September 23, 2026

ಭಟ್ಕಳ ತಾಲೂಕು ಮಟ್ಟದ ಕ್ರೀಡಾಕೂಟ: ಆನಂದಾಶ್ರಮ ಪ್ರೌಢಶಾಲೆಗೆ ‘ತಾಲೂಕಾ ವೀರಾಗ್ರಣಿ’ ಪಟ್ಟ ಹಾಗೂ ಭರ್ಜರಿ ಸಾಧನೆ

ಭಟ್ಕಳ: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಆನಂದಾಶ್ರಮ ಸಂಯುಕ್ತ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ 2026–27ನೇ ಸಾಲಿನ ಭಟ್ಕಳ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಆನಂದಾಶ್ರಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮಾಡಿ ಶಾಲೆಗೆ ‘ತಾಲೂಕಾ ವೀರಾಗ್ರಣಿ’ ಗೌರವ ತಂದುಕೊಟ್ಟಿದ್ದಾರೆ.

ಸೆಪ್ಟೆಂಬರ್ 17 ಮತ್ತು 18ರಂದು ಇಲ್ಲಿನ ಶ್ರೀ ಗುರು ಸುಧೀಂದ್ರ ಕಾಲೇಜು ಮೈದಾನದಲ್ಲಿ ನಡೆದ ಕ್ರೀಡಾಕೂಟದಲ್ಲಿ ಶಾಲೆಯ ವಿದ್ಯಾರ್ಥಿಗಳು ಅಥ್ಲೆಟಿಕ್ಸ್ ಹಾಗೂ ವಿವಿಧ ಗುಂಪು ಕ್ರೀಡೆಗಳಲ್ಲಿ ಮೇಲುಗೈ ಸಾಧಿಸಿದರು.

ಅಥ್ಲೆಟಿಕ್ಸ್ ಸಾಧನೆ ಹಾಗೂ ವೈಯಕ್ತಿಕ ಚಾಂಪಿಯನ್‌ಶಿಪ್:

ಗುಂಪು ಕ್ರೀಡೆಗಳಲ್ಲಿ ಭರ್ಜರಿ ಪ್ರದರ್ಶನ:

  • ಬಾಲಕರ ವಿಭಾಗ: ಕಬಡ್ಡಿ ಮತ್ತು ಥ್ರೋಬಾಲ್‌ನಲ್ಲಿ ಪ್ರಥಮ ಸ್ಥಾನ ಹಾಗೂ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದರು.
  • ಬಾಲಕಿಯರ ವಿಭಾಗ: ವಾಲಿಬಾಲ್, ಥ್ರೋಬಾಲ್, ಕಬಡ್ಡಿ, ಬಿಬಿಟಿ ಹಾಗೂ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದು ಶ್ರೇಷ್ಠ ಪ್ರದರ್ಶನ ತೋರಿದರು.

    ತರಬೇತುದಾರರಿಗೆ ಶ್ಲಾಘನೆ ಹಾಗೂ ಅಭಿನಂದನೆ: ವಿದ್ಯಾರ್ಥಿಗಳಿಗೆ ನಿರಂತರ ತರಬೇತಿ, ಮಾರ್ಗದರ್ಶನ ನೀಡಿ ಈ ಹಂತದ ಯಶಸ್ಸಿಗೆ ಕಾರಣರಾದ ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್ ನಾಯ್ಕ್ ಅವರ ಪರಿಶ್ರಮವನ್ನು ಶಾಲಾ ಆಡಳಿತ ಮಂಡಳಿ ವಿಶೇಷವಾಗಿ ಶ್ಲಾಘಿಸಿದೆ. ಸಾಧಕ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯಸ್ಥರು, ಶಿಕ್ಷಕರು ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿ, ಮುಂದಿನ ಹಂತದ ಸ್ಪರ್ಧೆಗಳಿಗೆ ಶುಭ ಹಾರೈಸಿದ್ದಾರೆ.

    About The Author

    error: Content is protected !!