ಹೊನ್ನಾವರ: ವೃತ್ತಿ ಜೀವನದ ಸಾರ್ಥಕತೆಯು ನಿವೃತ್ತಿಯ ಅಂಚಿನಲ್ಲಿ ತಿಳಿಯುತ್ತದೆ. ಶಿಕ್ಷಕ ವೃತ್ತಿಯು ಪವಿತ್ರ ಹಾಗೂ ಸುಮಧುರವಾದ ವೃತ್ತಿಯಾಗಿದೆ ಎಂದು ಎಂ ಎಸ್ ಹೆಗಡೆ ಗುಣವಂತೆ ಅಭಿಪ್ರಾಯಪಟ್ಟರು.
ಅವರು ಗುಣವಂತೆಯ ಕರಾವಳಿ ಪ್ರೌಢಶಾಲೆಯಲ್ಲಿ ಜರುಗಿದ ನಿವೃತ್ತ ಮುಖ್ಯ ಶಿಕ್ಷಕ ವಿ ಹೆಚ್ ನಾಯ್ಕ ಅವರ ಬಿಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಶಿಕ್ಷಕ ವೃತ್ತಿಯು ಜ್ಞಾನವನ್ನು ನೀಡುವ ಮತ್ತು ಪಡೆಯುವ ಮಹತ್ವದ ವೃತ್ತಿಯಾಗಿದ್ದು, ವಿದ್ಯಾರ್ಥಿಗಳು ಹಾಗೂ ಪಾಲಕರ ಮನೆಗಳಲ್ಲಿ ಶಿಕ್ಷಕರು ಸದಾ ಪ್ರಜ್ವಲಿಸುತ್ತಾರೆ ಮತ್ತು ಕೀರ್ತಿವಂತರಾಗುತ್ತಾರೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿ ಹೆಚ್ ನಾಯ್ಕ ಅವರು, ಶಿಕ್ಷಕ ವೃತ್ತಿಯು ನನಗೆ ಅಪಾರ ಸಮಾಧಾನವನ್ನು ನೀಡಿದೆ. ಗೌರವ ಮತ್ತು ಜ್ಞಾನವನ್ನು ಹೆಚ್ಚಿಸಿದ್ದು, ಇಲ್ಲಿಯ ಅನುಭವಗಳು ಸದಾ ಸ್ಮರಣೀಯವಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆಳಗನೂರು ಮಂಡಳ ಪಂಚಾಯತ್ ಮಾಜಿ ಅಧ್ಯಕ್ಷ ಶಿವಾನಂದ ಗೌಡ ಅಡಿಮನೆ, ನಿವೃತ್ತ ಮುಖ್ಯ ಶಿಕ್ಷಕರಾದ ಎಂ ಹೆಚ್ ನಾಯ್ಕ, ಮಂಜುನಾಥ ಶೆಟ್ಟಿ, ಅನಿತಾ ನಾಯ್ಕ ಮೊದಲಾದವರು ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಮುಖ್ಯ ಶಿಕ್ಷಕರಾದ ಎಸ್ ವಿ ಕಾಣೆಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಪಿ ಜಿ ಲಿಂಗೋಜಿ ಸ್ವಾಗತಿಸಿದರು. ಜಿ ಎಸ್ ಗೌಡ ವಂದಿಸಿದರು. ಎಸ್ ಆರ್ ಪೂಜಾರಿ ಕಾರ್ಯಕ್ರಮವನ್ನು ನಿರ್ವಹಿಸಿದರು. ನಾಗರಿಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.

More Stories
ಗುಣವಂತೆ ಶ್ರೀ ಶಂಭು ಶಂಭುಲಿಂಗೇಶ್ವರ ದೇವಾಲಯದಲ್ಲಿ ಧಾರ್ಮಿಕ ಸಭೆ ವೈಭವ
ಶ್ರೀ ಶಂಭು ಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಶಿವಾಲಯ ಲೋಕಾರ್ಪಣೆ
ಸಿ.ಎ ಕನಸು ಹೊತ್ತ ಗ್ರಾಮೀಣ ಪ್ರತಿಭೆ ಚಿನ್ನಯಿ ಶೆಟ್ಟಿ, ಪಿಯುಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ