ಹೊನ್ನಾವರ: ರಾಷ್ಟ್ರಿಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಆರ್.ಎಸ್.ಎಸ್ ಹಾಗೂ ಭಾರತೀಯ ಜನತಾ ಪಕ್ಷದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ, ಮಂಕಿ ಮಂಡಲದ ವತಿಯಿಂದ ಮಂಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು.

ಈ ಸಂದರ್ಭದಲ್ಲಿ ಮಂಕಿ ಮಂಡಲ ಅಧ್ಯಕ್ಷ ಮಂಜುನಾಥ ನಾಯ್ಕ, ಪ್ರಧಾನ ಕಾರ್ಯದರ್ಶಿ ವಿಘ್ನೇಶ್ವರ ಹೆಗಡೆ, ಪ.ಪಂ. ಅಧ್ಯಕ್ಷೆ ಸವಿತಾ ನಾಯ್ಕ, ಉಪಾಧ್ಯಕ್ಷೆ ಜ್ಯೋತಿ ಖಾರ್ವಿ, ಪ.ಪಂ. ಸದಸ್ಯರು ಹಾಗೂ ಮಂಡಲ ಪ್ರಮುಖರಾದ ದೀಪಕ ನಾಯ್ಕ ಉಪಸ್ಥಿತರಿದ್ದರು. ಜೊತೆಗೆ ಜಿಲ್ಲಾ ಒಬಿಸಿ ಮೋರ್ಚಾ ಕಾರ್ಯದರ್ಶಿ ಆನಂದ ನಾಯ್ಕ, ಮಹಾಶಕ್ತಿಕೇಂದ್ರ ಅಧ್ಯಕ್ಷ ಆನಂದ ನಾಯ್ಕ, ಯುವ ಮೋರ್ಚಾ ಅಧ್ಯಕ್ಷ ರಘು ಖಾರ್ವಿ, ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ, ಜಗದೀಶ ಗೌಡ ಹಾಗೂ ಯುವ ಮೋರ್ಚಾ ಸದಸ್ಯರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ


More Stories
ನೀಲಗೋಡ ಯಕ್ಷಚೌಡೇಶ್ವರಿ ಸನ್ನಿಧಿಯಲ್ಲಿ ಆಷಾಢ ಅಮವಾಸ್ಯೆ ವಿಶೇಷ ಪೂಜೆ: ಭಕ್ತರ ಕಷ್ಟ ಕಾರ್ಪಣ್ಯ ನೀಗಿಸುವ ಶಕ್ತಿ ಕ್ಷೇತ್ರ
ಹೊನ್ನಾವರ ತಾಲೂಕಾ ಒಕ್ಕಲಿಗರ ಸಂಘಕ್ಕೆ ನೂತನ ಆಡಳಿತ ಮಂಡಳಿ ಆಯ್ಕೆ: ಅಧ್ಯಕ್ಷರಾಗಿ ಕೃಷ್ಣ ಜಟ್ಟಿ ಗೌಡ ಅವಿರೋಧ ಆಯ್ಕೆ
ಶಿಕ್ಷಣದೊಂದಿಗೆ ಬದುಕಿನ ಕೌಶಲ್ಯ ಹಾಗೂ ವ್ಯವಹಾರವನ್ನು ಕಲಿಯುವುದು ಮುಖ್ಯ: ರೋ. ಡಾ. ಅನಂತಮೂರ್ತಿ ಶಾಸ್ತ್ರಿ