ಭಟ್ಕಳ ತಾಲೂಕಿನ ಮುರಿನಕಟ್ಟೆ ಕಟ್ಟೆ ಧ್ವಂಸಗೊಳಿಸಿದ ಘಟನೆಯನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್ ಹಾಗೂ ಸಮಸ್ತ ಹಿಂದೂ ಪರಿವಾರದ ವತಿಯಿಂದ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ತಾಲೂಕು ಆಡಳಿತಕ್ಕೆ 48 ಗಂಟೆಯೊಳಗೆ ಮರುನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.

ಪಟ್ಟಣದ ಮುಡಭಟ್ಕಳದ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಭಟ್ಕಳದ ಮುಖಂಡ ರಾಮಕೃಷ್ಣ ನಾಯ್ಕ ಮಾತನಾಡಿ, ಮುರಿನಕಟ್ಟೆ ಅನಾದಿಕಾಲದಿಂದಲೂ ಧಾರ್ಮಿಕ ಸಂಪ್ರದಾಯದೊAದಿಗೆ ಬೆಸೆದುಕೊಂಡಿರುವ ಪವಿತ್ರ ಸ್ಥಳವಾಗಿದ್ದು, ಇಲ್ಲಿಂದ ಮಾರಿಯಮ್ಮನ ಹೊರೆ ಶಿರಸಿಯ ಮಾರಿಕಾಂಬಾ ದೇವಸ್ಥಾನಕ್ಕೆ ಸಾಗುವ ಸಂಪ್ರದಾಯ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ-66 ಅಗಲೀಕರಣದಿಂದ ಮೂಲ ಕಟ್ಟೆ ಇದ್ದ ಸ್ಥಳ ಕಾಮಗಾರಿಗೆ ಒಳಪಡುವ ಹಿನ್ನೆಲೆ ಪಕ್ಕದ ಜಾಗದಲ್ಲಿ ಹೊಸದಾಗಿ 10್ಠ10 ಅಳತೆಯ ಮುರಿನಕಟ್ಟೆ ನಿರ್ಮಿಸಲು ಕಳೆದ ಐದು ವರ್ಷಗಳಿಂದ ಪ್ರಯತ್ನ ನಡೆಯುತ್ತಿತ್ತು. ಮೇ 24ರಂದು ತಾಲೂಕು ಆಡಳಿತದ ಒಪ್ಪಿಗೆಯೊಂದಿಗೆ ಪೊಲೀಸ್ ಸಮ್ಮುಖದಲ್ಲಿ ಗ್ರಾಮಸ್ಥರು ಕಟ್ಟೆ ನಿರ್ಮಾಣ ಆರಂಭಿಸಿ ಪೂರ್ಣಗೊಳಿಸಿದ್ದರು ಎಂದು ತಿಳಿಸಿದರು.

ಅದೇ ದಿನ ಕೆಲ ದುಷ್ಕರ್ಮಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿ ಮುರಿನಕಟ್ಟೆಗೆ ಹಾನಿ ಉಂಟುಮಾಡಿದ್ದು, ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು. ಘಟನಾ ಸ್ಥಳದಲ್ಲಿ ಪೊಲೀಸರು ಇದ್ದರೂ ಕಟ್ಟೆ ಧ್ವಂಸವನ್ನು ತಡೆಯಲು ಸಾಧ್ಯವಾಗಿಲ್ಲ. ಈ ಸಂಬAಧ ಪ್ರಮುಖ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಘಟನೆಗೆ ಸಂಬAಧಿಸಿದAತೆ ಪೊಲೀಸ್ ಇಲಾಖೆ ನೀಡಿರುವ ಮಾಹಿತಿ ಕುರಿತು ಕೂಡ ಅಸಮಾಧಾನ ವ್ಯಕ್ತಪಡಿಸಿದ ಅವರು, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 48 ಗಂಟೆಯೊಳಗೆ ಧ್ವಂಸಗೊAಡ ಸ್ಥಳದಲ್ಲೇ ಮುರಿನಕಟ್ಟೆ ಮರುನಿರ್ಮಾಣ ಮಾಡಿಕೊಡಬೇಕು. ಇಲ್ಲವಾದರೆ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಮುಖಂಡರೊAದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಜಾಗರಣ ವೇದಿಕೆ ತಾಲೂಕು ಸಂಚಾಲಕ ಜಯಂತ ನಾಯ್ಕ, ಹಿಂದೂ ಮುಖಂಡ ಸುಬ್ರಾಯ ನಾಯ್ಕ, ಬಿಜೆಪಿ ತಾಲೂಕು ಕಾರ್ಯದರ್ಶಿ ಸುಬ್ರಾಯ ದೇವಾಡಿಗ, ಬಿಜೆಪಿ ಮುಖಂಡ ಭಾಸ್ಕರ ದೈವಿಮನೆ, ಸುರೇಶ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

More Stories
ಮುರಿನಕಟ್ಟೆ ಧ್ವಂಸ ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸಬೇಕು: ಕಾಗೇರಿ
ಮುರಿನಕಟ್ಟೆ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ; ಸಮಾಜದ ಶಾಂತಿ ಹಾಳು ಮಾಡಬೇಡಿ: ಕಾಂಗ್ರೆಸ್ ತಿರುಗೇಟು
ಹೊನ್ನಾವರದಲ್ಲಿ ಶಾಸಕ ದಿನಕರ ಶೆಟ್ಟಿ ಹೇಳಿಕೆಮೂರಿನಕಟ್ಟೆ ಪುನರ್ ನಿರ್ಮಾಣ ಶತಸಿದ್ಧ, ಹೋರಾಟ ಮುಂದುವರಿಯಲಿದೆ