ಗೋಕರ್ಣ: ಪೂರ್ಣಾರೋಗ್ಯ ಹಾಗೂ ಆತ್ಮಜ್ಞಾನ ಎರಡೂ ಬೇರೆಬೇರೆಯಲ್ಲ. ಯಾವುದು ಆರೋಗ್ಯಕ್ಕೆ ಹಿತವೋ ಅದು ಆತ್ಮಜ್ಞಾನಕ್ಕೂ ಪೂರಕ. ತುಪ್ಪವು ಆರೋಗ್ಯಕಾರಕವೂ ಹೌದು, ಆತ್ಮಜ್ಞಾನಕ್ಕೆ ಪೂರಕವೂ ಹೌದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ನೀಡಿ ಅವರು ಮಾತನಾಡಿದರು.
ತುಪ್ಪ ಹಾಗೂ ಆಧ್ಯಾತ್ಮಿಕ ಸಾಧನೆ:
ಹಠಯೋಗಪ್ರದೀಪಿಕೆಯಲ್ಲಿ ಯೋಗಸಾಧನೆಯ ಆರಂಭದಲ್ಲಿ ಹಾಲು ಮತ್ತು ತುಪ್ಪ ಸೇವಿಸಲು ಸೂಚಿಸಲಾಗಿದ್ದು, ಇದು ಸಾಧನೆಗೆ ಬೇಕಾದ ವಾತಾವರಣ ನಿರ್ಮಿಸುತ್ತದೆ.

ತುಪ್ಪದ ಸೇವನೆಯಿಂದ ಸತ್ವಗುಣ ವೃದ್ಧಿಯಾಗಿ ಏಕಾಗ್ರತೆ, ಧ್ಯಾನ ಹಾಗೂ ಮೋಕ್ಷದ ಹಾದಿ ಸುಲಭವಾಗುತ್ತದೆ.
ವೇದಗಳಲ್ಲಿ ಉಲ್ಲೇಖಿಸಿರುವಂತೆ ತುಪ್ಪವು ಅಗ್ನಿಯ ಇನ್ನೊಂದು ರೂಪ. ಅಗ್ನಿಯಂತೆ ತುಪ್ಪದಲ್ಲೂ ಊರ್ಧ್ವಗತಿಯ ಗುಣವಿದ್ದು, ಸಾಧಕನನ್ನು ಮೋಕ್ಷದೆಡೆಗೆ ಕರೆದೊಯ್ಯುತ್ತದೆ.
ತಂಪು ಹಾಗೂ ಬೆಳಕಿನ ಸಂಕೇತ: ಸಾಧನೆಯ ವೇಳೆಯಲ್ಲಿ ಜಾಗೃತವಾಗುವ ದೇಹದ ಅಗ್ನಿಗೆ ತಂಪು ಅಗತ್ಯ. ಪರಮಾತ್ಮನಲ್ಲಿ ಕೋಟಿ ಸೂರ್ಯರ ಬೆಳಕು ಹಾಗೂ ಕೋಟಿ ಚಂದ್ರರ ತಂಪು ಇರುವಂತೆಯೇ, ತುಪ್ಪದಲ್ಲೂ ಅಗ್ನಿವರ್ಧಕ ಹಾಗೂ ದೇಹಕ್ಕೆ ತಂಪು ನೀಡುವ ಗುಣಗಳು ಸಮ್ಮಿಳಿತಗೊಂಡಿವೆ.
ಕಾರ್ಯಕ್ರಮದಲ್ಲಿ ಖ್ಯಾತ ತಂತ್ರಿ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ, ಮಾಜಿ ಶಾಸಕ ಸುನಿಲ್ ಬಿ. ನಾಯ್ಕ್, ಜೆಡಿಎಸ್ ಜಿಲ್ಲಾಧ್ಯಕ್ಷ ಸೂರಜ್ ನಾಯ್ಕ್ ಸೋನಿ, ಉದ್ಯಮಿ ಪ್ರಭಾಕರ ಕಾರಣಗಿರಿ ಉಪಸ್ಥಿತರಿದ್ದು ಶ್ರೀಗಳ ಆಶೀರ್ವಾದ ಪಡೆದರು. ರಮಣ ಭಟ್ ಮುಂಬೈ ದಂಪತಿಗಳು ಗುರುಭಿಕ್ಷಾ ಸೇವೆ ಸಮರ್ಪಿಸಿದರೆ, ಕೇಶವ ಭಟ್ ದಂಪತಿಗಳು ದಿನಪ್ರಧಾನರಾಗಿ ಭಾಗವಹಿಸಿದ್ದರು.
“‘ಅನ್ನಂ ಬ್ರಹ್ಮ’ ಪ್ರವಚನ ಮಾಲಿಕೆಯು ಯಾರನ್ನೋ ಮೆಚ್ಚಿಸಲು ಮಾಡುತ್ತಿರುವುದಲ್ಲ. ಇಲ್ಲಿನ ವಿಚಾರಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ವೈಯಕ್ತಿಕವಾಗಿ ಸಾಧನೆ ಮಾಡಬೇಕು.” – ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು
About The Author


More Stories
ಪರಿವರ್ತನೆಯೇ ಅನ್ನಬ್ರಹ್ಮ ಚಾತುರ್ಮಾಸ್ಯದ ಮೂಲ ಉದ್ದೇಶ; ಖ್ಯಾತಿ-ಪ್ರಚಾರವಲ್ಲ: ರಾಘವೇಶ್ವರ ಶ್ರೀ
ಮಿಶ್ರ ತಳಿಯ ಹಾಲು ಅಹಿತ ಎಂದು ವಿಜ್ಞಾನವೂ ಒಪ್ಪಿದೆ: ರಾಘವೇಶ್ವರ ಶ್ರೀ
ಮಿಶ್ರ ತಳಿಯ ಹಾಲು ಅಹಿತ ಎಂದು ವಿಜ್ಞಾನವೂ ಒಪ್ಪಿದೆ: ರಾಘವೇಶ್ವರ ಶ್ರೀ