರಿದಂತೆ ಹಲವಾರು ಗಣ್ಯರು ಇಲ್ಲಿನ ಸಾತ್ವಿಕ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಹೆಗಡೆ ಅವರಿಗೆ ಅತ್ಯುತ್ತಮ ಮಹಿಳಾ ಉದ್ಯಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ವೇಳೆ ಉತ್ತರ ಕನ್ನಡ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಂ.ಎಂ. ಭಟ್ ಹಾಗೂ ಕಾರ್ಯದರ್ಶಿ ಗಣೇಶ್ ಹೆಗಡೆ ಉಪಸ್ಥಿತರಿದ್ದರು.

More Stories
ಸಂತರ ಸಾನ್ನಿಧ್ಯದಲ್ಲಿ ಭಾರತೀಯ ಸಂತ ಮಹಾಪರಿಷತ್ ಕಾರ್ಯಕರ್ತರ ಸಭೆ
ಪೌಷ್ಟಿಕ ಆಹಾರದ ಸೇವನೆಯಿಂದ ಕ್ಷಯರೋಗ ಬೇಗ ಗುಣಮುಖ. – ತಾಲೂಕಾ ಆರೋಗ್ಯಾಧಿಕಾರಿ ಡಾ. ಮಧುಕರ ಪಾಟೀಲ.
ಅರಣ್ಯ ಇಲಾಖೆ ಕಾರ್ಯ ವೈಖರ್ಯಕ್ಕೆ ತೀವ್ರ ಅಸಮಧಾನ : ನಡುತೋಪು ಲೆಕ್ಕಕ್ಕೆ ಕೋಟಿಗಳಷ್ಟು ಹಣ ಖರ್ಚು: ಕೋಟಿ ಹೊಂಡ ಎಲ್ಲಿ, ನೆಟ್ಟಿದ್ದು ಎಷ್ಟು, ಬದುಕಿದ್ದು ಎಷ್ಟು- ಅರಣ್ಯವಾಸಿಗಳ ಪ್ರಶ್ನೆ