ಅಥಣಿ (ಬೆಳಗಾವಿ): ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ತಾಲೂಕು ಘಟಕದ ವತಿಯಿಂದ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಬಿ.ಎಚ್. ಜಮಾದಾರ್, ರಾಜ್ಯ ಸಂಚಾಲಕರಾದ ರೇಣುಕಾ ಹೊಸೂರ್ ಹಾಗೂ ತಾಲೂಕು ಅಧ್ಯಕ್ಷರಾದ ಪ್ರವೀಣ್ ನಾಯಿಕ್ ಅವರ ಹುಟ್ಟುಹಬ್ಬವನ್ನು ಶ್ರೀ ಶಾರದಾ ಬುದ್ಧಿಮಾಂದ್ಯ ವಸತಿ ಶಾಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಲೆಯ ಮಕ್ಕಳಿಗೆ ಸಿಹಿ ತಿಂಡಿ ಹಾಗೂ ಹಣ್ಣು-ಹಂಪಲುಗಳನ್ನು ವಿತರಿಸುವ ಮೂಲಕ ನಾಯಕರ ಹುಟ್ಟುಹಬ್ಬಕ್ಕೆ ವಿಶೇಷ ಮೆರುಗು ನೀಡಲಾಯಿತು.
ಶಾಂತ ಶಿಂದೆ (ಸಂಸ್ಥಾಪಕರು, ಶ್ರೀ ಶಾರದಾ ಬುದ್ಧಿಮಾಂದ್ಯ ವಸತಿ ಶಾಲೆ ಹಾಗೂ ಉಪಾಧ್ಯಕ್ಷರು, ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆ): “ನಮ್ಮ ಸಂಸ್ಥೆಯ ರಾಜ್ಯಾಧ್ಯಕ್ಷರಿಗೆ, ರಾಜ್ಯ ಸಂಚಾಲಕರಿಗೆ ಹಾಗೂ ತಾಲೂಕು ಅಧ್ಯಕ್ಷರಿಗೆ ಭಗವಂತ ಆಯುಷ್ಯ, ಆರೋಗ್ಯ ಮತ್ತು ಐಶ್ವರ್ಯ ನೀಡಿ ಕಾಪಾಡಲಿ” ಎಂದು ಮನಪೂರ್ವಕವಾಗಿ ಶುಭ ಹಾರೈಸಿದರು.
ಎಂ. ಎಂ. ಶರ್ಮಾ (ಮಾಧ್ಯಮ ಘಟಕದ ಅಧ್ಯಕ್ಷರು): “ನಮ್ಮ ಸಂಸ್ಥೆಯ ಹಿರಿಯ ಮುಖಂಡರ ಹುಟ್ಟುಹಬ್ಬವನ್ನು ಬುದ್ಧಿಮಾಂದ್ಯ ಶಾಲೆಯ ಮುದ್ದು ಮಕ್ಕಳೊಂದಿಗೆ ಸಿಹಿ ಮತ್ತು ಹಣ್ಣುಗಳನ್ನು ಹಂಚುವ ಮೂಲಕ ಆಚರಿಸಿರುವುದು ಅತ್ಯಂತ ಸಂತೋಷ ತಂದಿದೆ” ಎಂದರು.
ಈ ಸುಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಅನಿಲ್ ಭಾಮನೆ, ಶರಣಪ್ಪ ಶಿಂಧೆ, ಕಾರ್ಯದರ್ಶಿ ಅಮೋಲ್ ಚವಾಣ್, ಶಿವಾನಂದ ನಾವಿ, ಅಶೋಕ್ ಬಡಿಗೇರ್, ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ಭೋಸಲೆ, ಸರಸ್ವತಿ ನೇಮಗೌಡ, ರೇಷ್ಮಾ ತೇಲಿ, ಸಾವಿತ್ರಿ ಬಡಿಗೇರ್ ಹಾಗೂ ಶಾಲೆಯ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವರದಿ : ಮಹೇಶ ಶರ್ಮ

About The Author


More Stories
ಕಾಗವಾಡದಲ್ಲಿ ವಸತಿಗೆ ಅಲೆಯುತ್ತಿರುವ ಮಂಗಳಮುಖಿ: ತಕ್ಷಣದ ಪರಿಹಾರಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಸೂಚನೆ
ವಿದ್ಯಾರ್ಥಿ ಗೌತಮ್ ಅನುಮಾನಾಸ್ಪದ ಸಾವು: ಆರೋಪಿಗಳ ಬಂಧನಕ್ಕೆ ಹಾಗೂ ನಿಷ್ಪಕ್ಷಪಾತ ತನಿಖೆಗೆ ಆಗ್ರಹ
ಚಿಕ್ಕಬಳ್ಳಾಪುರ ಅಗ್ನಿಶಾಮಕ ಇಲಾಖೆಯ ಸಮಯಪ್ರಜ್ಞೆ: ಆಳವಾದ ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಸಿಬ್ಬಂದಿ