August 21, 2026

ಹೊನ್ನಾವರ ತಾಲೂಕಿನಾದ್ಯಂತ 80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ: ವಿವಿಧೆಡೆ ಧ್ವಜಾರೋಹಣ, ಸೈನಿಕರಿಗೆ ಗೌರವ!

ಹೊನ್ನಾವರ: ತಾಲೂಕಿನಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಹರ್ಷೋಲ್ಲಾಸ ಹಾಗೂ ದೇಶಭಕ್ತಿಯಿಂದ ಆಚರಿಸಲಾಯಿತು. ವಿವಿಧ ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಹಾಗೂ ಪಂಚಾಯಿತಿ ವ್ಯಾಪ್ತಿಯಲ್ಲಿ ಧ್ವಜಾರೋಹಣ ಮತ್ತು ಸಮಾಜಮುಖಿ ಕಾರ್ಯಕ್ರಮಗಳು ಜರುಗಿದವು.

ವಿವಿಧ ಸಂಸ್ಥೆ ಮತ್ತು ಕಚೇರಿಗಳಲ್ಲಿ ಆಚರಣೆ:

ಪಿ ಎಲ್ ಡಿ ಬ್ಯಾಂಕ್: ಬ್ಯಾಂಕಿನ ಆವರಣದಲ್ಲಿ ನಡೆದ ಧ್ವಜಾರೋಹಣವನ್ನು ಅಧ್ಯಕ್ಷರಾದ ಶಿವರಾಮ ಸಂಗುಮನೆ ನೆರವೇರಿಸಿದರು. ಈ ವೇಳೆ ಆಡಳಿತ ಮಂಡಳಿ ನಿರ್ದೇಶಕರಾದ ಕೃಷ್ಣ ಗೌಡ ಮಾವಿನಕುರ್ವ, ಯೋಗೀಶ್ ರಾಯ್ಕರ್ ಉಪ್ಪೋಣಿ, ಸತೀಶ್ ತಾಂಡೆಲ್ ಕರ್ಕಿ ಹಾಗೂ ಪ್ರಧಾನ ವ್ಯವಸ್ಥಾಪಕ ಎಮ್.ಡಿ. ಮುಕ್ರಿ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವಿ ಕೇರ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ: ಸಂಸ್ಥೆಯ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಅಧ್ಯಕ್ಷ ಮನ್ವೇಲ್ ಸ್ಟೀಫನ್ ರೊಡ್ರಾಗಿಸ್ ಮಾತನಾಡಿ, “ಪ್ರತಿಯೊಬ್ಬರೂ ಸ್ವಾತಂತ್ರ್ಯದ ನೈಜ ಮಹತ್ವವನ್ನು ಅರ್ಥೈಸಿಕೊಂಡು ದೇಶದ ಪ್ರಗತಿಗೆ ಶ್ರಮಿಸಬೇಕು” ಎಂದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಹೊನ್ನಾವರ ಪೊಲೀಸ್ ಠಾಣೆ: ಪೊಲೀಸ್ ಠಾಣಾ ಆವರಣದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ (PI) ಸಿದ್ದರಾಮೇಶ್ವರ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಪಿಎಸ್‌ಐ ಹಾಗೂ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕೆಡಿಸಿಸಿ ಬ್ಯಾಂಕ್ (ಸಾಲ್ಕೋಡ್ ಶಾಖೆ): ಅರೇಅಂಗಡಿಯಲ್ಲಿರುವ ಕೆಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಶಾಖಾ ವ್ಯವಸ್ಥಾಪಕರಾದ ನಾಗರಾಜ ಹೆಗಡೆ ಖಾಸ್ಕಂಡ ಧ್ವಜಾರೋಹಣ ನೆರವೇರಿಸಿದರು. ಬ್ಯಾಂಕ್ ಸಿಬ್ಬಂದಿ ಉಪಸ್ಥಿತರಿದ್ದರು.

    ಸಾಲ್ಕೋಡ್ ಗ್ರಾ.ಪಂ.: ನಿವೃತ್ತ ಯೋಧನಿಗೆ ಸನ್ಮಾನ, ಪರಿಸರ ಜಾಗೃತಿ

    ಸಾಲ್ಕೋಡ್ ಗ್ರಾಮ ಪಂಚಾಯಿತಿಯಲ್ಲಿ ಅರ್ಥಪೂರ್ಣವಾಗಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO) ಬಾಬುರಾಯ್ ಧ್ವಜಾರೋಹಣ ನೆರವೇರಿಸಿ, ಪಂಚಾಯತಿ ಆವರಣದಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ಪರಿಸರ ಪ್ರೇಮ ಮೆರೆದರು.

    ಇದೇ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧ ರಾಜು ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಸಚೀನ ನಾಯ್ಕ, ಪಂಚಾಯತಿ ಸಿಬ್ಬಂದಿಗಳು, ಅರೇಅಂಗಡಿ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಶಿಕ್ಷಕಿಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

    About The Author

    error: Content is protected !!