ಭಟ್ಕಳ: ಇತ್ತೀಚೆಗೆ ನಿದನರಾದ ಖ್ಯಾತ ಹಿಂದೂಸ್ಥಾನಿ ಗಾಯಕ, ಗುರು ಹಾಗೂ ಹೊನ್ನಾವರ ಎಸ್.ಡಿ.ಎಂ.ಕಾಲೇಜಿನ ನಿವೃತ್ತ ಪ್ರೊಫೆಸರ್ ಅಶೋಕ ಹುಗ್ಗಣ್ಣವರ್ ಅವರಿಗೆ ತಾಲೂಕಿನ ಸಮ್ಯಕ್ ಸಂಗೀತ ಸಂಸ್ಥೆಯ ವತಿಯಿಂದ ಪುಷ್ಪ ನಮನ ಸಲ್ಲಿಸಿ ಶೃದ್ಧಾಂಜಲಿ ಅರ್ಪಿಸಲಾಯಿತು.
ಶೃದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಗಾಯಕ ಹಾಗೂ ಸಂಗೀತ ಶಿಕ್ಷಕ ಗಜಾನನ ಹೆಬ್ಬಾರ್ ಅವರು ಅಶೋಕ ಹುಗ್ಗಣ್ಣವರ್ ಅವರು ತಮ್ಮ ಗುರುಗಳಾಗಿದ್ದು ಓರ್ವ ಆದರ್ಶ ವ್ಯಕ್ತಿಯಾಗಿದ್ದರು. ತಮ್ಮ ಶಿಷ್ಯರನ್ನು ಅತ್ಯಂತ ಪ್ರೀತಿಯಿಂದ ಕಾಣುವ ಅವರು ತಮ್ಮ ಸಂಗೀತವನ್ನು ಧಾರೆ ಎರೆಯುತ್ತಿದ್ದುದಲ್ಲದೇ ತಮ್ಮದೇ ಮಕ್ಕಳಂತೆ ನೋಡಿಕೊಳ್ಳುತಿದ್ದರು. ಅವರ ಅಕಾಲಿಕ ನಿದನ ಸಂಗೀತ ಕ್ಷೇತ್ರಕ್ಕೆ ತುಂಬಲಾದ ನಷ್ಟ ಉಂಟು ಮಾಡಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನ್ನೊರ್ವ ಸಂಗೀತ ಶಿಕ್ಷಕ ಹಾಗೂ ಹುಗ್ಗಣ್ಣನವರ ಅವರ ಶಿಷ್ಯ ದಿವಾಕರ ಹೆಬ್ಬಾರ್ ಸಂತಾಪ ಸೂಚಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪರಮೇಶ್ವರ ಭಟ್ಟ, ಸಮ್ಯಕ್ ಸಂಗೀತ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
About The Author


More Stories
“ನೇತ್ರದಾನ ಶ್ರೇಷ್ಠ ದಾನ” – ಹೊನ್ನಾವರ ತಾಲೂಕು ಆಸ್ಪತ್ರೆಯಲ್ಲಿ 41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ
ಪರಿಸರ ಸೂಕ್ಷ್ಮ ವಲಯ (ESZ) ಅಧಿಸೂಚನೆ ವಿರೋಧಿಸಿ ಕೇಂದ್ರಕ್ಕೆ ಆಕ್ಷೇಪಣಾ ಪತ್ರ ಸಲ್ಲಿಸಲು ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿ ಕರೆ
ಸರ್ವೇ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ರಾಮಚಂದ್ರ ಎನ್. ಶೆಟ್ಟಿ ನಿಧನ