ಮುರ್ಡೇಶ್ವರ; 31/01/2026 ಶನಿವಾರದಂದು ಸ.ಹಿ.ಪ್ರಾ.ಶಾಲೆ ಹರಿಜನಕೇರಿ ಮುರ್ಡೇಶ್ವರ ಇದರ ಪದೋನ್ನತಿ ಮುಖ್ಯ ಶಿಕ್ಷಕರಾದ ಶ್ರೀ ಜಗನ್ನಾಥ ಎಮ್. ನಾಯಕ ಇವರ ಸೇವಾನಿವೃತ್ತಿ ಸನ್ಮಾನ ಕಾರ್ಯಕ್ರಮವು ಎಸ್.ಡಿ.ಎಮ್.ಸಿ ಹಾಗೂ ಊರ ನಾಗರಿಕರ ಸಹಭಾಗಿತ್ವದಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷರಾದ ಶ್ರೀ ನಾಗರಾಜ ನಾಯಕ ಇವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಕುಮಾರ ಬಿ. ನಾಯಕ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಮಾಜಿ SDMC ಅಧ್ಯಕ್ಷರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಉಲ್ಲಾಸ ನಾಯಕ, ಶಿಕ್ಷಣ ಪರಿವೀಕ್ಷಕರಾದ ಶ್ರೀ ರಫೀಕ್, ಜನತಾ ಶಾಲಾ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಎಸ್. ಆರ್. ಮಿಸ್ತ್ರಿ, ಹ್ಯೂಮನ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶ್ರೀ ಮೀರಾ ಅಲಿ, ಶ್ರೀ ಶೇಖ ಹೈದರ, ಆಕ್ಕಪಕ್ಕದ ಶಾಲೆಗಳ ಶಿಕ್ಷಕರು, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಲಕ್ಷ್ಮಿ ಭರತ, ಊರ ನಾಗರಿಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಜೈ ಶ್ರೀರಾಮ ನವಚೈತನ್ಯ ಯುವಕ ಸಂಘದ ಪದಾಧಿಕಾರಿಗಳು, ಇನ್ನು ಹಲವಾರು ಸಂಘ ಸಂಸ್ಥೆಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಎಲ್ಲರೂ ಸೇರಿ ಬಹಳ ವಿಜೃಂಭಣೆಯಿಂದ ಅಚ್ಚುಕಟ್ಟಾಗಿ ಶ್ರೀ ಜಗನ್ನಾಥ ಎಮ್. ನಾಯಕ ಅವರನ್ನು ಸೇವೆಯಿಂದ ಬೀಳ್ಕೊಡಲಾಯಿತು.
ಶ್ರೀಮತಿ ವಿನಿತಾ ಬಿ. ಭಟ್ಟ ಸಹಶಿಕ್ಷಕಿಯವರು ಸ್ವಾಗತಿಸಿದರು.ಕುಮಾರಿ ಅಶ್ವಿನಿ ವಿಠಲ ನಾಯಕ ಸಹಶಿಕ್ಷಕಿಯವರು ವಂದನಾರ್ಪಣೆಮಾಡಿದರು.ಶ್ರೀಮತಿ ಸುಲೋಚನಾ ಬಿ. ನಾಯಕ ಸಹಶಿಕ್ಷಕಿ, ಶ್ರೀಮತಿ ಯಶೋಧಾ ನಾಯಕ ಅತಿಥಿ ಶಿಕ್ಷಕರು ಶುಭ ಕೋರಿದರು. ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಕೂಡ ಶುಭ ಕೋರಿದರು.
ಶ್ರೀಸಂತೋಷ್‌ಕುಮಾರ್ ಬಂಡಾರಿಸಹಶಿಕ್ಷಕರು ಕಾರ್ಯಕ್ರಮನಿರೂಪಣೆ ಮಾಡಿದರು.ಕೊನೆಯಲ್ಲಿ ನೆರೆದಿದ್ದ ಎಲ್ಲಾ ಗಣ್ಯರು, ಪಾಲಕರು, ಪೋಷಕರು, ಮಕ್ಕಳಿಗೆ ರುಚಿಯಾದ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿ ಕಾರ್ಯಕ್ರಮಕ್ಕೆ ವಿರಾಮ ನೀಡಲಾಯಿತು.

More Stories
ಮುರುಡೇಶ್ವರ ಪಾಲಿಟೆಕ್ನಿಕ್ ನಲ್ಲಿ ಒಂದು ದಿನದ ಇನ್ಕುಬೇಷನ್ ಜಾಗೃತಿ ಕಾರ್ಯಕ್ರಮ
ಮುರ್ಡೇಶ್ವರದಲ್ಲಿ ಲಾಡ್ಜ್ ಮೇಲೆ ಪೊಲೀಸ್ ದಾಳಿ: ಇಬ್ಬರು ಮಹಿಳೆಯರ ರಕ್ಷಣೆ, ರೂಮ್ ಬಾಯ್ ಬಂಧನ
ಮುರುಡೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮ ಸಾವಿರಾರು ಭಕ್ತರ ದಂಡು – ಕಳೆದುಕೊಂಡವರನ್ನು ಪತ್ತೆ ಹಚ್ಚಿದ ಪೊಲೀಸರು