ಭಟ್ಕಳ: ಇಲ್ಲಿನ ಬೋಯಿರಕೇರಿಯ ಪುರಾತನ ಪಶುಪತಿ ದೇವಸ್ಥಾನದಲ್ಲಿ ನೂತನ ಶಿಲಾಮಯ ದೇವಾಲಯ ನಿರ್ಮಾಣದ ಅಂಗವಾಗಿ ನಿಧಿ ಕುಂಭ ಸಮರ್ಪಣಾ ಕಾರ್ಯಕ್ರಮವು ಶ್ರದ್ಧಾ-ಭಕ್ತಿಯಿಂದ ನೆರವೇರಿತು. ಗೋಕರ್ಣದ ವೇದಮೂರ್ತಿ ಶ್ರೀನಿವಾಸ ಅಡಿಗ ಅವರ ನೇತೃತ್ವದಲ್ಲಿ ಅರ್ಚಕ ರಾಘು ಭಟ್ಟ ಹಾಗೂ ಅರ್ಚಕರ ತಂಡವು ವಿವಿಧ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿತು. ಬಳಿಕ ನೂತನ ದೇವಾಲಯದ ಗರ್ಭಗುಡಿಯಲ್ಲಿ ನಿಧಿ ಕುಂಭ ಸಮರ್ಪಣೆಯ ಕಾರ್ಯ ಜರುಗಿತು.
ಈ ವೇಳೆ ಭಕ್ತರು ತಮ್ಮ ಇಷ್ಟಾನುಸಾರ ಚಿನ್ನ, ಬೆಳ್ಳಿ, ನವರತ್ನ ಸೇರಿದಂತೆ ವಿವಿಧ ಕಾಣಿಕೆಗಳನ್ನು ನಿಧಿ ಕುಂಭಕ್ಕೆ ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗೋವಿಂದ ನಾಯ್ಕ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಲಚ್ಚಯ್ಯ ನಾಯ್ಕ, ಪ್ರಮುಖರಾದ ಕೇದಾರ ಕೊಲ್ಲೆ, ಮಳ್ಳಾ ನಾಯ್ಕ, ಚಂದ್ರಹಾಸ ಭಟ್ಟ, ಕೃಷ್ಣ ನಾಯ್ಕ, ಶ್ರೀಕಾಂತ, ಶಿವಾನಿ ಶಾಂತಾರಾಮ, ಕೃಷ್ಣ ಮಹಾಲೆ, ಉದಯ ಮಡಿವಾಳ, ವಿನಾಯಕ ಮಡಿವಾಳ, ನಾಗರಾಜ ಶೇಟ್, ವಿಠಲ್ ನಾಯ್ಕ, ರಾಮಚಂದ್ರ ನಾಯ್ಕ, ಶ್ರೀಪಾದ ಕಂಚುಗಾರ, ವೆಂಕಟೇಶ ಮೊಗೇರ ಸೇರಿದಂತೆ ವಿವಿಧ ದೇವಸ್ಥಾನಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಭಕ್ತರು ಭಾಗವಹಿಸಿದ್ದರು.
About The Author


More Stories
ಯುವಕರಲ್ಲಿ ಕ್ರೀಡಾ ಪ್ರೇಮ ಬೆಳೆಸಿಕೊಳ್ಳಬೇಕು: ರಾಜು ಮಂಜಪ್ಪ ನಾಯ್ಕ
ಅನಾಥವಾಗಿ ಕೊನೆಯುಸಿರೆಳೆದ ಭಿಕ್ಷುಕ: ಕುಟುಂಬಸ್ಥರು ಬಾರದ ಹಿನ್ನೆಲೆ ಸಮಾಜ ಸೇವಕರಿಂದ ಅಂತ್ಯಕ್ರಿಯೆ
ನಿನಾದ ಕಲ್ಚರಲ್ ಅಕಾಡೆಮಿಗೆ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ಪ್ರದಾನ