ಭಟ್ಕಳ-ಸಾಗರ ರಸ್ತೆಯಲ್ಲಿರುವ ಅತ್ಯಂತ ಪ್ರಾಚೀನ ಮರಂಬಳ್ಳಿಯ ಶ್ರೀ ಯೋಗ ನರಸಿಂಹ ದೇವಸ್ಥಾನದಲ್ಲಿ ಇದೇ ಬರುವ ಏಪ್ರಿಲ್ 30, 2026 (ಗುರುವಾರ) ರಂದು ನರಸಿಂಹ ಜಯಂತಿಯ ಪ್ರಯುಕ್ತ ವರ್ಧಂತಿ ಮಹೋತ್ಸವ ಹಾಗೂ ಲಕ್ಷತುಳಸಿ ಅರ್ಚನೆ ಅತಿ ವಿಜೃಂಭಣೆಯಿಂದ ನಡೆಯಲಿದೆ. ಮುರ್ಡೇಶ್ವರದ ಪ್ರಸಿದ್ಧ ಪುರೋಹಿತರಾದ ವೇದಮೂರ್ತಿ ಶ್ರೀ ಜಯರಾಮ ಅಡಿಗರು ಇವರ ಪ್ರಧಾನ ಆಚಾರ್ಯತ್ವದಲ್ಲಿ ಸಮಸ್ತ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ.
ಕಾರ್ಯಕ್ರಮದ ವಿವರಗಳು ಪ್ರಾತಃಕಾಲದ ಸೇವೆಗಳು:
- ಗಣಪತಿ ಪೂಜೆ ಹಾಗೂ ಪುಣ್ಯಾಹ.
- ಶ್ರೀ ದೇವರಿಗೆ ಶ್ರೀಸೂಕ್ತ ಮತ್ತು ಪುರುಷ ಸೂಕ್ತಾಭಿಷೇಕ.
- ಕಲಾವೃದ್ಧಿ ಹವನ, ಗಣಪತಿ ಹವನ ಮತ್ತು ಶ್ರೀ ನರಸಿಂಹ ಹವನ.
- ವಿಷ್ಣು ಸಹಸ್ರ ನಾಮ ಪಾರಾಯಣ ಹಾಗೂ ಲಕ್ಷ್ಮೀ ನರಸಿಂಹ ಕರಾವಲಂಬ ಸ್ತೋತ್ರ ಪಠಣ.
- ವಿಶೇಷ ಆಕರ್ಷಣೆಯಾಗಿ ಲಕ್ಷತುಳಸಿ ಅರ್ಚನೆ.
- ಪೂರ್ಣಾಹುತಿ, ಮಹಾಪೂಜೆ ಮತ್ತು ಮಹಾಮಂಗಳಾರತಿ.
- ತೀರ್ಥ-ಪ್ರಸಾದ ವಿತರಣೆ ಹಾಗೂ ಸಾರ್ವಜನಿಕರಿಗೆ ಮಹಾ ಅನ್ನಸಂತರ್ಪಣೆ.
ಸಂಜೆ ಕಾರ್ಯಕ್ರಮ: ರಾತ್ರಿ 8:00 ಗಂಟೆಗೆ ಮಹಾಪೂಜೆ ಮತ್ತು ಮಹಾಮಂಗಳಾರತಿ.ನಂತರ ವಿವಿಧ ಭಜನಾ ತಂಡಗಳಿಂದ ಭಕ್ತಿಪೂರ್ವಕ
ಭಜನಾ ಕಾರ್ಯಕ್ರಮ.
ಮರಂಬಳ್ಳಿ ಉತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಈ ಪುಣ್ಯ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ತನು-ಮನ-ಧನಗಳಿಂದ ಸಹಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದ್ದಾರೆ.

About The Author


More Stories
ಯುವಕರಲ್ಲಿ ಕ್ರೀಡಾ ಪ್ರೇಮ ಬೆಳೆಸಿಕೊಳ್ಳಬೇಕು: ರಾಜು ಮಂಜಪ್ಪ ನಾಯ್ಕ
ಅನಾಥವಾಗಿ ಕೊನೆಯುಸಿರೆಳೆದ ಭಿಕ್ಷುಕ: ಕುಟುಂಬಸ್ಥರು ಬಾರದ ಹಿನ್ನೆಲೆ ಸಮಾಜ ಸೇವಕರಿಂದ ಅಂತ್ಯಕ್ರಿಯೆ
ನಿನಾದ ಕಲ್ಚರಲ್ ಅಕಾಡೆಮಿಗೆ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ಪ್ರದಾನ