ಕಾರ್ಕಳ: ಅಜೆಕಾರು ಶ್ರೀ ಮಹಾವಿಷ್ಣು ದೇವರ ವಾರ್ಷಿಕ ರಥೋತ್ಸವವು ಏ. 18 ರಂದು ಜರುಗಿತು.
ವೇದಮೂರ್ತಿ ಉಡುಪಿ ವಾದಿರಾಜ ತಂತ್ರಿಯವರ ನೇತೃತ್ವದಲ್ಲಿ ದೇವರ ಉತ್ಸವ ಬಲಿ, ರಂಗಪೂಜೆ, ಪಲ್ಲಪೂಜೆ ಮುಂತಾದ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಷ್ಣುಮೂರ್ತಿ ದೇವರ ಉತ್ಸವ ಮೂರ್ತಿಯ ರಥಾರೋಹಣ ನಡೆಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾನ ಸಮಿತಿಯ ಅಧ್ಯಕ್ಷ ಭರತ್ ಶೆಟ್ಟಿ ಅಜೆಕಾರು, ದೇವಸ್ಯ ಶಿವರಾಮ ಶೆಟ್ಟಿ, ವಿಜಯ ಶೆಟ್ಟಿ,ಭಾಸ್ಕರ ಶೆಟ್ಟಿ ,ಕುಂಠಿನಿ, ಸುಜಯ ಶೆಟ್ಟಿ, ಸಮಿತಿ ಸದಸ್ಯರಾದ ಮಜಲುಮನೆ ಪ್ರಕಾಶ್ ಶೆಟ್ಟಿ, ಯಶೋಧಾ ಶೆಟ್ಟಿ, ಪ್ರೀತೇಶ್ ಶೆಟ್ಟಿ,ಸತೀಶ್ ನಾಯಕ್, ಅರ್ಚಕರಾದ ರಂಗನಾಥ ಭಟ್, ಕೃಷ್ಣಮೂರ್ತಿ ಭಟ್ ಸೇರಿದಂತೆ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
ಸಂಜೆ ರಥೋತ್ಸವ ,ಕೆರೆ ದೀಪ, ಉತ್ಸವ ಬಲಿ ಹಾಗೂ ಧರ್ಮದೈವಗಳ ನೇಮೋತ್ಸವ,ಅವಭೃತ ಸ್ನಾನ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳು ನಡೆದವು. ವರದಿ : ಅರುಣ ಭಟ್ ಕಾರ್ಕಳ
About The Author


More Stories
ಮೊದಲ ಅಕ್ಷರ ಪಾಠ ಕಲಿಸಿದ ಶಿಕ್ಷಕಿಗೆ ಗೌರವಾರ್ಪಣೆ: ಶುಭದರಾವ್ ಅವರಿಂದ ಗುರುಭಕ್ತಿ
ಮುನಿಯಾಲಿನಲ್ಲಿ ಸಹಸ್ರ ಶ್ರೀಕೃಷ್ಣ ನಾಮ ತುಳಸಿ ದಳ ಅರ್ಚನೆ
ವಿಶ್ವ ಕ್ರೀಡಾ ದಿನಾಚರಣೆ