ಶಿರಸಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಮಾಹಿತಿ ಶಿಕ್ಷಣ ಸಂವಹನ ಉತ್ತರ ಕನ್ನಡ, ಕಾರವಾರ ಮತ್ತು ಗ್ರೀನ್ ಕೇರ್ ಕಲಾತಂಡದ ಸಂಯುಕ್ತ ಆಶ್ರಯದಲ್ಲಿ ಶಿರಸಿಯ ಕರ್ಜಗಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ (ರಿ.) ಶಿರಸಿ ಇವರ ಮಧ್ಯವರ್ಜನ ಶಿಬಿರದಲ್ಲಿ ಗ್ರೀನ್ ಕೇರ್ ಕಲಾತಂಡದಿಂದ ತಂಬಾಕು ಸೇವನೆಯ ದುಷ್ಪರಿಣಾಮಗಳು, ಮಂಗನ ಕಾಯಿಲೆಯ ಬಗ್ಗೆ, ಮದ್ಯಪಾನದ ದುಷ್ಪರಿಣಾಮಗಳು ಮತ್ತು ಎಚ್.ಐ.ವಿ ಏಡ್ಸ್ ಬಗ್ಗೆ ಬೀದಿ ನಾಟಕದ ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಿದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಧ್ಯವರ್ಜನ 2032ನೇ ಶಿಬಿರದ ಅಧ್ಯಕ್ಷರಾದ ಶ್ರೀ ಅರುಣ್ ಶೆಟ್ಟಿ, ಜನಜಾಗ್ರತಿ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ವಿವೇಕಾನಂದ ರಾಯ್ಕರ್, ಆರೋಗ್ಯ ಇಲಾಖೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಗೌರಿ ಸಿ. ನಾಯ್ಕ ಆರೋಗ್ಯ ಇಲಾಖೆಯ ಹಿರಿಯ ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕರು ಶ್ರೀ ಉದಯಶಂಕರ್, ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ ಜಿಲ್ಲಾ ಶಾಖೆ ಉತ್ತರ ಕನ್ನಡದ ಅಧ್ಯಕ್ಷರಾದ ಶ್ರೀ ಮಹೇಶ್ ಡಿ ನಾಯಕ್, ನಿವೃತ್ತ ಆಹಾರ ಸುರಕ್ಷಣಾಧಿಕಾರಿಗಳಾದ ಶ್ರೀ ಅರುಣ್ ಕಾಶಿ ಭಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿಯ ಶಿಬಿರಾಧಿಕಾರಿ ಶ್ರೀ ದಿವಾಕರ್ ಪೂಜಾರಿ, ಜನಜಾಗ್ರತಿ ಮೇಲ್ವಿಚಾರಕರು ಶ್ರೀ ನಿತೇಶ್ ಕೆ ಮತ್ತು ಗ್ರೀನ್ ಕೇರ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಜಿತೇಂದ್ರ ಕುಮಾರ್ ಆರ್. ಎಂ ಎಲ್ಲರೂ ಸೇರಿ ತಮಟೆ ಬಡಿಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.
ಬೀದಿ ನಾಟಕದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಕ್ಷಯ ರೋಗ ಮೇಲ್ವಿಚಾರಾರದ ಉದಯಶಂಕರ ರವರು ಕ್ಷಯ ರೋಗ, ಹರಡುವ ವಿಧಾನಗಳು,ಪರೀಕ್ಷೆ, ಚಿಕಿತ್ಸಾ ವಿಧಾನಗಳು,ಮದ್ಯ ವ್ಯಸನಿಗಳ ಮೇಲೆ ಆಗುವ ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರೆ,ಗ್ರೀನ್ ಕೇರ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಜಿತೇಂದ್ರ ಕುಮಾರ್ ರವರು ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಉಪನ್ಯಾಸ ನೀಡಿದರು.
ಈ ಕಾರ್ಯಕ್ರಮದಲ್ಲಿ 95 ಶಿಬಿರಾರ್ಥಿಗಳು ಮತ್ತು ನೂರಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದರು.

More Stories
ಗ್ರೀನ್ ಕೇರ್ ಕಲಾತಂಡದಿಂದ ಆರೋಗ್ಯ ಇಲಾಖೆಯ ಜಾಗೃತಿ ಕಾರ್ಯಕ್ರಮ……
ವರುಷದಿಂದ ವರುಷಕ್ಕೆ ಹರುಷವನ್ನು ಹೆಚ್ಚಿಸುತ್ತಲಿರುವ ಯಕ್ಷಗೆಜ್ಜೆಯ ವಾರ್ಷಿಕೋತ್ಸವವು ಸಂಭ್ರಮದಲ್ಲಿ ನಡೆಯಿತು.
ನಾಟ್ಯಶ್ರೀ ಕಲಾ ಕೇಂದ್ರದಿಂದ ನೃತ್ಯೋತ್ಸವ ಹಾಗೂ ಮನಸ್ವಿನಿ ನೃತ್ಯ ನಾಟಕದ ಪ್ರಥಮ ಪ್ರದರ್ಶನ ಜನವರಿ 4ರಂದು