August 23, 2026

ಮದಭಾವಿಯಲ್ಲಿ ಸಡಗರದ ಸ್ವಾತಂತ್ರ್ಯ ದಿನಾಚರಣೆ: ವೀರಯೋಧರಿಂದ ಜಂಟಿ ಧ್ವಜಾರೋಹಣ

ಅಥಣಿ (ಬೆಳಗಾವಿ): ತಾಲೂಕಿನ ಮದಭಾವಿ ಗ್ರಾಮದ ‘ಶ್ರೀ ಸ್ವಾಮಿ ವಿವೇಕಾನಂದ ಜ್ಞಾನ ವಿಕಾಸ ಕ್ರೀಡಾ ಸಂಸ್ಥೆ’ಯ ಆವರಣದಲ್ಲಿ ದೇಶದ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಡಗರ, ಸೌಹಾರ್ದತೆ ಹಾಗೂ ದೇಶಭಕ್ತಿಯಿಂದ ಆಚರಿಸಲಾಯಿತು.

ಸಂಸ್ಥೆಯ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಮಠಪತಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮಕ್ಕೆ ಸ್ಥಳೀಯ ಮುಖಂಡರಾದ ಅಸ್ಲಾಂ ಮುಲ್ಲಾ ಹಾಗೂ ಸಿದರಾಯ ತೋಡಕರ ಅವರು ದೇಶದ ಮಹನೀಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಭಾರತೀಯ ಸೇನೆಯ ಹೆಮ್ಮೆಯ ವೀರಯೋಧರಾದ ರೋಹನ ಪವಾರ ಹಾಗೂ ಸಹದೇವ ಜಾದವ ಅವರು ಜಂಟಿಯಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ರಾಷ್ಟ್ರಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಸಾಮಾಜಿಕ ಹೋರಾಟಗಾರ ಪ್ರವೀಣ ನಾಯಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ದೇಶ ಕಾಯುವ ಯೋಧರೊಂದಿಗೆ ಸಮಾಜ ಹಾಗೂ ಸಂಸ್ಥೆಗೆ ಸೇವೆ ಸಲ್ಲಿಸಿದ ಪ್ರಮುಖರನ್ನು ಈ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು:

  • ವೀರಯೋಧರು: ರೋಹನ ಪವಾರ ಹಾಗೂ ಸಹದೇವ ಜಾದವ
  • ನಿವೃತ್ತ ಶಿಕ್ಷಣ ತಜ್ಞರು: ಎಸ್.ಜಿ.ಎಸ್. ಪಿಯು ಕಾಲೇಜಿನ ನಿವೃತ್ತ ಉಪಪ್ರಾಚಾರ್ಯ ಪಿ.ಎಂ. ಬಡಿಗೇರ
  • ಸಂಸ್ಥೆಯ ಭದ್ರತಾ ಮುಖಂಡರು: ಯಾಸೀನ ನದಾಪ, ಅಶೋಕ ಬಡಿಗೇರ ಹಾಗೂ ರೋಹಿದಾಸ ಭಂಡಾರೆ

ಸಮಾರಂಭದಲ್ಲಿ ಪ್ರಮುಖರಾದ ಉಮೇಶ ಪಾಟೀಲ, ಧನ್ವಂತರಿ ಲೋಕಸಿರಿ ಆಸ್ಪತ್ರೆಯ ವೈದ್ಯರಾದ ಡಾ. ಮಹಾದೇವ ನಾಯಿಕ, ಭೀಮಗೌಡಾ ನಾಯಿಕ, ಸಂತೋಷ ನಾಯಿಕ, ಪರಗೊಂಡ ಮುಧೋಳ, ವಿಶ್ವನಾಥ ಭಂಡಾರೆ, ಅಪ್ಪಾಸಾಹೇಬ ಚೌಗಲಾ, ಸಿದರಾಯ ಭಂಡಾರೆ, ಹೊನ್ನಪ್ಪಾ ಪೂಜಾರಿ, ಸಿದ್ದು ಪಾಟೀಲ, ರಾವಸಾಬ ಮುಧೋಳ, ವಿಠಲ ಶಿಂದೆ, ನಾಯ್ಕುಬಾ ಶಿಂಧೆ, ಬಾಬಾಸಾಬ ಅಬ್ಯಂಕರ ಉಪಸ್ಥಿತರಿದ್ದರು.

ಹಾಗೆಯೇ ಶಿಕ್ಷಕರಾದ ವಿ.ಆರ್. ತಕತರಾವ, ಬಿ.ಆರ್. ಪಾಟೀಲ, ಸಚಿನ ಕಾಂಬಳೆ, ಪ್ರೇಮಕುಮಾರ ನಾಯಿಕ, ಆದಿತ್ಯ ನಾಯಿಕ, ನಾರಾಯಣ ಭಾಮನೆ, ಉದಯ ಅವಳೆ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ವರದಿ: ಮಹೇಶ್ ಶರ್ಮಾ.ಬೆಳಗಾವಿ

About The Author

error: Content is protected !!