ಹೊನ್ನಾವರ: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಹೊನ್ನಾವರ ವತಿಯಿಂದ ಭಾರತೀಯ ಸೇನೆಯಲ್ಲಿ 30 ವರ್ಷಗಳ ಕಾಲ ಯಶಸ್ವಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಶಾಂತಾರಾಮ ಭಂಡಾರಿಯವರ ಮನೆಗೆ ಭೇಟಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಲ್ ಅಣ್ಣಪ್ಪ ಶೇಟ್, ಸಂಘದ ಅಧ್ಯಕ್ಷ ಅಶೋಕ್ ನಾಯ್ಕ, ಕಾರ್ಯದರ್ಶಿ ರಾಜೇಶ ನಾಯ್ಕ ಹಾಗೂ ಗಜಾನನ ನಾಯ್ಕ ಅವರು ಶಾಂತಾರಾಮ ಭಂಡಾರಿಯವರ ಸೇವೆಯನ್ನು ಶ್ಲಾಘಿಸಿ, ಅವರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು. ಜೊತೆಗೆ ಅವರನ್ನು ಹೊನ್ನಾವರ ಮಾಜಿ ಸೈನಿಕರ ಸಂಘಕ್ಕೆ ಆತ್ಮೀಯವಾಗಿ ಸ್ವಾಗತಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಂತಾರಾಮ ಭಂಡಾರಿಯವರು ತಮ್ಮ ಸೇವಾ ಅನುಭವಗಳನ್ನು ಹಂಚಿಕೊಂಡು, ಸಂಘದ ಕಾರ್ಯವನ್ನು ಮೆಚ್ಚಿಕೊಂಡರು. ಕಾರ್ಯಕ್ರಮವನ್ನು ನಾಗರಾಜ ನಾಯ್ಕ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ರವಿ ನಾಯ್ಕ (ಇಡಗುಂಜಿ), ರವಿ ನಾಯ್ಕ (ದುಗ್ಗೂರು), ಶ್ರೀನಿವಾಸ್ ರಾವ್ ದಂಪತಿ, ತುಕಾರಾಂ ತಾಂಡೆಲ್, ಉಮೇಶ ನಾಯ್ಕ, ರಾಜು ನಾಯ್ಕ (ಮಂಕಿ), ರಾಘವೇಂದ್ರ ಮಡಿವಾಳ, ಅನಂತ ಮಡಿವಾಳ, ಸತೀಶ ಪಟಗಾರ ಹಾಗೂ ಗಿರೀಶ ನಾಯ್ಕ (ಸಂಕೊಳ್ಳಿ) ಉಪಸ್ಥಿತರಿದ್ದರು.
About The Author


More Stories
“ನೇತ್ರದಾನ ಶ್ರೇಷ್ಠ ದಾನ” – ಹೊನ್ನಾವರ ತಾಲೂಕು ಆಸ್ಪತ್ರೆಯಲ್ಲಿ 41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ
ಪರಿಸರ ಸೂಕ್ಷ್ಮ ವಲಯ (ESZ) ಅಧಿಸೂಚನೆ ವಿರೋಧಿಸಿ ಕೇಂದ್ರಕ್ಕೆ ಆಕ್ಷೇಪಣಾ ಪತ್ರ ಸಲ್ಲಿಸಲು ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿ ಕರೆ
ಸರ್ವೇ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ರಾಮಚಂದ್ರ ಎನ್. ಶೆಟ್ಟಿ ನಿಧನ