ಕೂಡ್ಲಿಗಿ (ವಿಜಯನಗರ): ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶ್ರೀ ಗೌರಿ ಹಬ್ಬವನ್ನು ಅತ್ಯಂತ ಶ್ರದ್ಧಾಭಕ್ತಿ ಹಾಗೂ ಸಾಂಪ್ರದಾಯಿಕ ವೈಭವದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸಾಂಪ್ರದಾಯಿಕ ಉಡುಪಿನಲ್ಲಿ ಸಜ್ಜಾಗಿದ್ದ ಬಾಲೆಯರು, ಯುವತಿಯರು ಹಾಗೂ ಸುಮಂಗಲಿಯರು ಹಬ್ಬದ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿ ಗೌರಿ ಮಾತೆಯನ್ನು ಆರಾಧಿಸಿದರು.
ಪೂರ್ವಜರ ಪರಂಪರೆಯಂತೆ ಗೌರಿ ಪೂಜೆ: ಕೂಡ್ಲಿಗಿ ಪಟ್ಟಣದ ೧೦ನೇ ವಾರ್ಡ್ನಲ್ಲಿರುವ ಪೋಸ್ಟ್ ಸಿದ್ಲಿಂಗಯ್ಯ ಅವರ ಮನೆಯಲ್ಲಿ ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿಯಂತೆ ಈ ಬಾರಿಯೂ ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಮೂರು ದಿನಗಳ ಕಾಲ ವಿಧಿವತ್ತಾಗಿ ಧಾರ್ಮಿಕ ನಿಯಮಗಳನುಸಾರ ಪೂಜೆ ಹಾಗೂ ವಿಶೇಷ ಆರಾಧನೆ ನೆರವೇರಿಸಿ, ಬಳಿಕ ಭಕ್ತಿಯಿಂದ ವಿಸರ್ಜನೆ ಮಾಡಲಾಯಿತು.
ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ಹಾಗೂ ಮನೆಗಳಲ್ಲಿ ಗೌರಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮದುವೆ ನಿಶ್ಚಯವಾದ ಯುವತಿಯರು ಹಾಗೂ ಬಾಲೆಯರು ಸಂಪ್ರದಾಯದಂತೆ ಸಕ್ಕರೆ ಆರತಿಯನ್ನು ಬೆಳಗಿ ಶ್ರೀ ಗೌರಿಯ ಕೃಪೆಗೆ ಪಾತ್ರರಾದರು. ಕೃಷಿಕರು, ಆಸ್ತಿಕರು ಹಾಗೂ ಸಾರ್ವಜನಿಕರು ಶ್ರದ್ಧಾಭಕ್ತಿಯಿಂದ ಹಬ್ಬವನ್ನು ಆಚರಿಸಿದರು. (ವರದಿ: ವಿ.ಜಿ. ವೃಷಭೇಂದ್ರ, ಕೂಡ್ಲಿಗಿ)

About The Author


More Stories
ಬಕ್ರೀದ್ ಹಬ್ಬ ಆಚರಣೆ, ಲೋಕ ಕಲ್ಯಾಣಕ್ಕಾಗಿ ಸಾಮೂಹಿಕ ಪ್ರಾರ್ಥನೆ-
ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ರಿಂದ ಶಿಕ್ಷಕರಿಗೆ ಕೃತಜ್ಞತಾ ಸಮರ್ಪಣಾ ಸಮಾರಂಭ