ಕುಮಟಾ : ತಾಲ್ಲೂಕಿನ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾ ಪೀಠದಿಂದ ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯ ಸಂಸ್ಕೃತ ವಿದ್ಯಾರ್ಥಿಗಳಿಗೆ ಕುಮಟಾದ ಗೋವರ್ಧನ ಹೋಟೆಲ್ ನ ಮಾಲಿಕರಾದ ಗಣೇಶ ನಾಯಕರವರ ಪ್ರಾಯೋಜಕತ್ವದಲ್ಲಿನ ರೂ. 5220/- ಮೌಲ್ಯದ ನೋಟ್ ಬುಕ್ ಗಳನ್ನು ವಿತರಿಸಲಾಯಿತು.


ನೋಟ್ ಬುಕ್ ಗಳನ್ನು ವಿತರಿಸಿದ ಮಿರ್ಜಾನ್ – ಕೋಡಕಣಿಯ ಜನತಾ ವಿದ್ಯಾಲಯದ ಮುಖ್ಯಾಧ್ಯಪಕರಾದ ಐ.ವಿ.ಭಟ್ ರವರು ಸಂಸ್ಕೃತ ಭಾಷೆಯಾಗಿರದೇ, ಬದುಕಿನ ವಿಜ್ಞಾನವಾಗಿದ್ದು, ಸಂಸ್ಕೃತದ ಕಲಿಕೆಯಿಂದ ಇರುವ ಪ್ರಯೋಜನದ ಕುರಿತಂತೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರಲ್ಲದೇ, ಬರ್ಗಿ ಪ್ರೌಢ ಶಾಲೆಯಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗುವಂತೆ ಸಂಸ್ಕೃತ ಪರ ಕಾರ್ಯ ಚಟುವಟಿಕೆಗಳು ಮತ್ತು ಸಂಸ್ಕೃತ ವಿದ್ಯಾರ್ಥಿಗಳಿಗೆ ವಿಶೇಷವಾದ ಸೌಲಭ್ಯವನ್ನು ಒದಗಿಸುತ್ತಿರುವ ಕುರಿತಂತೆ ಶ್ಲಾಘಿಸಿದರು.

ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಗಾಂವ್ಕರ್ ಬರ್ಗಿಯವರು ತಮ್ಮ ಶಾಲೆಯಲ್ಲಿನ ಸಂಸ್ಕೃತ ವಿದ್ಯಾರ್ಥಿಗಳಿಗೆ ಸಂಸ್ಕೃತ ಕಲಿಕೆಗೆ ಪ್ರೋತ್ಸಾಹದಾಯಕವಾಗಿ ಗೋವರ್ಧನ ಹೋಟೆಲ್ ನ ಗಣೇಶರು ಕಳೆದ ವರ್ಷವೂ ನೀಡಿದ ಕೊಡುಗೆಯನ್ನು ಸ್ಮರಿಸಿ, ಅವರಿಗೆ ಅಭಿನಂದಿಸಿದರು.


More Stories
ಬರ್ಗಿಯ ಪಿಎಸ್ಐ ಸಾವಿತ್ರಿ- ಆನಂದರಿಗೆ ವಿದ್ಯಾಪೀಠದ ಗೌರವ
ಹಿರೇಗುತ್ತಿ ಹೈಸ್ಕೂಲ್ನಲ್ಲಿ ರಜಾ ಅವಧಿಯ ವಿಶೇಷ ಉಪನ್ಯಾಸ ಕರ್ಯಕ್ರಮ
ಬರ್ಗಿಯ ಪೂರ್ವ ಸಂಸ್ಕೃತ ವಿದ್ಯಾರ್ಥಿಗಳಿಗೆ ವಾಚ್ ನೀಡಿದ ಡಾ. ಗಜಾನನ್ ನಾಯಕ್ ಪತ್ನಿ