ಕಾರ್ಕಳ : ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾ ಸ್ವಾಮೀಜಿಯವರು ಪೀಠಾಧೀಶ್ವರರು, ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಕಟಪಾಡಿ ಪಡುಕುತ್ಯಾರ ಇವರ ದಿವ್ಯ ಉಪಸ್ಥಿತಿಯಲ್ಲಿ ಮಹೋತ್ಸವ ಹಾಗು ಶ್ರೀ ಮನ್ಮಹಾರರ್ಥೋತ್ಸವ, ಕ್ಷೇತ್ರದ ತಂತ್ರಿಗಳಾದ ಬ್ರಹ್ಮ ಶ್ರೀ ವೇದಮೂರ್ತಿ ಕೆ. ಉಮೇಶ್ ತಂತ್ರಿವರೇಣ್ಯ ರ ಆಚಾರ್ಯತ್ವದಲ್ಲಿ ಪ್ರಧಾನ ಅರ್ಚಕರಾದ ಪುರೋಹಿತ ವಿಠಲ ಆಚಾರ್ಯ ಇವರ ಪೌರೋಹಿತ್ಯದಲ್ಲಿ ಧಾರ್ಮಿಕ ಪೂಜಾ ವಿಧಿ ವಿಧಾನ ಗಳು ದಿನಾಂಕ ಏಪ್ರಿಲ್ 27 ರಿಂದ ಮೇ 5 ರ ತನಕ ಮಹೋತ್ಸವ ಮತ್ತು ಮನ್ಮ ಹಾರರ್ಥೋತ್ಸವ ಬಲಿ ಉತ್ಸವ ಕಟ್ಟೆ ಪೂಜೆ ಹಾಗೂ ದೈವಗಳ ಸಿರಿ ಸಿಂಗಾರದ ನೇಮೋತ್ಸವ ವಿಜ್ರಂಭಣೆಯಿಂದ ನಡೆಯುತ್ತಿದೆ. ಊರ ಪರ ಊರ ವಿಶ್ವಕರ್ಮ ಸಮಾಜ ಭಾಂದವರು ಮಹೋತ್ಸವದಲ್ಲಿ ಭಾಗವಹಿಸಿ ಶ್ರೀ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾದರು.
ಶ್ರೀ ಕ್ಷೇತ್ರದಲ್ಲಿ ಮಹಾ ಅನ್ನ ಸಂತರ್ಪಣೆ ವಿಜೃಂಭಣೆಯಿಂದ ನಡೆಯಿತು. ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ, ಪಿ. ರವಿ ಆಚಾರ್ಯ ಪೆರ್ವಾಜೆ ಸುರೇಶ್ ಆಚಾರ್ಯ ನಿಟ್ಟೆ, ಜೊತೆ ಮೊಕ್ತೇಸರ ರು. ಸಲಹಾ ಸಮಿತಿಯ ಅಧ್ಯಕ್ಷ ರು ಮತ್ತು ಸರ್ವ ಸದಸ್ಯರು, ಶ್ರೀ ಕಾಳಿಕಾಂಬಾ ಭಜನಾ ಸೇವಾ ಸಮಿತಿ, ವಿಶ್ವಕರ್ಮ ಮಹಿಳಾ ಮಂಡಳಿ ಹಾಗೂ ಟೆಂಪಲ್ ಡೆವಲಪ್ ಮೆಂಟ್ ಟ್ರಸ್ಟ್ ಹಾಗೂ ಗ್ರಾಮ ಕೂಡು ವ ಲಿಯ ಮೊಕ್ತೇಸರ ರು ಮಹೋತ್ಸವದಲ್ಲಿ ಭಾಗವಹಿಸಿದರು.
ವರದಿ : ಅರುಣ ಭಟ್ ಕಾರ್ಕಳ

More Stories
ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದಲ್ಲಿ ವೈಭವದ ಜಾತ್ರಾ ಮಹೋತ್ಸವ – ವ್ಯಾಘ್ರ ಚಾಮುಂಡಿ ದೈವದ ಭಂಡಾರ ಮೆರವಣಿಗೆ
ಕಾರ್ಕಳದಲ್ಲಿ ಸಿಐಟಿಯು ನೇತ್ರತ್ವದಲ್ಲಿ ಮೇ ದಿನಾಚರಣೆ ಆಚರಣೆ
ಕಾರ್ಕಳ ನಿಟ್ಟೆ ಯಲ್ಲಿ ಮಕ್ಕಳ ಬೇಸಿಗೆ ಶಿಬಿರ