April 30, 2026

ಬರ್ಗಿಯಲ್ಲಿ ವಿಶ್ವ ಕ್ರಿಕೆಟ್ ಕೋಚರ್ ರಾಘವೇಂದ್ರ ದಿವಗಿ ತಂದೆಗೆ ಸನ್ಮಾನ

ಬರ್ಗಿ ಸಂಸ್ಕೃತೋತ್ಸವದಲ್ಲಿ “ಜೀವ ಭಾವ ಮೋಹ ಸಿಂಚನ” ಉಪಾದಿ ಪ್ರದಾನ


ಕುಮಟಾ : ತಾಲ್ಲೂಕಿನ ಬರ್ಗಿಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠವು ನಾಗನೆಲೆಯ ಕನ್ನಡ ಭಾರತಿ ಪ್ರಪಂಚ, ಕರ್ನಾಟಕ ಸಂಸ್ಕೃತ ಪರಿಷತ್, ಡಾ. ಗಜಾನನ್ ನಾಯಕ್ ಅಭಿಮಾನಿ ಬಳಗ, ಕರ್ನಾಟಕ ರಾಜ್ಯ ಬೋಧಕರ ಸಂಘ,ಬರ್ಗಿ ಪ್ರೌಢ ಶಾಲೆಯ ಶ್ರೀ ಘಟಬೀರ ಪ್ರಸಾದಿತ ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಕರ್ನಾಟಕ ರಣಧೀರ ವೇದಿಕೆಯ ಸಯುಕ್ತ ಆಶ್ರಯದಲ್ಲಿ ಆಯೋಜಿಸಿದ “ಬರ್ಗಿ ಸಂಸ್ಕೃತೋತ್ಸವ” ದಲ್ಲಿ ವಿಶ್ವ ಖ್ಯಾತಿಯ ಕ್ರಿಕೆಟ್ ಕೋಚರ್ ರಾಘವೇಂದ್ರ ದಿವಗಿಯವರ ತೀರ್ಥರೂಪರಾದ ಮಾಸೂರಿನ ಶ್ರೀ ಬಬ್ರುಲಿಂಗೇಶ್ವರ ಪ್ರೌಢ ಶಾಲೆಯ ವಿಶ್ರಾಂತ ಆಂಗ್ಲ ಭಾಷಾ ಶಿಕ್ಷಕರಾದ ಮೋಹನ ಭಂಡಾರಿಯವರನ್ನು ” ಜೀವ ಭಾವ ಮೋಹ ಸಿಂಚನ ” ಅಭಿದಾನದೊಂದಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.


ಮೋಹನ ಭಂಡಾರಿಯವರ ಶೈಕ್ಷಣಿಕ ಸೇವೆ, ಸಾಮಾಜಿಕ ಕಳಕಳಿ, ಸಾರ್ವಜನಿಕ ಸಂಬಂಧ, ಭಾರತೀಯ ಸಂಸ್ಕೃತಿ ಸಂಸ್ಕೃತದಲ್ಲಿನ ಅಭಿಮಾನ, ಆಸ್ತಿಕ ಮನೋಭಾವ ಹಾಗೂ ಉದಾಹರತೆಯೊಂದಿಗೆ ಕಟ್ಟಿಕೊಂಡ ಹಿರಿತನದ ಮುತ್ಸದ್ದಿಕೆಯ ವ್ಯಕ್ತಿತ್ವದಿಂದಾಗಿ ಬರ್ಗಿ ಸಂಸ್ಕೃತೋತ್ಸವದಲ್ಲಿ ಸನ್ಮಾನಿಸಲ್ಪಡಲು ಅರ್ಹರಾಗಿದ್ದಾರೆಂದು ಸಮಾರಂಭದ ಪ್ರಧಾನ ಸಂಘಟಕರಾದ ಸಂಸ್ಕೃತ ಅಧ್ಯಾಪಕ ಮಂಜುನಾಥ ಗಾಂವ್ಕರ್ ಬರ್ಗಿಯವರು ನುಡಿದರು.


ಸನ್ಮಾನವನ್ನು ಸ್ವೀಕರಿಸಿದ ಮೋಹನ ಭಂಡಾರಿಯವರು, ಸಂಸ್ಕೃತದ ಕಾರ್ಯಕ್ರಮದಲ್ಲಿ ತನ್ನ ಅಭಿನಂದನೆಯನ್ನು ಭಾರತಮಾತೆಗೆ ಪ್ರಸಾದವೆಂಬ ಕತಾರ್ಥತೆಯ ಭಾವನೆಯಿಂದ ಸ್ವೀಕರಿಸಿರುವುದಾಗಿ ನುಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತದ ನಿಕಟಪೂರ್ವ ಸದಸ್ಯರಾದ ಗಾಯತ್ರಿ ಗೌಡ, ಪ್ರದೀಪ ನಾಯಕ ದೇವರಬಾವಿ, ತಾಲ್ಲೂಕಾ ಪಂಚಾಯತ್ ಮಾಜಿ ಅಧ್ಯಕ್ಷೆ ವಿಜಯಾ ಪಟಗಾರ, ಕನ್ನಡ ಭಾರತಿ ಪ್ರಪಂಚದ ಸಂಚಾಲಕ ನಾರಾಯಣ ನಾಗು ನಾಯಕ, ಬರ್ಗಿ ಪ್ರೌಢ ಶಾಲಾ ಹಳೆಯ ವಿದ್ಯಾರ್ಥಿಗಳ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ ಜೈರಾಮ್ ನಾಯ್ಕ, ಕರ್ನಾಟಕ ರಣಧೀರ ವೇದಿಕೆಯ ಕುಮಟಾ ತಾಲ್ಲೂಕಾ ಘಟಕದ ಅಧ್ಯಕ್ಷ ಮಿರ್ಜಾಾನಿನ ಕನ್ನಡದ ಸಮೀರರು ಹಾಗೂ ನಿವೃತ್ತ ಆರಕ್ಷಕ ಉಪನಿರೀಕ್ಷಕ ಸುರೇಶ ನಾಯಕ ಮೊದಲಾದವರಿದ್ದರು.

About The Author

error: Content is protected !!