ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ, ಶಿರಸಿ ನಗರ ಭಾಗ ಪರಿಷತ್, ಶಿರಸಿ ನಗರ ಮಾತೃ ಮಂಡಳದ ಸಹಯೋಗದಲ್ಲಿ ಸ್ವರ್ಣವಲ್ಲೀಮಹಾಸಂಸ್ಥಾನದ ಮಠಾಧೀಶರಾದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಗರದ ಯೋಗ ಮಂದಿರದ 29 ನೇ ವಾರ್ಷಿಕೋತ್ಸವ ಜ.31 ರಂದು ನೆರವೇರಲಿದೆ.




ಅಂದು ಬೆಳಿಗ್ಗೆ 8.30 ರಿಂದ ರುದ್ರಹವನ, ಶತರುದ್ರ, ಸಾಮೂಹಿಕ ಗಣಹವನ, ಮಾತೆಯರಿಂದ ಕುಂಕುಮಾರ್ಚನೆ, ಶ್ರೀಗಳ ಪಾದಪೂಜೆ, ಭಿಕ್ಷ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ. ಮಧ್ಯಾಹ್ನ 3.30 ಗಂಟೆಯಿಂದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಕೀರ್ತನೆಗಾರ ಹರಿದಾಸರತ್ನ ನಾರಾಯಣದಾಸರು ಹೀಪನಳ್ಳಿ ಹಾಗೂ ಹೆಸರಾಂತ ನೇತ್ರತಜ್ಞ ಡಾ.ಶಿವರಾಮ.ಕೆ.ವಿ ಅವರನ್ನು ಸನ್ಮಾನಿಸಲಾಗುವುದು. ಸ್ವರ್ಣವಲ್ಲೀ ಮಠದ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ, ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನದ ಉಪಾಧ್ಯಕ್ಷ ನಾರಾಯಣ ಭಟ್ಟ ಬಳ್ಳಿ, ಕೇಂದ್ರ ಮಾತೃಮಂಡಳದ ಅಧ್ಯಕ್ಷೆ ಗೀತಾ ಹೆಗಡೆ ಶೀಗೇಮನೆ ಉಪಸ್ಥಿತರಿರಲಿದ್ದಾರೆ.
ಮಾತೆಯರಿಂದ ಭಗವದ್ಗೀತೆ ಪಠಣ, ಸಾಧಕರಿಗೆ ಸನ್ಮಾನ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಶ್ರೀಗಳ ಆಶೀರ್ವಚನ, ಮಂತ್ರಾಕ್ಷತೆಯೊಂದಿಗೆ ವಾರ್ಷಿಕೋತ್ಸವ ಮುಕ್ತಾಯಗೊಳ್ಳಲಿದೆ ಎಂದು ಯೋಗ ಮಂದಿರದ ಅಧ್ಯಕ್ಷ ಎಸ್.ಎನ್.ಭಟ್ ಉಪಾಧ್ಯ, ಕಾರ್ಯದರ್ಶಿ ಸಿ.ಎಸ್.ಹೆಗಡೆ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

More Stories
ಸಂಪೂರ್ಣ ರಾಮಾಯಣ ಕೀರ್ತನಾ ಸಪ್ತಾಹ
29ನೇ ವರ್ಷದ ವಾರ್ಷಿಕೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ
ಮಧ್ಯವರ್ಜನ ಶಿಬಿರದಲ್ಲಿ ಆರೋಗ್ಯ ಇಲಾಖೆಯಿಂದ ಗ್ರೀನ್ ಕೇರ್ ಕಲಾತಂಡದಿಂದ ಜಾಗೃತಿ ಕಾರ್ಯಕ್ರಮ