ಕುಮಟಾ : ತಾಲ್ಲೂಕಿನ ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಂಸ್ಕೃತವನ್ನು ಆಯ್ದು ಅಭ್ಯಸಿಸಿ ಕಾಲೇಜು ವ್ಯಾಸಂಗವನ್ನು ಮಾಡುತ್ತಿರುವ ವಿನಾಯಕ ನಾರಾಯಣ ಪಟಗಾರ, ನಂದನ ಕಮಲಾಕರ ಪಟಗಾರ ಹಾಗೂ ಗಜೇಂದ್ರ ವಸಂತ ಪಟಗಾರರವರಿಗೆ ಹೆಸರಾಂತ ಪ್ರವೀಣ್ ಟೈಮ್ಸ್ ನಿಂದ ಖರೀದಿಸಿದ ಗುಣಮಟ್ಟದ ವಾಚುಗಳನ್ನು ಕಾರವಾರದ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದ ವಿಶ್ರಾಂತ ಡೀನ್ ಮತ್ತು ನಿರ್ದೇಶಕರಾಗಿರುವ ಡಾ. ಗಜಾನನ್ ನಾಯಕರವರ ಪತ್ನಿ ಅರ್ಚನಾ ನಾಯಕರವರು ಕೊಡುಗೆಯಾಗಿ ನೀಡಿದರು.

ಅವರ ಪರವಾಗಿ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದ ಕನ್ನಡ ಭಾರತಿ ಪ್ರಪಂಚದ ಸಂಚಾಲಕರಾದ ನಾಗನಲೆಯ ನಾರಾಯಣ ನಾಗು ನಾಯಕರವರು ವಿದ್ಯಾರ್ಥಿಗಳ ಮನೆಗೆ ಖುದ್ದಾಗಿ ತೆರಳಿ ವಾಚ್ ಗಳನ್ನು ವಿತರಿಸಿದರು. ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದೊಂದಿಗೆ ಜೊತೆಯಾಗಿ ಸಂಸ್ಕೃತ ವಿದ್ಯಾರ್ಥಿಗಳಿಗೆ ಒಂದಲ್ಲೊAದು ಕೊಡುಗೆಯನ್ನು ನೀಡುತ್ತಲೇ ಬಂದಿರುವ ಅರ್ಚನಾ ನಾಯಕರವರ ಸಂಸ್ಕೃತ ಹಾಗೂ ಸಂಸ್ಕೃತಿ ಪರವಾದ ಪ್ರೀತ್ಯಭಿಮಾನವನ್ನು ಪೀಠಾಧ್ಯಕ್ಷರಾದ ಬಿ.ಎನ್. ಗಾಂವಕರರವರು ಶ್ಲಾಘಿಸಿರುತ್ತಾರೆ.



About The Author


More Stories
ಹಿರೇಗುತ್ತಿಯಲ್ಲಿ 14 ವಯೋಮಾನದ ಬಾಲಕ-ಬಾಲಕಿಯರ ಇಲಾಖಾ ಕ್ರೀಡಾಕೂಟ
ಎನ್. ರಾಮು ಹಿರೇಗುತ್ತಿಗೆ ಒಲಿದ ‘ಇಂಡಿಯಾ ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್’
ಸಂಪನ್ನಗೊಂಡ ಮಿರ್ಜಾನ್ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ