- ಬಿಸಿಎ ವಿಭಾಗದಲ್ಲಿ ವಿದ್ಯಾರ್ಥಿನಿಯರ ಅತ್ಯುನ್ನತ ಸಾಧನೆ: 100 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉನ್ನತ ಶ್ರೇಣಿ
ಭಟ್ಕಳ: ಕರ್ನಾಟಕ ವಿಶ್ವವಿದ್ಯಾಲಯವು ಕಳೆದ ಜೂನ್ ತಿಂಗಳಿನಲ್ಲಿ ಜರುಗಿಸಿದ 2025-26ನೇ ಸಾಲಿನ 6ನೇ ಸೆಮಿಸ್ಟರ್ ಪದವಿ ಪರೀಕ್ಷೆಯಲ್ಲಿ ಭಟ್ಕಳದ ಪ್ರತಿಷ್ಠಿತ ‘ಶ್ರೀ ಗುರು ಸುಧೀಂದ್ರ ಕಾಲೇಜು’ ಒಟ್ಟಾರೆ ಶೇಕಡಾ 97.17 ರಷ್ಟು ಅದ್ಭುತ ಫಲಿತಾಂಶ ದಾಖಲಿಸಿ ಮುನ್ನಡೆದಿದೆ.
ವಿಶೇಷವಾಗಿ ಕಾಲೇಜಿನ ಬಿಸಿಎ {BCA) ವಿಭಾಗದ ವಿದ್ಯಾರ್ಥಿನಿಯರು ಅತ್ಯುನ್ನತ ಅಂಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಸಾಧಕರ ವಿವರ ಇಲ್ಲಿದೆ:
ಗಗನಾ ವಿ. ನಾಯ್ಕ – 9.65 SGPA
ಶ್ರೇಯಾ ಪಿ. ನಾಯ್ಕ – 9.65 SSGPA
ಭಾವನಾ ಎಮ್. ಮೊಗೇರ – 9.63 SGPA
ಜ್ಯೋತಿ ಎನ್. ನಾಯ್ಕ – 9.48 SGPA
ಸದರಿ ಪರೀಕ್ಷೆಗೆ ಹಾಜರಾಗಿದ್ದ ಒಟ್ಟು ವಿದ್ಯಾರ್ಥಿಗಳಲ್ಲಿ 100ಕ್ಕೂ ಅಧಿಕ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ (ಆisಣiಟಿಛಿಣioಟಿ & ಈiಡಿsಣ ಅಟಚಿss) ತೇರ್ಗಡೆ ಹೊಂದುವ ಮೂಲಕ ಸಂಸ್ಥೆಯ ಗರಿಮೆಯನ್ನು ಹೆಚ್ಚಿಸಿದ್ದಾರೆ.




ವಿದ್ಯಾರ್ಥಿಗಳ ಈ ಸಾಲು-ಸಾಲು ಸಾಧನೆಗೆ ಭಟ್ಕಳ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುರೇಶ್ ವಿ. ನಾಯಕ್, ಆಡಳಿತ ಮಂಡಳಿಯ ಸರ್ವ ಸದಸ್ಯರು, ಕಾಲೇಜಿನ ಪ್ರಾಚಾರ್ಯರು, ಉಪ-ಪ್ರಾಚಾರ್ಯರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಅತ್ಯಂತ ಹರ್ಷ ವ್ಯಕ್ತಪಡಿಸಿ, ಸಾಧಕ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯಕ್ಕಾಗಿ ಹಾರೈಸಿದ್ದಾರೆ.
About The Author


More Stories
ಯುವಕರಲ್ಲಿ ಕ್ರೀಡಾ ಪ್ರೇಮ ಬೆಳೆಸಿಕೊಳ್ಳಬೇಕು: ರಾಜು ಮಂಜಪ್ಪ ನಾಯ್ಕ
ಅನಾಥವಾಗಿ ಕೊನೆಯುಸಿರೆಳೆದ ಭಿಕ್ಷುಕ: ಕುಟುಂಬಸ್ಥರು ಬಾರದ ಹಿನ್ನೆಲೆ ಸಮಾಜ ಸೇವಕರಿಂದ ಅಂತ್ಯಕ್ರಿಯೆ
ನಿನಾದ ಕಲ್ಚರಲ್ ಅಕಾಡೆಮಿಗೆ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ಪ್ರದಾನ