September 22, 2026

ಬೆಳಕೆ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘದ 5ನೇ ಶಾಖೆ ಲೋಕಾರ್ಪಣೆ

ಭಟ್ಕಳ: ತಾಲೂಕಿನ ಪ್ರಮುಖ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ಬೆಳಕೆ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘದ 5ನೇ ನೂತನ ಶಾಖೆಯನ್ನು ಭಟ್ಕಳ ಪಟ್ಟಣದ ಮಣ್ಣುಳಿಯ ಪ್ರತೀಕ್ಷಾ ಕಟ್ಟಡದಲ್ಲಿ ಸಂಘದ ಅಧ್ಯಕ್ಷ ಮಾದೇವ ಜಿ. ನಾಯ್ಕ ಅವರು ಉದ್ಘಾಟಿಸಿದರು. ಶಾಖಾ ಉದ್ಘಾಟನೆಗೂ ಮುನ್ನ ಧಾರ್ಮಿಕ ವಿಧಿವಿಧಾನಗಳಂತೆ ಗಣಹವನ ಹಾಗೂ ಲಕ್ಷ್ಮೀಪೂಜೆ ನೆರವೇರಿಸಲಾಯಿತು.

ಸಂಘದ ಆರ್ಥಿಕ ಸಾಧನೆ ಹಾಗೂ ಪ್ರಗತಿ: ಉದ್ಘಾಟನಾ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಮಾದೇವ ಜಿ. ನಾಯ್ಕ, ಸಂಘವು ಕಳೆದ ಮಾರ್ಚ್ ಅಂತ್ಯಕ್ಕೆ ₹1.27 ಕೋಟಿ ನಿವ್ವಳ ಲಾಭ ಗಳಿಸಿದೆ. ಪಟ್ಟಣದ ಮಣ್ಣುಳಿಯಲ್ಲಿ ಆರಂಭವಾಗಿರುವ ಈ 5ನೇ ಶಾಖೆಯ ಮೂಲಕ ಸ್ಥಳೀಯ ಗ್ರಾಹಕರಿಗೆ ಹಾಗೂ ಸದಸ್ಯರಿಗೆ ಹೆಚ್ಚಿನ ಸೇವೆ ನೀಡಿ, ವ್ಯವಹಾರವನ್ನು ಮತ್ತಷ್ಟು ವೃದ್ಧಿಸುವ ಗುರಿ ಹೊಂದಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಪಾಂಡು ಜಿ. ನಾಯ್ಕ, ಮುಖ್ಯ ಕಾರ್ಯನಿರ್ವಾಹಕ ಅಣ್ಣಪ್ಪ ನಾಯ್ಕ, ನಿರ್ದೇಶಕರಾದ ಲಕ್ಷ್ಮೀನಾರಾಯಣ ನಾಯ್ಕ, ನಾಗೇಶ ನಾಯ್ಕ, ದಾಮೋದರ ನಾಯ್ಕ, ಲೋಕೇಶ ನಾಯ್ಕ, ರವಿರಾಜ ಜೈನ್, ಮಂಜು ಮೊಗೇರ, ಭಾಸ್ಕರ ಗೊಂಡ, ಲಲಿತಾ ನಾಯ್ಕ, ಶಾರದಾ ನಾಯ್ಕ, ಭಾರತಿ ನಾಯ್ಕ, ಪ್ರಮುಖರಾದ ಎಂ.ಆರ್. ನಾಯ್ಕ, ನಿವೃತ್ತ ನ್ಯಾಯಾಧೀಶ ರವಿ ನಾಯ್ಕ, ಭಟ್ಕಳ ಸೊಸೈಟಿ ಅಧ್ಯಕ್ಷ ಈರಪ್ಪ ಗರಡಿಕರ್, ವೆಂಕಟೇಶ ನಾಯ್ಕ ಹಾಗೂ ಕಟ್ಟಡ ಮಾಲೀಕ ಮೋಹನ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author

error: Content is protected !!