ಭಟ್ಕಳ: ಅಧಿಕಾರಿಗಳು ಕೇವಲ ಆದೇಶ ಹೊರಡಿಸುವುದಷ್ಟೇ ಅಲ್ಲದೇ, ತಾವೇ ಖುದ್ದು ಕಾರ್ಯಕ್ಕಿಳಿದರೆ ಹೇಗೆ ಮಾದರಿಯಾಗಬಹುದು ಎಂಬುದನ್ನು ಬೈಲೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO) ಯಾದವ ನಾಯ್ಕ ತೋರಿಸಿಕೊಟ್ಟಿದ್ದಾರೆ.
ಬೈಲೂರು ಗ್ರಾಮ ಪಂಚಾಯತಿ ಆವರಣದಲ್ಲಿ ಕೈಗೊಂಡ ಸ್ವಚ್ಛತಾ ಅಭಿಯಾನದಲ್ಲಿ ಪಿಡಿಒ ಯಾದವ ನಾಯ್ಕ ಅವರು ಸ್ವತಃ ಕೈಯಲ್ಲಿ ಕಸಬರಿಕೆ ಹಿಡಿದು ಆವರಣವನ್ನು ಗುಡಿಸಿ, ಸಿಬ್ಬಂದಿ ಹಾಗೂ ಸ್ಥಳೀಯರೊಂದಿಗೆ ಸೇರಿ ಪ್ಲಾಸ್ಟಿಕ್ ಸೇರಿದಂತೆ ಸಂಗ್ರಹವಾಗಿದ್ದ ಒಣಕಸವನ್ನು ವಿಲೇವಾರಿ ಮಾಡಿದರು.

“ಪಂಚಾಯತಿಗೆ ಪ್ರತಿದಿನ ನೂರಾರು ಸಾರ್ವಜನಿಕರು ಆಗಮಿಸುವುದರಿಂದ ಆಹ್ಲಾದಕರ ವಾತಾವರಣ ಕಲ್ಪಿಸುವುದು ನಮ್ಮ ಕರ್ತವ್ಯ. ಸ್ವಚ್ಛತೆ ಎಂಬುದು ಕೇವಲ ಪೌರಕಾರ್ಮಿಕರು ಅಥವಾ ಸಿಬ್ಬಂದಿಯ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ನಾಗರಿಕನೂ ತನ್ನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು,” ಎಂದು ಪಿಡಿಒ ಅಭಿಪ್ರಾಯಪಟ್ಟರು.
ಗ್ರಾಮಸ್ಥರ ಮೆಚ್ಚುಗೆ: ಅಧಿಕಾರದಲ್ಲಿದ್ದರೂ ಯಾವುದೇ ಮುಜುಗರವಿಲ್ಲದೇ ಸ್ವತಃ ಕಸ ಗುಡಿಸಿ ಮಾದರಿಯಾದ ಅಧಿಕಾರಿಯ ಈ ನಡೆಯನ್ನು ಬೈಲೂರು ಗ್ರಾಮಸ್ಥರು ಹಾಗೂ ಸಾರ್ವಜನಿಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

About The Author


More Stories
ಬೋಲೆರೋಗೆ ಸ್ಕೂಟಿ ಡಿಕ್ಕಿ: ಕೀ, ₹15 ಸಾವಿರ ಕಸಿದು ಸವಾರ ಪರಾರಿ
ಭಟ್ಕಳದಲ್ಲಿ ಓಸಿ-ಮಟಕಾ ಜುಗಾರಾಟಕ್ಕೆ ಕಡಿವಾಣ: ಐವರ ವಿರುದ್ಧ ಪ್ರತ್ಯೇಕ ಪ್ರಕರಣ, ನಗದು ಜಪ್ತಿ
ಭಟ್ಕಳ ತಾಲೂಕು ಮಟ್ಟದ ಕ್ರೀಡಾಕೂಟ: ತೆಂಗಿನಗುಂಡಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಭರ್ಜರಿ ಸಾಧನೆ