ಅಧ್ಯಕ್ಷರಾಗಿ ಮಂಜುನಾಥ ನಾಯ್ಕ, ಪ್ರಧಾನ ಕಾರ್ಯದರ್ಶಿಯಾಗಿ ಸುನೀಲ ಜೆ. ಕೋಚರಿಕರ ಆಯ್ಕೆ
ಭಟ್ಕಳ (ಉತ್ತರ ಕನ್ನಡ): ಕರ್ನಾಟಕ ರಾಜ್ಯ ಕಂದಾಯ ನೌಕರರ ಸಂಘದ ಭಟ್ಕಳ ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಬುಧವಾರ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ನಡೆಯಿತು. ಸಂಘದ ನೂತನ ಅಧ್ಯಕ್ಷರಾಗಿ ಮಂಜುನಾಥ ನಾಯ್ಕ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸುನೀಲ ಜೆ. ಕೋಚರಿಕರ ಆಯ್ಕೆಯಾಗಿದ್ದಾರೆ.


ನೂತನ ಪದಾಧಿಕಾರಿಗಳ ವಿವರ:

- ಗೌರವಾಧ್ಯಕ್ಷೆ: ರಜನಿ ದೇವಾಡಿಗ
- ಅಧ್ಯಕ್ಷರು: ಮಂಜುನಾಥ ನಾಯ್ಕ
- ಪ್ರಧಾನ ಕಾರ್ಯದರ್ಶಿ: ಸುನೀಲ ಜೆ. ಕೋಚರಿಕರ
- ಖಜಾಂಚಿ: ವೀಣಾ ನಾಯ್ಕ
- ಉಪಾಧ್ಯಕ್ಷರು: ಧೀರಜ ಕುಡಾಳಕರ್
- ಮಹಿಳಾ ಉಪಾಧ್ಯಕ್ಷೆ: ದೀಪಾ ನಾಯ್ಕ
- ಸಂಘಟನಾ ಕಾರ್ಯದರ್ಶಿ: ಶಶಿಧರ ಬಿ. ಹೊನ್ನಳ್ಳಿ
- ರಾಜ್ಯ ಪರಿಷತ್ ಸದಸ್ಯೆ: ಲತಾ ನಾಯ್ಕ
- ಕ್ರೀಡಾ ಕಾರ್ಯದರ್ಶಿ: ಸಿದ್ದರಾಜು ಬಿ.
- ಸಾಂಸ್ಕೃತಿಕ ಕಾರ್ಯದರ್ಶಿ: ವಂದನಾ ನಾಯ್ಕ
ಆಯ್ಕೆ ಪ್ರಕ್ರಿಯೆಯಲ್ಲಿ ಕಚೇರಿ ಶಿರಸ್ತೇದಾರರಾದ ರಜಿನಿ ದೇವಾಡಿಗ, ರಾಧಿಕಾ ಶಾಸ್ತ್ರಿ, ಕಂದಾಯ ನಿರೀಕ್ಷಕ ವಿಶ್ವನಾಥ ಗಾಂವ್ಕರ್, ಮಾವಳ್ಳಿ ಕಂದಾಯ ನಿರೀಕ್ಷಕ ಶ್ರೀನಿವಾಸ ಮಾಸ್ತಿ, ಉತ್ತರ ಕನ್ನಡ ಗ್ರಾಮ ಆಡಳಿತ ಅಧಿಕಾರಿಗಳ ಜಿಲ್ಲಾ ಸಂಘದ ಅಧ್ಯಕ್ಷ ಚಾಂದಬಾಷಾ ಮುಲ್ಲಾ ಸೇರಿದಂತೆ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಭಟ್ಕಳ ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗಳ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು. ನೂತನ ಪದಾಧಿಕಾರಿಗಳನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ಅಭಿನಂದಿಸಿದರು.

More Stories
ಶಿರಾಲಿ ಮೂಲದ ಡಾ. ಸಚಿನ್ ಸದಾಶಿವ ಭಟ್ಟ ಅವರಿಗೆ ಪ್ರತಿಷ್ಠಿತ ‘ಎಲಿವೇಟ್-2026’ ಪ್ರಶಸ್ತಿ
ಶ್ರೀ ರಾಮಚಂದ್ರಾಪುರ ಮಠದ ‘ಗೋ ಸಮ್ಮಾನ ರಥ ಯಾತ್ರೆ’ಗೆ ಭವ್ಯ ಸ್ವಾಗತ
‘ಸಿ. ವಿಜಿಲ್-26’ ಅಣಕು ಕಾರ್ಯಾಚರಣೆ; ಸೂಕ್ಷ್ಮ ಪ್ರದೇಶಗಳಲ್ಲಿ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದಿಂದ ತೀವ್ರ ತಪಾಸಣೆ