August 22, 2026

ಹೊನ್ನಾವರ ಲಯನ್ಸ್ ಕ್ಲಬ್‌ನಲ್ಲಿ ಸ್ವಾತಂತ್ರ್ಯೋತ್ಸವ: ವಿದ್ಯಾರ್ಥಿಗಳಿಗೆ ಸ್ಪರ್ಧೆ, ವಿಜೇತರಿಗೆ ಬಹುಮಾನ ವಿತರಣೆ.

ಹೊನ್ನಾವರ: ತಾಲೂಕಿನ ಪ್ರತಿಷ್ಠಿತ ಸ್ವಯಂಸೇವಾ ಸಂಸ್ಥೆಯಾದ ಲಯನ್ಸ್ ಕ್ಲಬ್ ಆವರಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ಮಹೇಶ ನಾಯ್ಕ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಭಾಷಣ ಸ್ಪರ್ಧೆ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.

ದೇಶಭಕ್ತಿ ಗೀತೆ ಸ್ಪರ್ಧೆ:

  • ಪ್ರಥಮ: ಕಾವ್ಯ ನಾಯ್ಕ (ಆರೋಗ್ಯಮಾತಾ ಪ್ರೌಢಶಾಲೆ, ಗುಂಡಬಾಳ)
  • ದ್ವಿತೀಯ: ಸಾಮಿಯಾ (ಕೆ.ಪಿ.ಎಸ್. ಶಾಲೆ, ಮಂಕಿ)
  • ತೃತೀಯ: ನಿಧಿ ನಾಯ್ಕ (ಎಸ್.ಕೆ.ಪಿ. ಶಾಲೆ, ಅರೇಅಂಗಡಿ)

ಭಾಷಣ ಸ್ಪರ್ಧೆ:

  • ಪ್ರಥಮ: ಕೀರ್ತಿ ಆಚಾರಿ (ದಯಾನಂದ ಗುರುಕುಲ, ಕರ್ಕಿ)
  • ದ್ವಿತೀಯ: ಐಶ್ವರ್ಯ ಶೇಟ್ (ಜ್ಞಾನೇಶ್ವರಿ ಆಂಗ್ಲ ಮಾಧ್ಯಮ ಶಾಲೆ, ಕರ್ಕಿ)
  • ತೃತೀಯ (ಜಂಟಿ): ವಿಭಾ ಶ್ಯಾನಭಾಗ (ಜನತಾ ವಿದ್ಯಾಲಯ, ಕಾಸರಕೋಡ) ಹಾಗೂ ವೈಷ್ಣವಿ ಆಚಾರಿ (ಕೆ.ಪಿ.ಎಸ್. ಶಾಲೆ, ಮಂಕಿ)

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ನರಸಿಂಹ ಪಂಡಿತ್, ಖಜಾಂಚಿ ಎಂ.ವಿ. ಹೆಗಡೆ, ಕಾರ್ಯಕ್ರಮದ ಸಂಘಟಕರಾದ ಎಂ.ಜಿ. ನಾಯ್ಕ ಹಾಗೂ ಲಯನ್ಸ್ ಕ್ಲಬ್‌ನ ವಿವಿಧ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.             ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ

About The Author

error: Content is protected !!