ಚಿಕ್ಕೋಡಿ: ವಿಶೇಷ ತೀವ್ರ ಪರಿಷ್ಕರಣೆ (SIR) ಅಡಿಯಲ್ಲಿ ಮತದಾರರ ಪಟ್ಟಿಯಲ್ಲಿ ‘ದಾಖಲೆಗಳ ವ್ಯತ್ಯಾಸ’ (Logical Discrepancy) ಕಂಡುಬಂದಿದ್ದ ಕಾರಣ ಚಿಂಚಣಿ ಗ್ರಾಮದ ನಿವಾಸಿ ಬೀರಪ್ಪಾ ಸಿದ್ಧಪ್ಪಾ ಹೆಗಡೆ ಅವರಿಗೆ ವಿಚಾರಣೆಗೆ ಹಾಜರಾಗಲು ನಿಯಮಾನುಸಾರ ನೋಟಿಸ್ ನೀಡಲಾಗಿತ್ತು.
ಮನೆಗೆ ತೆರಳಿ ವಿಚಾರಣೆ ನಡೆಸಿದ ಅಧಿಕೃತ ಕ್ರಮ: ಸದರಿ ಮತದಾರರು ತೀವ್ರತರನಾದ ಅನಾರೋಗ್ಯ ಹಾಗೂ ಅಂಗವಿಕಲತೆಯಿಂದ ಬಳಲುತ್ತಿದ್ದಾರೆ ಎಂದು ಬಿಎಲ್‌ಒ ನೀಡಿದ ಮಾಹಿತಿ ಆಧರಿಸಿ, ಚಿಕ್ಕೋಡಿ ಉಪವಿಭಾಗೀಯ ದಂಡಾಧಿಕಾರಿ ಹಾಗೂ ಮತದಾರರ ನೋಂದಣಾಧಿಕಾರಿ ಗೌ. ಸುಭಾಷ ಎಸ್. ಸಂಪಗಾವಿ ಅವರು ಖುದ್ದಾಗಿ ಮತದಾರರ ಮನೆಗೇ ತೆರಳಿ ವಿಚಾರಣೆ ನಡೆಸಿದರು.
ಮತದಾರರ ಪಟ್ಟಿಯಲ್ಲಿ ಹೆಸರು ಮುಂದುವರಿಕೆ: ವಿಚಾರಣೆಯ ನಂತರ, ಮತದಾರರ ಹೆಸರನ್ನು ವಿಶೇಷ ತೀವ್ರ ಪರಿಷ್ಕರಣೆ (SIR) ಮತದಾರರ ಪಟ್ಟಿಯಲ್ಲಿ ಮುಂದುವರಿಸಲು ಉಪವಿಭಾಗಾಧಿಕಾರಿಗಳು ಸ್ಥಳದಲ್ಲೇ ಆದೇಶ ಹೊರಡಿಸಿದರು.
ಅಧಿಕಾರಿಗಳ ಈ ತಕ್ಷಣದ ಸ್ಪಂದನೆ ಹಾಗೂ ಕಾಳಜಿಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

About The Author


More Stories
ಕಾಗವಾಡದಲ್ಲಿ ವಸತಿಗೆ ಅಲೆಯುತ್ತಿರುವ ಮಂಗಳಮುಖಿ: ತಕ್ಷಣದ ಪರಿಹಾರಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಸೂಚನೆ
ವಿದ್ಯಾರ್ಥಿ ಗೌತಮ್ ಅನುಮಾನಾಸ್ಪದ ಸಾವು: ಆರೋಪಿಗಳ ಬಂಧನಕ್ಕೆ ಹಾಗೂ ನಿಷ್ಪಕ್ಷಪಾತ ತನಿಖೆಗೆ ಆಗ್ರಹ
ಚಿಕ್ಕಬಳ್ಳಾಪುರ ಅಗ್ನಿಶಾಮಕ ಇಲಾಖೆಯ ಸಮಯಪ್ರಜ್ಞೆ: ಆಳವಾದ ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಸಿಬ್ಬಂದಿ