ಭಟ್ಕಳ: ತಾಲೂಕಿನ ಬಸ್ತಿಮಕ್ಕಿಯ ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಠಾನ, ಗೋಳಿಕುಂಬ್ರಿ, ಉತ್ತರಕೊಪ್ಪ, ಸಪ್ತಕ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ 12ನೇ ವರ್ಷದ ಪೌರಾಣಿಕ ಯಕ್ಷಗಾನ ಸಪ್ತಾಹವನ್ನು ಫೆಬ್ರವರಿ 6ರಿಂದ 12ರವರೆಗೆ ಹಮ್ಮಿಕೊಳ್ಳಲಾಗಿದೆ.
ಯಕ್ಷಗಾನ ಸಪ್ತಾಹವು ಭಟ್ಕಳದ ಶ್ರೀ ರಾಘವೇಶ್ವರ ಭಾರತಿ ಹವ್ಯಕ ಸಭಾಭವನದಲ್ಲಿ ನಡೆಯಲಿದ್ದು, ಪ್ರತಿದಿನವೂ ಪೌರಾಣಿಕ ಪ್ರಸಂಗಗಳ ಯಕ್ಷಗಾನ ಪ್ರದರ್ಶನಗಳು ನಡೆಯಲಿವೆ ಎಂದು ಸಪ್ತಾಹದ ರೂವಾರಿ ನಾಗರಾಜ ಮಧ್ಯಸ್ಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದ ವಿವರಗಳಂತೆ ಫೆ.6ರಂದು ಮೀನಾಕ್ಷಿ ಕಲ್ಯಾಣ, 7ರಂದು ಬ್ರಹ್ಮ ಕಪಾಲ, 8ರಂದು ರಾಮಾಂಜನೇಯ, 9ರಂದು ರೇಣುಕಾ ಮಹಾತ್ಮೆ, 10ರಂದು ರಾಜಾಯಯಾತಿ, 11ರಂದು ಗದಾಯುದ್ಧ ರಕ್ತರಾತ್ರಿ ಹಾಗೂ 12ರಂದು ಕೃಷ್ಣ ಸಂಧಾನ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಫೆ.6ರಂದು ಸಂಜೆ 6.30ಕ್ಕೆ ಸಭಾ ಸಂವಿಧಾನ ಹಾಗೂ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಉದ್ಯಮಿ ಹಾಗೂ ಯಕ್ಷಕಲಾ ಪ್ರೋತ್ಸಾಹಕ ಕೃಷ್ಣಮೂರ್ತಿ ಮಂಜ ಮಾರಣಕಟ್ಟೆ ಉದ್ಘಾಟನೆ ನೆರವೇರಿಸಲಿದ್ದಾರೆ. ಭಾರತ ಸರ್ಕಾರದ ಸಾಂಬಾರು ಮಂಡಳಿ ಸದಸ್ಯ ಪ್ರಸನ್ನ ಕೆರೆಕೈ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವಾಧ್ಯಕ್ಷರಾಗಿ ಉದ್ಯಮಿ ನಾಗರಾಜ ಎಂ. ಭಟ್ಟ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಖರ್ವಾ–ಹೊನ್ನಾವರದ ವೇ.ಮೂ. ಗಜು ಭಟ್ಟ, ಕೆಡಿಸಿಸಿ ಬ್ಯಾಂಕ್ (ಉ.ಕ.) ನಿರ್ದೇಶಕ ವಿಶ್ವನಾಥ ಭಟ್ ಖರ್ವಾ, ಉ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರಾಧಾಕೃಷ್ಣ ಭಟ್, ಅನಂತ ಕಲಾ ಪ್ರತಿಷ್ಠಾನ ಕೊಳಗಿಯ ಅಧ್ಯಕ್ಷ ವಿ.ಎಂ. ಭಟ್ಟ, ಸಮಾಜಸೇವಕ ಎನ್.ಎನ್. ಕಾಮತ್ ಮುರ್ಡೇಶ್ವರ ಹಾಗೂ ಯಕ್ಷಗಾನ ಕಲಾವಿದ ಗಣಪತಿ ಹೆಗಡೆ ತೋಟಿಮನೆ ಉಪಸ್ಥಿತರಿರಲಿದ್ದಾರೆ.

More Stories
ನಿವೃತ್ತ ಶಿಕ್ಷಕ ಐ.ಡಿ. ಖಾನ್ ನಿಧನ
ಸೊನಾರಕೇರಿಯಲ್ಲಿ ದೈವಜ್ಞ ಸಮಾಜದ ರಥೋತ್ಸವ ವೈಭವ
ಯಕ್ಷಗಾನ ಶ್ರೇಷ್ಠ ಪರಂಪರಾ ಕಲೆ – ಗಜು ಭಟ್ಟ ಖರ್ವಾ