ಸಿದ್ದಾಪುರ: ಸಿದ್ದಾಪುರ ತಾಲೂಕಿನ (ಹುತ್ಗಾರ) ಬಿಳೇಕಲ್‌ನ ನಾರಾಯಣ ಹೆಗಡೆ ಅವರ ಮನೆ ಅಂಗಳದಲ್ಲಿ ಏ. 16ರಂದು “ಶ್ರೀಕೃತ” ನಾದೋಪಚಾರ ಎಂಬ ವಿಶೇಷ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಅಂದು ಸಂಜೆ 4:30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು ಸಂಜೆ ೫ಕ್ಕೆ ಅಂತರಾಷ್ಟ್ರೀಯ ಖ್ಯಾತಿಯ ತಬಲಾ ಕಲಾವಿದ ಪಂ. ರಘುನಾಥ್ ನಾಕೋಡ್ ಮತ್ತು ಡಾ. ರವಿಕಿರಣ್ ನಾಕೋಡ್ ಧಾರವಾಡ ಅವರಿಂದ ತಬಲಾ ಸೋಲೋ ವಾದನ ಜರುಗಲಿದೆ.
ಬಳಿಕ ಖ್ಯಾತ ಗಾಯಕ ಖರ್ವಾ ವಿಶ್ವೇಶ್ವರ ಭಟ್ ಅವರಿಂದ ಗಾಯನ ಸುಧೆ ಹರಿಯಲಿದೆ. ಪಕ್ಕವಾದ್ಯದಲ್ಲಿ ತಬಲಾದಲ್ಲಿ ಗುರುರಾಜ್ ಹೆಗಡೆ ಅಡುಕಳ ಹಾಗೂ ಸಂವಾದಿನಿಯಲ್ಲಿ ಅಜಯ್ ಹೆಗಡೆ, ವರ್ಗಾಸರ ಸಾಥ್ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ಸಂಯೋಜಕರಾದ ಗಣೇಶ ಬಿಳೇಕಲ್ ತಿಳಿಸಿದ್ದಾರೆ.
About The Author


More Stories
ನವರಾತ್ರಿ ಸಂಭ್ರಮ: ನಾಣಿಕಟ್ಟಾದಲ್ಲಿ 97ನೇ ‘ಯಕ್ಷ ವಂದನೆ – ಯಕ್ಷಪರ್ವ’ ಕಾರ್ಯಕ್ರಮ
ಆಗಸ್ಟ್ 15ರಂದು ನಾಣಿಕಟ್ಟಾದಲ್ಲಿ ‘ಯಕ್ಷ ಶ್ರಾವಣ’ ಗಾನ ವೈಭವ: ಯಕ್ಷರಂಗದ ದೈತ್ಯ ದಿಗ್ಗಜರ ಸಮಾಗಮ
ಸಮಾಜಮುಖಿ ಚಿಂತಕ, ಪುಸ್ತಕ ಪ್ರೇಮಿ ಕಮಲಾಕರ ಭಂಡಾರಿ ಇನ್ನಿಲ್ಲ: ದೇಹದಾನಕ್ಕೆ ತೀರ್ಮಾನ