May 24, 2026

ಅಪ್ಸರಕೊಂಡದ ಕಡಲತೀರದಲ್ಲಿ ಶನಿವಾರ ರಾತ್ರಿ ಸಿಡಿಲು ಬಡಿದು ಓರ್ವ ಮೃತ ಪಟ್ಟು ಇರ್ವರಿಗೆ ಗಾಯ ಸಂಭವಿಸಿದ ಘಟನೆ ನಡೆದಿದೆ.

ಹೊನ್ನಾವರ : ಶನಿವಾರ ಸಂಜೆ ಸುರಿದ ಗುಡುಗು ಸಿಡಿಲಿನ ಭಾರಿ ಮಳೆ ಮತ್ತು ಗಾಳಿಗೆ ಅಪ್ಸರಕೊಂಡದ ಬೀಚಿನ ಹತ್ತಿರದಲ್ಲಿರುವ ಸಮುದ್ರದಲ್ಲಿ ಪಾತಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳುತ್ತಿರುವ ಸಮಯದಲ್ಲಿ ಸಿಡಿಲು ಬಡಿದು ಒರ್ವ ಮೃತ ಪಟ್ಟಿದ್ದು, ಇನ್ನುಳಿದ ಇರ್ವರಿಗೆ ಎಂದು ತಿಳಿದು ಬಂದಿದೆ. ಅಪ್ಸರಕೊಂಡದ ವಿನಾಯಕ ಖಾರ್ವಿ ಮೃತಪಟ್ಟ ವ್ಯಕ್ತಿ ಎಂದು ತಿಳಿದುಬಂದಿದೆ. ಪ್ರತಿದಿನದಂತೆ ಪಾತಿ ದೋಣಿಯಲ್ಲಿ ಮೀನುಗಾರಿಕೆ ನಡೆಸಿ ವಾಪಸ್ಸಾಗುತ್ತಿದ್ದಾಗ ಸಿಡಿಲು ಬಲಗೈ ಮತ್ತು ಕಾಲಿನ ಭಾಗಕ್ಕೆ ಸಿಡಿಲು ಬಡಿದಿದೆ. ಕೂಡಲೇ ಆಸ್ಪತ್ರೆ ಕರೆತಂದರೂ, ಮಾರ್ಗಮಧ್ಯೆಯೆ ಮೃತಪಟ್ಟಿದ್ದಾರೆ. ಗಾಯಗೊಂಡ ಇರ್ವರು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ ಪ್ರವೀಣ ಕರಾಂಡೆ, ಕಂದಾಯ ಇಲಾಖೆಯ ಅಧಿಕಾರಿ ವಿನಯ ಪಂಡಿತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮಂಕಿ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹ ಮರಣೊತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.

ಸಿಡಿಲು ಬಡಿದು ಮೃತಪಟ್ಟ ವ್ಯಕ್ತಿಗೆ ಅಂತಿಮ ನಮನ ಸಲ್ಲಿಸಿದ ಸಚಿವ ಮಂಕಾಳ ವೈದ್ಯ 

ಮರಣೊತ್ತರ ಪರೀಕ್ಷೆಗಾಗಿ ತಾಲೂಕ ಆಸ್ಪತ್ರೆಯ ಶವಗಾರದಲ್ಲಿರುವ ಪಾರ್ಥಿವ ಶರೀರ ದರ್ಶನ ಪಡೆಯಲು ರವಿವಾರ ಮುಂಜಾನೆ ಆಗಮಿಸಿದ ಮೀನುಗಾರಿಕೆ ಬಂದರು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಸ್ಥಳದಲ್ಲಿರುವ ಕುಟುಂಬಸ್ಥರವರಿಗೆ ಸಾತ್ವಂನ ತಿಳಿಸಿದರು. ಗಾಯಗೊಂಡವರ ಬಗ್ಗೆ ವೈದ್ಯರೊಂದಿಗೆ ಚರ್ಚೆ ನಡೆಸಿದರು. ಆಕಸ್ಮಿಕವಾಗಿ ಒಂದು ಅವಘಡ ಸಂಭವಿಸಿದೆ. ಸರ್ಕಾರದಿಂದ ಪರಿಹಾರ ಒದಗಿಸುವ ಜೊತೆ ವೈಯಕ್ತಿಕವಾಗಿ ನೆರವಾಗುವ ಭರವಸೆ ನೀಡಿದರು. ಮಕ್ಕಳ ವಿದ್ಯಾಭ್ಯಾಸಕ್ಕೂ ನೆರವಾಗುವ ಬಗ್ಗೆ ಇದೆ ವೇಳೆ ತಿಳಿಸಿದರು. ನೂರಾರು ಸಂಖ್ಯೆಯ ಸಾರ್ವಜನಿಕರು ವಿವಿಧ ಸಂಘಟನೆಯ ಪ್ರಮುಖರು ಅಂತಿಮ ನಮನ ಸಲ್ಲಿಸಿದರು.
ವರದಿ :ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!