May 12, 2026

ಸಾವಿರ ವರ್ಷಗಳ ಅಳಿವಿನ ಅಂಚಿನಲ್ಲಿದ್ದ ಶ್ರೀ ಮಂಟಿ ಈಶ್ವರ ದೇವಾಲಯವನ್ನು ನೂತನವಾಗಿ ನಿರ್ಮಿಸಲು ಮುಂದಾದ ಬೆಂಗಳೂರಿನ ಶ್ರೀ ಶಂಖು ಕರ್ಣ ಚಾರಿಟಬಲ್ ಟ್ರಸ್ಟ್

ಕೃಷ್ಣರಟಜಪೇಟೆ : ತಾಲ್ಲೂಕಿನ ಶೀಳನೆರೆ ಹೋಬಳಿಯ ಮರುವನಹಳ್ಳಿ ಹಾಗೂ ಸಿಂಧಘಟ್ಟ ಗ್ರಾಮಗಳ ನಡುವಿನ ಮರುವನಹಳ್ಳಿ ಗ್ರಾಮದ ಪರಿಮಿತಿಗೆ ಸೇರುವ ಬಳಪದ ಕಲ್ಲುಗಳುಳ್ಳ ಮಂಟಿ ಇರುವ ಸ್ಥಳದಲ್ಲಿ ಚೋಳರ ಕಾಲದಲ್ಲಿ ಈಶ್ವರ ದೇವಾಲಯ ನಿರ್ಮಾಣವಾಗಿದ್ದು ಮಂಟಿ ಈಶ್ವರ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ಇಟ್ಟಿಗೆ ಕಲ್ಲು. ಗಾರೆ ಸುಣ್ಣ ಮುಂತಾದುವುಗಳನ್ನು ಬಳಸಿ ನಿರ್ಮಿಸಿರುವ ಈ ದೇವಾಲಯ ಸಂಪೂರ್ಣವಾಗಿ. ಶಿಥಿಲವಾಗಿ ಹಲವು ಕಡೆ ಬಿದ್ದುಹೋಗಿದೆ. ಗರ್ಭಗುಡಿ ಹೊರತುಪಡಿಸಿದರೆ ಇತರೆ ಎಲ್ಲಾ ಪ್ರಾಂಗಣಗಳು ಹಾಗೂ ಮೇಲ್ಛಾವಣಿಗಳು ಭಿನ್ನವಾಗಿದ್ದು ಕುಸಿದುಹೋಗಿವೆ. ದೇವಾಲಯ ನಿರ್ಮಾಣದ ಸಮಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿ. ಆನೆ ಚಾಮುಂಡೇಶ್ವರಿ ಸೇರಿದಂತೆ ವಿವಿಧ ಮೂರ್ತಿಗಳು ತನ್ನ ಮೂಲಸ್ವರೂಪ ಕಳೆದುಕೊಂಡು ಭಿನ್ನವಾಗಿವೆ. ದೇಗುಲದ ಎರಡು ಬದಿಗಳಲ್ಲಿ ದ್ವಾರಪಾಲಕರು ಸ್ವಾಗತಿಸುವ ಚಿತ್ತ ಕೆತ್ತನೆಯಾಗಿದೆ. ಸಾವಿರ ವರ್ಷಗಳಿಗೂ ಹಳೆಯದಾದ ಈ ದೇವಾಲಯ ಮಳೆ. ಬಿಸಿಲು. ಪ್ರಾಕೃತಿಕ ವಿಕೋಪಗಳಿಗೆ ಸಿಲುಕಿ ಸಂಪೂರ್ಣ ಶಿಥಿಲವಾಗಿಹೋಗಿದೆ.
ಗ್ರಾಮಸ್ಥರ ಆಸಕ್ತಿಯ ಫಲವಾಗಿ ಈಗ ಶಿಥಿಲವಾಗಿರುವ ಪುರಾತನ ಕಾಲದ ದೇವಾಲಯವನ್ನು ಒಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಮರು ನಿರ್ಮಾಣ ಮಾಡಿ ಜೀರ್ಣೋದ್ದಾರ ಮಾಡಲು ಶ್ರೀ ಶಂಖು ಕರ್ಣ ಚಾರಿಟಬಲ್ ಟ್ರಸ್ಟ್ ಮುಂದಾಗಿದ್ದು ದಿನಾಂಕ 09-05-2026 ರಿಂದ 11-05-2026 ವರೆಗೆ ಮೂರು ದಿನಗಳ ಕಾಲ ಕಳಾಕರ್ಷಣ ಮಹೋತ್ಸವದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪೂಜಾ ಕಂಕೈರ್ಯಗಳ ಮೊದಲ ದಿನ ಮಂಗಳವಾದ್ಯಗಳೊAದಿಗೆ. ಮಂಗಳ ದ್ರವ್ಯ. ಗ್ರಾಮ ಪ್ರದಕ್ಷಿಣೆ. ಆಲಯ ಪ್ರವೇಶ. ಮಹಾಗಣಪತಿ ಪೂಜಡ ಸ್ವಸ್ತಿ. ಪುಣ್ಯಾಹ ವಾಚನ. ಪಂಚಗವ್ಯಾರಾಧನೆ. ಅಂಕುರಾರ್ಪಣ ಶಾಲಾ ವಾಸ್ತು ನಡೆದವು ಎರಡನೆ ದಿನ ಗಂಗಾಪೂಜೆ ಆಲಯ ಪ್ರವೇಶ. ಕುಂಭ ಸ್ಥಾಪನೆ. ಬಿಂಬಾಲಯ ವಾಸ್ತು ಕಳಾಕರ್ಷಣಾಂಗ ವಿಮಾನ ಅಧಿವಾಸ. ದುರ್ಗಾಹೋಮ ನಡೆದವು ಮೂರನೇ. ಹಾಗೂ ಅಂತಿಮ ದಿನ. ಅಗ್ನಿಪಯಣ. ಕುಂಭಾರಾದನೆ. ಆಲಯ ಬಲಿಹರಣ. ಕೂಷ್ಮಾಂಡ ಛೇದನ. ಮಹಾದರ್ಶನ. ಮಂಟಿ ಈಶ್ವರ ಸ್ವಾಮಿಯ ಬಿಂಬ ಕಳಾಕರ್ಷಣೆ. ಬಾಲಾಲಯ ಪ್ರತಿಷ್ಠೆ. ಅನ್ನಸಂತರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳು ನೂರಾರು ಙಕ್ತರ ಸಮ್ಮುಖದಲ್ಲಿ ಜರುಗಿದವು.

ಕಾರ್ಯಕ್ರಮದಲ್ಲಿ. ಶ್ರೀ ಶಂಖು ಕರ್ಣ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ. ಸುಹಾಸ್. ಕೊತ್ತತ್ಯಿ ಎಲೆತೋಟದ ಕೇತಮ್ಮ ಮಠದ ಪುಟ್ಟಸ್ವಾಮಿ ಸ್ವಾಮೀಜಿ. ಟ್ರಸ್ಟ್ ಸದಸ್ಯರುಗಳಾದ ಮನೋರಾಜ್. ಪ್ರದೀಪ್. ಕುಮಾರ್. ದಿನೇಶ. ಪುನೀತ್. ಅರವಿಂದ್. ಯೋಗೀಶ್. ಸೇರಿದಂತೆ ಗ್ರಾಮದ ಮುಖಂಡರುಗಳು. ಭಕ್ತ ಸಮೂಹ ಹಾಜರಿದ್ದರು.
ವರದಿ : ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

About The Author

error: Content is protected !!