ಗೋಕರ್ಣ: ಪ್ರಪಂಚಕ್ಕೆ ಹಾಗೂ ಸಮಾಜಕ್ಕೆ ಶುಭ ಪರಿವರ್ತನೆಯಾಗುವುದೇ ಈ ಚಾತುರ್ಮಾಸ್ಯದ ಮುಖ್ಯ ಲಕ್ಷ್ಯವಾಗಿದ್ದು, ಖ್ಯಾತಿ ಹಾಗೂ ಪ್ರಚಾರ ಮಠದ ಉದ್ದೇಶವಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದರು.

ಗೋಕರ್ಣದ ಮೂಲಮಠದಲ್ಲಿ ಸೆಪ್ಟೆಂಬರ್ 27ರಂದು ನಡೆದ ‘ಅನ್ನಬ್ರಹ್ಮ’ ಚಾತುರ್ಮಾಸ್ಯದ ಮಹಾಸಮಾರೋಪ ಸಭೆಯಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಸಮಾಜ ಪರಿವರ್ತನೆ ಹಾಗೂ ಪ್ರವಚನದ ಪ್ರಭಾವ:
ಮಸಾಲೆಯಿಲ್ಲದ ಪಾರಂಪರಿಕ ಪ್ರವಚನ ಸರಣಿಯ ಮೂಲಕ ಆಹಾರದ ಸರಿ-ತಪ್ಪುಗಳನ್ನು ಸಮಾಜಕ್ಕೆ ತಿಳಿಹೇಳುವ ಜಾಗೃತಿ ಕ್ರಾಂತಿ ನಡೆದಿದೆ. ಈ ಪ್ರವಚನವು ಮಕ್ಕಳು ಹಾಗೂ ಎಲ್ಲಾ ವಯೋಮಾನದವರ ಮೇಲೆ ಧನಾತ್ಮಕ ಪರಿಣಾಮ ಬೀರಿದೆ.

ಮಠದ ವಿರೋಧಿಗಳಲ್ಲೂ ಬದಲಾವಣೆ ತಂದಿರುವ ಪ್ರವಚನದ ಪ್ರಭಾವದಿಂದಾಗಿ, ಅನೇಕರು ಸಾಂಪ್ರದಾಯಿಕ ತಾಮ್ರ-ಹಿತ್ತಾಳೆ ಪಾತ್ರೆಗಳನ್ನು ಬಳಸಿ ಪಾರಂಪರಿಕ ಆಹಾರ ಕ್ರಮಕ್ಕೆ ಮರಳುತ್ತಿದ್ದಾರೆ.
ಆಹಾರದ ವಿಚಾರದಲ್ಲಿ ಜಾಗೃತಿ ಕ್ರಾಂತಿ:
ಡಾ. ಗಿರಿಧರ ಕಜೆ (ಖ್ಯಾತ ಆಯುರ್ವೇದ ತಜ್ಞರು): “ಆಹಾರದ ವಿಚಾರದಲ್ಲಿ ಇಷ್ಟು ಸುದೀರ್ಘ ಹಾಗೂ ವಿವರವಾದ ಮಾರ್ಗದರ್ಶನ ನೀಡಿ ಜನಜಾಗೃತಿ ಮೂಡಿಸಿದ್ದು ಶ್ರೀರಾಮಚಂದ್ರಾಪುರ ಮಠದ ಶ್ರೀಗಳು ಮಾತ್ರ. ಇದು ಆಹಾರ ರಂಗದಲ್ಲಿ ನಡೆದ ಮಹತ್ವದ ಕ್ರಾಂತಿ. ಪಾಶ್ಚಾತ್ಯ ಪ್ರಭಾವದ ಕ್ಯಾಲೊರಿ ಹಾಗೂ ಪ್ರೋಟೀನ್ ಜಪದಿಂದ ಹೊರಬಂದು ಪಾರಂಪರಿಕ ಆಹಾರ ಕ್ರಮ ಅನುಸರಿಸಬೇಕು.”
ಸಂತೋಷ ಹೆಗಡೆ (ಶ್ರೀಮಠದ ಪ್ರಶಾಸನಾಧಿಕಾರಿ): ಚಾತುರ್ಮಾಸ್ಯದಲ್ಲಿ 1.5 ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದು, 300ಕ್ಕೂ ಅಧಿಕ ಪಾರಂಪರಿಕ ಖಾದ್ಯಗಳನ್ನು ಉಣಬಡಿಸಲಾಗಿದೆ. 3000ಕ್ಕೂ ಹೆಚ್ಚು ಕಾರ್ಯಕರ್ತರು ಸೇವೆಯಲ್ಲಿ ನಿರತರಾಗಿದ್ದು, ₹1 ಕೋಟಿಗೂ ಅಧಿಕ ಮೊತ್ತದ ಸುವಸ್ತು ದೇವರಿಗೆ ಸಮರ್ಪಿತವಾಗಿದೆ.
ಗ್ರಂಥ ಲೋಕಾರ್ಪಣೆ ಹಾಗೂ ಗಣ್ಯರ ಭೇಟಿ: ಈ ಸಂದರ್ಭದಲ್ಲಿ ಶ್ರೀ ಭಾರತೀ ಪ್ರಕಾಶನ ಪ್ರಕಟಿಸಿದ ‘ಅನ್ನಂ ಬ್ರಹ್ಮ – ಪೂರ್ವರಂಗ’ ಪುಸ್ತಕವನ್ನು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿದ್ಯಾರ್ಥಿಗಳು ಲೋಕಾರ್ಪಣೆಗೊಳಿಸಿದರು.
ಮಾಜಿ ಉಪಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ, ಕೆ. ಇ. ಕಾಂತೇಶ್ ಕುಟುಂಬಸ್ಥರು, ಶ್ರೀಮಠದ ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ಶಾಸನ ತಂತ್ರದ ಅಧ್ಯಕ್ಷ ಮೋಹನ್ ಭಾಸ್ಕರ ಹೆಗಡೆ, ಹವ್ಯಕ ಮಹಾಮಂಡಲದ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
About The Author


More Stories
ಮಿಶ್ರ ತಳಿಯ ಹಾಲು ಅಹಿತ ಎಂದು ವಿಜ್ಞಾನವೂ ಒಪ್ಪಿದೆ: ರಾಘವೇಶ್ವರ ಶ್ರೀ
ಮಿಶ್ರ ತಳಿಯ ಹಾಲು ಅಹಿತ ಎಂದು ವಿಜ್ಞಾನವೂ ಒಪ್ಪಿದೆ: ರಾಘವೇಶ್ವರ ಶ್ರೀ
ದೀರ್ಘಾಯಸ್ಸು ಮತ್ತು ಆರೋಗ್ಯಕರ ಶರೀರವೇ ಆಧ್ಯಾತ್ಮಿಕ ಸಾಧನೆಗೆ ಮೂಲ: ರಾಘವೇಶ್ವರ ಶ್ರೀ