ಭಟ್ಕಳ: ಪ್ರಪ್ರಥಮ ಬಾರಿಗೆ ಎಂ.ಆರ್.ಎಸ್. ಸ್ಪೋರ್ಟ್ಸ್ ಕ್ಲಬ್ ಮಣ್ಕುಳಿ ವತಿಯಿಂದ ಆಯೋಜಿಸಲಾದ “ಮಣ್ಕುಳಿ ಪ್ರೀಮಿಯರ್ ಲೀಗ್–2026” ಕ್ರಿಕೆಟ್ ಪಂದ್ಯಾವಳಿಯಲ್ಲಿ ನಾಗರಾಜ ಬಾಗಲ್ ಹಾಗೂ ಹರೀಶ ನಾಯ್ಕ ಮಾಲೀಕತ್ವದ “ರಾಯಲ್ ಸಾಮ್ರಾಟ್” ತಂಡ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.
ಎರಡು ದಿನಗಳ ಕಾಲ ನಡೆದ ಈ ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿದ್ದವು.
ಹರಾಜು ಪ್ರಕ್ರಿಯೆಯ ಮೂಲಕ ಆಟಗಾರರನ್ನು ಆಯ್ಕೆ ಮಾಡಿಕೊಂಡು ತಂಡಗಳು ಕಣಕ್ಕಿಳಿದಿದ್ದವು.
ಫೈನಲ್ ಪಂದ್ಯದಲ್ಲಿ “ರಾಯಲ್ ಸಾಮ್ರಾಟ್” ಮತ್ತು “ಸಾನ್ವಿ ವಾರಿಯರ್ಸ್” ತಂಡಗಳ ನಡುವೆ ರೋಚಕ ಹಣಾಹಣಿ ನಡೆಯಿತು. ಟಾಸ್ ಗೆದ್ದ “ರಾಯಲ್ ಸಾಮ್ರಾಟ್” ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಆಟಗಾರರಾದ ಸಂದೀಪ ಹಾಗೂ ದೀಪಕ್ ಇಬ್ಬರೂ ಅದ್ಭುತ ಪ್ರದರ್ಶನ ನೀಡಿ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಭರ್ಜರಿ ಮೊತ್ತ ಕಲೆಹಾಕಿದರು. 6 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿ ಎದುರಾಳಿಗೆ 131 ರನ್ ಗುರಿ ನೀಡಿದರು.
ಗುರಿ ಬೆನ್ನಟ್ಟಿದ “ಸಾನ್ವಿ ವಾರಿಯರ್ಸ್” ತಂಡದ ಮದನ್ (28) ಮತ್ತು ಭರತ್ ಕುಮಾರ್ (19) ಉತ್ತಮ ಆರಂಭ ನೀಡಿದರೂ, ನಿರಂತರ ವಿಕೆಟ್ ನಷ್ಟದಿಂದ ಒತ್ತಡಕ್ಕೆ ಒಳಗಾಯಿತು. ತಂಡದ ನಾಯಕ ಪವನ್ ನಾಯಕ 42 ರನ್ ಗಳಿಸಿ ಹೋರಾಟ ನಡೆಸಿದರೂ, ಅಂತಿಮವಾಗಿ ತಂಡ 37 ರನ್ ಅಂತರದಿಂದ ಸೋಲನುಭವಿಸಿತು.
ರಾಯಲ್ ಸಾಮ್ರಾಟ್ ತಂಡದಲ್ಲಿ ಅನುಭವಿ ಆಟಗಾರರ ಸಮೂಹವೇ ಬಲವಾಗಿದ್ದು, ಅದೇ ಅವರ ಗೆಲುವಿಗೆ ಕಾರಣವಾಯಿತು.
ಪಂದ್ಯಾವಳಿಯ ವೈಯಕ್ತಿಕ ಪ್ರಶಸ್ತಿಗಳಲ್ಲಿ ಡಿ ಸ್ಟಾರ್ ತಂಡದ ಗುರುದತ್ತ ತೆಂಗೇರಿ ಬೆಸ್ಟ್ ಬ್ಯಾಟ್ಸ್‌ಮನ್, ರಾಮದೂತ ಸ್ಕ್ವಾಡ್ ತಂಡದ ಗಣೇಶ್ ಹೆಗಡೆ ಬೆಸ್ಟ್ ಬೌಲರ್ ಹಾಗೂ ಸಾನ್ವಿ ವಾರಿಯರ್ಸ್ ತಂಡದ ನಾಯಕ ಪವನ್ ನಾಯಕ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.

ವಿಜೇತ ರಾಯಲ್ ಸಾಮ್ರಾಟ್ ತಂಡಕ್ಕೆ ₹33,333 ನಗದು ಹಾಗೂ ಆಕರ್ಷಕ ಟ್ರೋಫಿ, ರನ್ನರ್ ಅಪ್ ಸಾನ್ವಿ ವಾರಿಯರ್ಸ್ ತಂಡಕ್ಕೆ ₹22,222 ನಗದು ಹಾಗೂ ಟ್ರೋಫಿ ವಿತರಿಸಲಾಯಿತು.
ಕೊನೆಯಲ್ಲಿ, ಆಯೋಜಕರು ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳ ಮಾಲೀಕರು, ಆಟಗಾರರು, ಸಂಸ್ಥೆಯ ಸದಸ್ಯರು, ಊರಿನ ಹಿರಿಯರು ಹಾಗೂ ಸಹಕರಿಸಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.

More Stories
ಮೀನುಗಾರಿಕೆಗೆ ತೆರಳಿದ ವ್ಯಕ್ತಿ ಸಮುದ್ರದಲ್ಲಿ ಮುಳುಗಿ ಸಾವು
ಭಟ್ಕಳದಲ್ಲಿ ಎ.19ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ
ಭಟ್ಕಳದಲ್ಲಿ ನಕಲಿ ಆಧಾರ್–ಪಹಣಿ ಮೂಲಕ ನ್ಯಾಯಾಲಯ ವಂಚನೆ: ಆರೋಪಿತ ಬಂಧನ