

ಕಾರ್ಕಳ: ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಭಕ್ತಿ ಹಾಗೂ ಸಂಭ್ರಮದ ವಾತಾವರಣದಲ್ಲಿ ಅದ್ದೂರಿಯಾಗಿ ನೆರವೇರಿತು. ಮಹೋತ್ಸವದ ಅಂಗವಾಗಿ ವ್ಯಾಘ್ರ ಚಾಮುಂಡಿ ದೈವದ ಭಂಡಾರವು ನೆಕ್ಲಾಜೆ ಗುತ್ತು ರಾಘವೇಂದ್ರ ಉಪಾಧ್ಯಾಯ ಅವರ ಮನೆಯಿಂದ ಭಕ್ತರ ಘೋಷಣೆಗಳೊಂದಿಗೆ ಹೊರಟು ದೇವಸ್ಥಾನದ ಮುಂಭಾಗಕ್ಕೆ ಆಗಮಿಸಿತು.


ಈ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ದೈವಗಳ ಸಿರಿ ಸಿಂಗಾರದ ನೇಮೋತ್ಸವ ಭಕ್ತಿಭಾವದಿಂದ ನಡೆಯಿತು. ದೈವಗಳಿಗೆ ಅಲಂಕಾರ ಹಾಗೂ ಪೂಜಾ ವಿಧಿವಿಧಾನಗಳು ಸಂಪ್ರದಾಯಬದ್ಧವಾಗಿ ನೆರವೇರಿದವು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ ಸೇರಿದಂತೆ ಇತರ ಆಡಳಿತ ಮೊಕ್ತೇಸರರು, ಅರ್ಚಕರು, ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೈವಗಳ ಸಿರಿ ಮುಡಿ ಹಾಗೂ ಗಂಧ ಪ್ರಸಾದ ಸ್ವೀಕರಿಸಿದರು.
ಈ ಕುರಿತು ಶಿವ ಪ್ರಸಾದ್ ಭಟ್ ಮತ್ತು ರಾಘವೇಂದ್ರ ಉಪಾಧ್ಯಾಯ ಮಾಹಿತಿ ನೀಡಿದರು.
ವರದಿ: ಅರುಣ್ ಭಟ್, ಕಾರ್ಕಳ.

About The Author




More Stories
ಅಧಿಕಾರಿಗಳು ಬುದ್ಧಿವಂತಿಕೆಯಿಂದ ಮಾತ್ರವಲ್ಲ, ಹೃದಯವಂತಿಕೆಯಿಂದಲೂ ಕೆಲಸ ಮಾಡಲಿ: ಸಚಿವ ಯು.ಟಿ. ಖಾದರ್
ಕಾರ್ಕಳದಲ್ಲಿ ರಸ್ತೆ ದುಸ್ಥಿತಿ ವಿರುದ್ಧ ಕಾಂಗ್ರೆಸ್ನ 20 ಕಿ.ಮೀ. ಬೃಹತ್ ಜಾಥಾ! ಬಿಜೆಪಿ ವಿರುದ್ಧ ಆಕ್ರೋಶ
ಕಾರ್ಕಳ ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನ ಜಾತ್ರಾ ಮಹೋತ್ಸವ