ಭಟ್ಕಳ : ಅಳ್ವೇಕೋಡಿ ಶ್ರೀ ದುರ್ಗಾ ಮೊಗೇರ್ ಚಾರಿಟೇಬಲ್ ಟ್ರಸ್ಟ್ನ ಹೊಸ ಕಟ್ಟಡದ ಅಡಿಗಲ್ಲು ಸಮಾರಂಭ ಭಕ್ತಿಭಾವ, ಸಂಭ್ರಮ ಹಾಗೂ ಹರ್ಷೋದ್ಗಾರದ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಸಮಾಜ ಸೇವೆಯ ಮಹತ್ವಾಕಾಂಕ್ಷಿ ಕನಸಿಗೆ ಭದ್ರ ಅಡಿಪಾಯ ಹಾಕಿದ ಈ ಶುಭ ಕ್ಷಣಕ್ಕೆ ಊರಿನ ಅನೇಕ ಗಣ್ಯರು, ಮುಖಂಡರು ಹಾಗೂ ನಾಗರಿಕರು ಸಾಕ್ಷಿಯಾದರು.


ಈ ಶುಭ ಸಮಾರಂಭದಲ್ಲಿ ಶ್ರೀ ಜೈ ದುರ್ಗಾ ಮೊಗೇರ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ದುರ್ಗಪ್ಪ ಸಂಕಯ್ಯ ಮೊಗೇರ, ಉಪಾಧ್ಯಕ್ಷರಾದ ಶ್ರೀ ಗೋಪಾಲ್ ನಾಗಪ್ಪ ಮೊಗೇರ, ಕಾರ್ಯದರ್ಶಿಯಾದ ಶ್ರೀ ದುರ್ಗಾದಾಸ್ ನಾಗಪ್ಪ ಮೊಗೇರ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಅದೇ ರೀತಿ ಶ್ರೀ ದುರ್ಗಾ ಮೊಗೇರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಯಾದವ್ ವಿ ಮೊಗೇರ, ಉಪಾಧ್ಯಕ್ಷರಾದ ಶ್ರೀ ಬಾಬು ಗೋವಿಂದ್ ಮೊಗೇರ ಹಾಗೂ ನಿರ್ದೇಶಕರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.

ಶಿರಾಲಿ ಗ್ರಾಮ ಪಂಚಾಯತ್‌ನ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಭಾಸ್ಕರ್ ದೈಮನೆ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ತಿಮ್ಮಪ್ಪ ಹೊನ್ನಿಮನೆ, ಶ್ರೀ ಹನುಮಂತ ಮಂಜಪ್ಪ ನಾಯ್ಕ್, ಶ್ರೀ ನಾರಾಯಣ್ ದೈಮನೆ, ಶ್ರೀ ಅರವಿಂದ್ ಪೈ ಅವರು ಆಶೀರ್ವಚನ ನೀಡಿದರು. ಮಾರಿಜಾತ್ರಾ ಮಹೋತ್ಸವದ ಅಧ್ಯಕ್ಷರಾದ ಶ್ರೀ ರಾಮ ಮೊಗೇರ, ಮೊಗೇರ ಸಮಾಜದ ಅಧ್ಯಕ್ಷರಾದ ಶ್ರೀ ಅಣ್ಣಪ್ಪ ಮೊಗೇರ, ಅಳ್ವೇಕೋಡಿ ತೆಂಗಿನಗುAಡಿ ಪರ್ಶಿಯನ್ ಬೋಟ್ ಯೂನಿಯನ್ ಅಧ್ಯಕ್ಷರಾದ ಶ್ರೀ ವೆಂಕಟ್ರಮಣ ಮೊಗೇರ, ಕಾರ್ಯದರ್ಶಿಯಾದ ಶ್ರೀ ಈಶ್ವರ್ ಮೊಗೇರ ಗೊರಟೆ ಹಾಗೂ ಊರಿನ ಸಮಸ್ತ ನಾಗರಿಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಈ ಹೊಸ ಕಟ್ಟಡವು ಸಮಾಜ ಸೇವೆ, ಒಗ್ಗಟ್ಟು ಹಾಗೂ ಜನೋಪಯೋಗಿ ಕಾರ್ಯಗಳಿಗೆ ಕೇಂದ್ರವಾಗಲಿ ಎಂದು ಎಲ್ಲರೂ ಹಾರೈಸಿದರು.

More Stories
ಹೆದ್ದಾರಿ ಅಪಘಾತಕ್ಕೆ ಸ್ಕೂಟಿ ಸವಾರ ಬಲಿ: ಅವೈಜ್ಞಾನಿಕ ವಿನ್ಯಾಸ ಆರೋಪಿಸಿ ಭಟ್ಕಳದಲ್ಲಿ ಸಾರ್ವಜನಿಕರ ಆಕ್ರೋಶ, ಪ್ರತಿಭಟನೆ
ಲಂಡನ್ನಲ್ಲಿ ‘ಅಡ್ವಾನ್ಸ್ಡ್ ನಾಟಿಕಲ್ ಸೈನ್ಸ್’ ಕೋರ್ಸ್ ಯಶಸ್ವಿಯಾಗಿ ಪೂರ್ಣಗೊಳಿಸಿದ ಭಟ್ಕಳದ ಹೆಮ್ಮೆಯ ಯುವಕ ಪ್ರಜ್ವಲ್ ನಾಯ್ಕ
ಬೈಲೂರು ಕ್ಲಸ್ಟರ್ನ ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಮುಂಬೈನ ಅನಿರುದ್ಧ ಬಾಪು ಟ್ರಸ್ಟ್ನಿಂದ ಉಚಿತ ನೋಟ್ಬುಕ್ ವಿತರಣೆ