ಹೊನ್ನಾವರ; ಕನ್ನಡ ಸಾಹಿತ್ಯ ಪರಿಷತ್ತು ಹೊನ್ನಾವರ ತಾಲೂಕು ಘಟಕ ಇದರ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನ ದಿನಾಚರಣೆಯನ್ನು ಆಚರಿಸಲಾಯಿತು.


ಹಿರಿಯ ಸಾಹಿತಿ ಸುಮುಖಾನಂದ
ಜಲವಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕನ್ನಡ ಭಾಷೆ ಅತ್ಯಂತ ಪ್ರಾಚೀನವಾದದು, ಇದನ್ನು ಉಳಿಸಿ ಬೆಳೆಸುವ ಮಹತ್ವಪೂರ್ಣ ಕಾರ್ಯವನ್ನು ಸಾಹಿತ್ಯ ಪರಿಷತ್ತು ಮಾಡುತ್ತಾ ಬಂದಿದೆ. ಯಾವುದೇ ಹಣಕಾಸಿನ ನೆರವು ಇಲ್ಲದಿದ್ದರೂ ಕನ್ನಡ ಕಟ್ಟುವ ಕೆಲಸವನ್ನು ಸಾಹಿತ್ಯ ಪರಿಷತ್ತು ಮಾಡುತ್ತಿದೆ ಎಂದರು.

ಉಪನ್ಯಾಸಕರಾಗಿ ಆಗಮಿಸಿದ ಎಂ ಎಸ್ ಹೆಗಡೆ ಗುಣವಂತೆ ಮಾತನಾಡಿ ಕನ್ನಡವನ್ನು ಉಳಿಸಿ ಬೆಳೆಸಿ ಸಮೃದ್ಧಿ ಗೊಳಿಸುವ ಉದ್ದೇಶಕ್ಕಾಗಿ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿದೆ ಇದು ಸಾಹಿತ್ಯ ಬೆಳವಣಿಗೆಯ ಪೂರಕವಾಗಿ ಅತಿ ಉಪಯುಕ್ತ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಎಚ್. ಗೌಡ ಮಾತನಾಡಿ ಸಾಹಿತ್ಯ ಪರಿಷತ್ತು ಸುಧೀರ್ಘವಾದ ಅವಧಿಯಲ್ಲಿ ಕನ್ನಡವನ್ನು ಅಭಿವೃದ್ಧಿಪಡಿಸುವ ಕಾಯಕವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತಾ ಬಂದಿದೆ ಎಂದರು ಅತಿಥಿ ಸಾಹಿತಿ ಮಾಧವಿ ಭಂಡಾರಿ, ಕರವೇ ಅಧ್ಯಕ್ಷ ಮಂಜುನಾಥ ಗೌಡ, ಜಯ ಕರ್ನಾಟಕ ಸಂಘಟನೆಯ ಪ್ರಮುಖರಾದ ಪ್ರದೀಪ ಶೆಟ್ಟಿ, ಕಲಾವಿದ ಗಣೇಶ ಭಂಡಾರಿ ಮಾತನಾಡಿದರು
ವೇದಿಕೆಯಲ್ಲಿ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ನಾರಾಯಣ ಹೆಗಡೆ, ಜನಾರ್ಧನ ಕಾಣಕೋಣಕಾರ, ಸದಸ್ಯರಾದ ಸಾಧನ ಬರ್ಗಿ, ಶುಭ ಸಭಾಹಿತ, ಎಂ ಡಿ ಹರಿಕಾಂತ, ಗ್ರಂಥಪಾಲಕಿ ಜ್ಯೋತಿ ಶೆಟ್ಟಿ ಇದ್ದರು. ಕೇಶವ ಶೆಟ್ಟಿ ಸ್ವಾಗತಿಸಿ, ಮಂಜುನಾಥ ಶೆಟ್ಟಿ ವಂದಿಸಿದರು. ಮಹೇಶ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.

More Stories
ಅಗ್ನಿವೀರ್ ಹುದ್ದೆಗೆ ಆಯ್ಕೆಯಾದ ನಗರೆಯ ಯುವಕ ವಿನಯ ನಾಯ್ಕಗೆ ಗೌರವ ಪೂರ್ವಕ ಸನ್ಮಾನ
ಜೂನ್ 27ಕ್ಕೆ ತಬಲಾ ಮಾಂತ್ರಿಕ ಕಲ್ಭಾಗ ಗೋಪಾಲಕೃಷ್ಣ ಹೆಗಡೆ ಷಷ್ಠಬ್ಧಿ ಅಭಿನಂದನೆ, ಪುಸ್ತಕ ಬಿಡುಗಡೆ
ಸರ್ಕಾರಿ ಶಾಲೆಗಳ ಬೆಳವಣಿಗೆಗೆ ದಾನಿಗಳ ಸಹಕಾರ ಅಗತ್ಯ; ಬಿಇಒ ಜಯಶ್ರೀ ನಾಯ್ಕ