ಮಂಜುನಾಥ ಬರ್ಗಿ ಸಂಪಾದಕತ್ವದ “ನಿರಾಭರಣ” ಲೋಕಾರ್ಪಣ
ಕುಮಟಾ : ತಾಲ್ಲೂಕಿನ ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಳೆದ 23 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದ ವಿಜ್ಞಾನ ಶಿಕ್ಷಕರಾದ ಪಿ ಎನ್ ನಾಯ್ಕರವರು ಸ್ವಯಂ ನಿವೃತ್ತಿಗೊಂಡ ಹೊತ್ತಿನಲ್ಲಿ ಅವರಿಗೆ ಅವರ ಶಾಲೆಯ ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಗಾಂವಕರ್ ಬರ್ಗಿಯವರು ಸಂಪಾದಿಸಿದ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದಿಂದ ಪ್ರಕಾಶಿಸಿದ “ನಿರಾಭರಣ” ಅಭಿನಂದನಾ ಹೊತ್ತಿಗೆಯನ್ನು ಪ್ರೌಢ ಶಾಲಾ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ನಾಗರಾಜ ಕೃಷ್ಣ ನಾಯ್ಕ ಹಾಗೂ ಕರ್ನಾಟಕ ರಣಧೀರರ ವೇದಿಕೆಯ ಅಧ್ಯಕ್ಷರಾದ ಮಿರ್ಜಾನ್ ನ ಕನ್ನಡದ ಸಮೀರರು ಜಂಟಿಯಾಗಿ ಲೋಕಾರ್ಪಣೆಗೊಳಿಸಿದರು.

ಪಿ ಎನ್ ನಾಯ್ಕರವರಿಗೆ ಅಭಿನಂದನಾ ಕೃತಿಯ ಸಮರ್ಪಣೆಯ ಬಳಿಕ ಶಾಲೆಯಿಂದ, ಗ್ರಾಮ ಪಂಚಾಯತ್ ದಿಂದ,ವಿವಿಧ ಸಂಘಟನೆಗಳಿಂದ ಹಾಗೂ ವಯಕ್ತಿಕವಾಗಿ ಗೌರವಿಸಲಾಯಿತು.
ಲೇಖಕ ಎನ್ ಆರ್ ಗಜು, ಕ್ಷೇತ್ರ ಶಿಕ್ಷಣಾಧಿಕಾರಿ ಉದಯ ನಾಯ್ಕ ಹಾಗೂ ಡಯಟ್ ಹಿರಿಯ ಉಪನ್ಯಾಸಕ ಚಂದ್ರಹಾಸ ರಾಯ್ಕರ್ ಮೊದಲಾದವರು ಮಾತನ್ನಾಡಿದರು.
About The Author


More Stories
ಹಿರೇಗುತ್ತಿಯಲ್ಲಿ 14 ವಯೋಮಾನದ ಬಾಲಕ-ಬಾಲಕಿಯರ ಇಲಾಖಾ ಕ್ರೀಡಾಕೂಟ
ಎನ್. ರಾಮು ಹಿರೇಗುತ್ತಿಗೆ ಒಲಿದ ‘ಇಂಡಿಯಾ ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್’
ಸಂಪನ್ನಗೊಂಡ ಮಿರ್ಜಾನ್ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ